'ಮ್ಯಾಥ್ಯೂಸ್ ಜತೆ ಝನೈಬ್ ಸೆಲ್ಫಿ, ಪಾಕಿಸ್ತಾನಕ್ಕೆ ಗೆಲುವು'

Posted By:
Subscribe to Oneindia Kannada

ಲಂಡನ್, ಜೂಣ್ 13: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಶ್ವದ ಅಗ್ರಗಣ್ಯ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ ಹಾಗೂ ಎಬ್ ಎಬಿ ಡಿವಿಲಿಯರ್ಸ್ ಅವರು ಡಕ್ ಔಟ್ ಆಗಿದ್ದರ ರಹಸ್ಯವನ್ನು ಸಾಮಾಜಿಕ ಜಾಲ ತಾಣಗಳು ಬಹಿರಂಗ ಪಡಿಸಿದ್ದು ಗೊತ್ತಿರಬಹುದು. ಕಳಂಕ ಹೊತ್ತಿದ್ದ ಪಾಕಿಸ್ತಾನಿ ಜನರ್ಲಿಸ್ಟ್ ಝನೈಬ್ ಈಗ ಪಾಕಿಸ್ತಾನ ಪಾಲಿಗೆ ಸ್ಟಾರ್ ಆಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ

ಕೊಹ್ಲಿ ಅವರು ಶೂನ್ಯಕ್ಕೆ ಔಟಾಗುವುದಕ್ಕೆ ಈ ಪಾಕಿಸ್ತಾನ ಕ್ರೀಡಾ ವರದಿಗಾರ್ತಿ/ವಿಶ್ಲೇಷಕಿಯೇ ಕಾರಣ ಎಂದು ಸಾಮಾಜಿಕ ಜಾಲ ತಾಣಗಳು ತೀರ್ಪು ನೀಡಿವೆ. ಈ ಬಾರಿ ಶ್ರೀಲಂಕಾ ತಂಡದ ನಾಯಕ ಮ್ಯಾಥ್ಯೂಸ್ ಅವರೊಂದಿಗೆ ಸೆಲ್ಫಿ ತೆಗಿಸಿಕೊಂಡಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣರಾಗಿದ್ದಾರೆ.

ಕೊಹ್ಲಿ ಹಾಗೂ ಎಬಿಡಿ 'ಡಕ್ ಔಟ್' ರಹಸ್ಯ ಟ್ವಿಟ್ಟರಲ್ಲಿ ಬಹಿರಂಗ

ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಮೈದಾನಕ್ಕೆ ಬರುವ ದಾರಿಯಲ್ಲಿ ಪಾಕಿಸ್ತಾನದ ಪತ್ರಕರ್ತೆ ಝೈನಬ್ ಅಬ್ಬಾಸ್ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. ಈ ಚಿತ್ರವನ್ನು ಅಬ್ಬಾಸ್ ಅವರು ಟ್ವಿಟ್ಟರ್ ನಲ್ಲಿ ಹಾಕಿದ್ದರು. ಕೊಹ್ಲಿ ಶೂನ್ಯಕ್ಕೆ ಔಟಾದರು.

ಆದರೆ, ಈ ಬಾರಿ ಮ್ಯಾಥ್ಯೂಸ್ ಅವರು ಸೊನ್ನೆ ಸುತ್ತದಿದ್ದರೂ ಲಂಕಾ ತಂಡ ಸೋಲು ಕಂಡಿದೆ. ಇದೆಲ್ಲವೂ ಸೆಲ್ಫಿ ಮಹಿಮೆ ಎಂದು ಅನೇಕರು ಕೊಂಡಾಡಿದ್ದಾರೆ. ಪಾಕಿಸ್ತಾನದ 12ನೇ ಆಟಗಾರ್ತಿ ಎಂದು ಅಬ್ಬಾಸ್ ಅವರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಚೇಸ್ ಮಾಡಿ ಗೆದ್ದ ಪಾಕಿಸ್ತಾನ

ಚೇಸ್ ಮಾಡಿ ಗೆದ್ದ ಪಾಕಿಸ್ತಾನ

ಕಾರ್ಡಿಫ್‌ನಲ್ಲಿ ಸೋಮವಾರದಂದು ನಡೆದ ಶ್ರೀಲಂಕಾ- ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 3 ವಿಕೆಟ್‌ ಜಯ ಸಾಧಿಸಿದ ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸಿದೆ.

ಪಂದ್ಯ ಆರಂಭಕ್ಕೂ ಮುನ್ನ ಝೈನಬ್‌ ಅಬ್ಬಾಸ್‌ ಅವರು ಶ್ರೀಲಂಕಾ ತಂಡದ ನಾಯಕ ಮ್ಯಾಥ್ಯೂಸ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಪಾಕಿಸ್ತಾನದ ಪಾಲಿಗೆ ಲಕ್ಕಿ

ನನ್ನ ಕೆಲಸ ಆಯ್ತು, ನಾನು 12ನೇ ಆಟಗಾರ್ತಿಯಾಗಿದ್ದೇನೆ. ಪಾಕಿಸ್ತಾನಕ್ಕೆ ಗೆಲುವು ಸಿಕ್ಕಿದೆ ಎಂದ ಝೈನಬ್ ಅಬ್ಬಾಸ್.

ಮ್ಯಾಥ್ಯೂಸ್ ಏಕೆ ಶೂನ್ಯ ಸುತ್ತಿಲ್ಲ

ನನ್ನ ಜತೆ ಸೆಲ್ಫಿ ತೆಗೆಸಿಕೊಂಡ ಆಟಗಾರರು ಸೊನ್ನೆಗೆ ಔಟಾಗುತ್ತಾರೆ ಎಂಬ ಸುದ್ದಿ ಏಕೆ ನಿಜವಾಗಲಿಲ್ಲ. ಏಂಜೆಲೋ ಮ್ಯಾಥ್ಯೂಸ್ 39ರನ್ ಗಳಿಸಿದ್ದು ಹೇಗೆ ಎಂದು ಝೈನಬ್ ಅಬ್ಬಾಸ್ ಪ್ರಶ್ನಿಸಿದ್ದಾರೆ.

ಝೈನಬ್ ಅಬ್ಬಾಸ್ ಜತೆ ಒಂದು ಸೆಲ್ಫಿ

ಟೀಂ ಇಂಡಿಯಾ ತಂಡದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಜತೆ ದುನ್ಯಾ ನ್ಯೂಸ್ ನ ಕ್ರೀಡಾ ವಿಶ್ಲೇಷಕಿ ಝೈನಬ್ ಅಬ್ಬಾಸ್ ಜತೆ ಒಂದು ಸೆಲ್ಫಿ ತೆಗೆಸಿಕೊಂಡ ಬಳಿಕ ಭಾರಿ ಚರ್ಚೆಯಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistani journalist Zainab Abbas takes selfie with Angelo Mathews and again becomes talk of the town during the ICC Champions Trophy 2017.
Please Wait while comments are loading...