ಕರಾಚಿ: ಪರೋಟಾ ತಯಾರಕ ಬನ್ ಗಯಾ ಕ್ರಿಕೆಟರ್

Posted By:
Subscribe to Oneindia Kannada

ಕರಾಚಿ, ಜ.13: ಕರಾಚಿಯ ರೆಸ್ಟೋರೆಂಟ್‌ನಲ್ಲಿ ಪರೋಟಾ ತಯಾರಿಸುತ್ತಿದ್ದ ಹನಾನ್ ಖಾನ್ ಅವರ ಬಹುಕಾಲದ ಕನಸು ಈಡೇರಿದೆ. ಪಾಕಿಸ್ತಾನದ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಇಲೆವೆನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ.

ಜನವರಿ14, 15ರಂದು ಲಾಹೋರಿನ ಗಡಾಫಿ ಸ್ಟೇಡಿಯಂನಲ್ಲಿ ಮಲೇಷ್ಯಾ ಹಾಗೂ ಎನ್‌ಸಿಎ ಇಲೆವೆನ್ ನಡುವೆ ಎರಡು ಟ್ವೆಂಟಿ-20 ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳಿಗೆ ಖಾನ್ ಅವರು ಆಯ್ಕೆಯಾಗಿದ್ದಾರೆ.

Paratha maker Hanan Khan Achakzai to Play for Pakistan’s NCA XI side

ಈ ಬಗ್ಗೆ ಪ್ರತಿಕ್ರಿಯಿಸಿರುವ ಹನಾನ್, ನನಗೆ ಈ ಅವಕಾಶ ಲಭಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಲಾಹೋರ್‌ನಿಂದ ಮೊದಲ ದೂರವಾಣಿ ಕರೆ ಬಂದಾಗ ನಾನು ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದೆ. ನಂತರ ಮತ್ತೊಮ್ಮೆ ಕರೆ ಮಾಡಿ ನನ್ನ ಆಯ್ಕೆಯ ಬಗ್ಗೆ ಮಾಹಿತಿ ನೀಡಿದ್ದರು. ನನಗೆ ಮೊದಲಿಗೆ ನಂಬಿಕೆ ಬರಲಿಲ್ಲ. ನಂತರ ನಾನೇ ಖುದ್ದಾಗಿ ಕರೆ ಮಾಡಿ 2 ಟ್ವೆಂಟಿ-20 ಪಂದ್ಯಗಳಿಗೆ ಆಯ್ಕೆಯಾಗಿದ್ದನ್ನು ಖಚಿತಪಡಿಸಿಕೊಂಡೆ ಎಂದು ಎಡಗೈ ಬ್ಯಾಟ್ಸ್‌ಮನ್ ಖಾನ್ 'ಡಾನ್ ನ್ಯೂಸ್'ಗೆ ತಿಳಿಸಿದ್ದಾರೆ.

19ರ ಪ್ರಾಯದ ಖಾನ್ ದೇಶೀಯ ಗ್ರೇಡ್-2 ಪಂದ್ಯಗಳಲ್ಲಿ ಕ್ವೆಟ್ಟಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರತಿಭಾನ್ವೇಷಣೆಯಲ್ಲಿ ಪಾಕಿಸ್ತಾನದ ಸೂಪರ್ ಲೀಗ್‌ನ ಫ್ರಾಂಚೈಸಿ ಕ್ವೆಟ್ಟಾ ಗ್ಲಾಡಿಯೆಟರ್ಸ್‌ ತಂಡಕ್ಕೆ ಆಯ್ಕೆಯಾಗಿದ್ದರು. ಬಲೂಚಿಸ್ತಾನ ಪ್ರಾಂತ್ಯದ ಈ ಪ್ರತಿಭೆ ತನ್ನ ಪ್ರದೇಶದಿಂದ ಇನ್ನಷ್ಟು ಆಟಗಾರರಿಗೆ ಅವಕಾಶ ಸಿಗಬೇಕಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಗೆ ಧನ್ಯವಾದಗಳು ಎಂದು ಖಾನ್ ಹೇಳಿದ್ದಾರೆ.

ಪಾಕಿಸ್ತಾನದ ಚಹಾವಾಲ ಅರ್ಷದ್ ಖಾನ್ ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯತೆ ಗಳಿಸಿದ ನಂತರ, ಹನಾನ್ ಖಾನ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A paratha maker from the land of outrageous pace bowlers is set to play cricket for Pakistan side.Paratha maker Hanan Khan Achakzai to Play for Pakistan’s NCA XI side
Please Wait while comments are loading...