ಪಾಕಿಸ್ತಾನಿ ಕ್ರಿಕೆಟರ್ಸ್ ಗುಂಡಿಗೆ ನಡುಗಿಸಿದ ಭೂಕಂಪ!

Posted By:
Subscribe to Oneindia Kannada

ಕರಾಚಿ, ನವೆಂಬರ್ 14: ನ್ಯೂಜಿಲೆಂಡ್ ಕ್ರೈಸ್ಟ್‌ಚರ್ಚ್‌ನಲ್ಲಿ ಭಾನುವಾರದಂದು ಸಂಭವಿಸಿದ ಭಾರಿ ಭೂಕಂಪದಿಂದ ಪ್ರವಾಸಿ ಪಾಕಿಸ್ತಾನ ತಂಡ ನಡುಗಿದೆ. ಆದರೆ, ಆಟಗಾರರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ.

ರಿಕ್ಟರ್ ಮಾಪಕದಲ್ಲಿ 7.4 ಪ್ರಮಾಣದ ಭೂಕಂಪನವಾಗಿದೆ ಎಂದು ನಂತರ ತಿಳಿದು ಬಂದಿತು, ಹೋಟೆಲ್ ರೂಮಿನಲ್ಲಿದ್ದ ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಹಾಗೂ ಅಧಿಕಾರಿಗಳಿಗೆ ಭೂಕಂಪನದ ಅನುಭವವಾಯಿತು ಎಂದು ತಂಡದ ಮ್ಯಾನೇಜರ್ ವಾಸೀಂ ಬಾರಿ ಹೇಳಿದ್ದಾರೆ.[ಅಜರ್ ಈಗ ಪಾಕ್ ತಂಡದ ಬೌಲಿಂಗ್ ಕೋಚ್]

Pakistani cricketers shaken but safe after earthquake in New Zealand

ನಾವು ಅಭ್ಯಾಸ ಪಂದ್ಯ ನಿಗದಿಯಾಗಿದ್ದ ನಿಲ್ಸನ್‌ನ ಹೊಟೇಲ್‌ವೊಂದರಲ್ಲಿ ತಂಗಿದ್ದೆವು. ಭೂಕಂಪಿಸಿದಾಗ ಎಲ್ಲರೂ ಒಂದು ಕ್ಷಣ ಭಯಭೀತರಾದೆವು. ಅಬ್ಬಾ ಎಂಥಾ ಭಯಂಕರ ಅನುಭವ. ನಾವೀಗ ಹೊಟೇಲ್‌ನಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದೇವೆ ಎಂದು ಪಾಕಿಸ್ತಾನ ತಂಡದ ಮ್ಯಾನೇಜರ್ ವಾಸಿಂ ಬಾರಿ ತಿಳಿಸಿದ್ದಾರೆ.

ಹೊಟೇಲ್‌ ನ ಏಳನೇ ಮಹಡಿಯಲ್ಲಿದ್ದ ನಮ್ಮ ತಂಡವನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಹೊಟೇಲಿನ ಸಿಬ್ಬಂದಿ ತುಂಬಾ ನೆರವಾದರು ಎಂದು ವಾಸಿಂ ಹೇಳಿದ್ದಾರೆ.

ನವೆಂಬರ್ 17 ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಪ್ರಥಮ ಟೆಸ್ಟ್ ಪಂದ್ಯ ಆಡಲಿದೆ. ಹೊಟೇಲ್ ರೂಮ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಪಂದ್ಯ ವೀಕ್ಷಿಸುತ್ತಿದ್ದರು ಎಂದು ತಿಳಿದು ಬಂದಿದೆ. [ನ್ಯೂಜಿಲೆಂಡ್‌ನಲ್ಲಿ ಪ್ರಬಲ ಭೂಕಂಪ : ಅಪ್ಪಳಿಸಿದ ಸುನಾಮಿ]

2011ರ ಫೆಬ್ರವರಿಯಲ್ಲಿಕ್ರೈಸ್ಟ್ ಚರ್ಚ್ ಸಮೀಪ 6.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಘಟನೆಯಲ್ಲಿ 185 ಜನರು ಮೃತಪಟ್ಟಿದ್ದರು ಮತ್ತು ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Pakistani cricket players and officials were shaken on Sunday (November 13) when a 7.4 magnitude earthquake struck Christchurch and its adjoining areas with manager Wasim Bari describing it as a terrifying experience.
Please Wait while comments are loading...