ಹಠ ಕೈಬಿಟ್ಟ ಪಾಕ್ ಸರ್ಕಾರ, ಕ್ರಿಕೆಟ್ ತಂಡ ಭಾರತಕ್ಕೆ ಪ್ರಯಾಣ

By: ರಮೇಶ್ ಬಿ
Subscribe to Oneindia Kannada

ಇಸ್ಲಾಮಾಬಾದ್, ಮಾರ್ಚ್ 12: ಭಾರತದಲ್ಲಿ ನಡೆಯುತ್ತಿರುವ ಆರನೇ ಆವೃತ್ತಿ ವಿಶ್ವ ಟಿ-20 ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಆಡುತ್ತದೆಯೋ ಇಲ್ಲವೋ ಎಂಬ ಗೊಂದಲಗಳಿಗೆ ಕಡೆಗೂ ತೆರೆಬಿದ್ದಿದೆ. ಪಾಕ್ ಸರ್ಕಾರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಭಾರತಕ್ಕೆ ತೆರಳಲು ಅನುಮತಿ ನೀಡಿದೆ. ಪಾಕಿಸ್ತಾನ ತಂಡ ಭಾರತದತ್ತ ಪ್ರಯಾಣ ಬೆಳೆಸಿದೆ, ಸಂಜೆ ವೇಳೆಗೆ ಕೋಲ್ಕತ್ತಾ ತಲುಪುವ ನಿರೀಕ್ಷೆಯಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಬಿಸಿಸಿಐ, ಐಸಿಸಿ ಮತ್ತು ಪಾಕ್ ಸರ್ಕಾರದ ಮಧ್ಯೆ ನಡೆದ ಭದ್ರತೆಯ ಹೈಡ್ರಾಮ ಅಂತ್ಯಗೊಂಡಿದ್ದು, ಅಬುದಾಬಿ ಮಾರ್ಗವಾಗಿ ಭಾರತಕ್ಕೆ ಬರಲಿರುವ ಪಾಕಿಸ್ತಾನ ತಂಡವನ್ನು ಸ್ವಾಗತಿಸಲು ಕೋಲ್ಕತ್ತಾ ಸಜ್ಜಾಗಿದೆ.[ವಿಶ್ವ ಟಿ20: ಭಾರತ-ಪಾಕ್ ಪಂದ್ಯಕ್ಕೆ ತೀವ್ರ ವಿರೋಧ]

ಪಾಕಿಸ್ತಾನ ಗೃಹ ಕಾರ್ಯದರ್ಶಿ ನಿಸಾರ್ ಅಲಿ ಖಾನ್ ರೊಂದಿಗೆ ಸಭೆ ನಡೆದ ಪಾಕ್ ಕ್ರಿಕೆಟ್ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ನಜಾಮ್ ಸೇಠಿ ಭಾರತ ಪ್ರಯಾಣಕ್ಕೆ ಕೊನೆಗೆ ಒಪ್ಪಿಗೆ ಗ್ರೀನ್ ಸಿಗ್ನಲ್ ದೊರೆತಿದೆ ಎಂದಿದ್ದಾರೆ. [ವಿಶ್ವ ಟ್ವೆಂಟಿ20 2016 ಟೂರ್ನಿಗೆ ಫುಲ್ ಗೈಡ್]

ಶುಕ್ರವಾರ ಮಾರ್ಚ್ 11 ರಂದು ರಾತ್ರಿ ಪಾಕಿಸ್ತಾನ ಕ್ರಿಕೆಟ್ ತಂಡ ಅಬುದಾಬಿಗೆ ತೆರಳಿದ್ದು ಅಲ್ಲಿಂದ ಭಾರತಕ್ಕೆ ಪ್ರಯಾಣ ಬೆಳಸಲಿದೆ ಎಂದು ಪಾಕ್ ಕ್ರಿಕೆಟ್ ಕಾರ್ಯಕಾರಿ ಸಮಿತಿಯ ಮುಖ್ಯಸ್ಥ ನಜಾಮ್ ಸೇಥಿ ತಿಳಿಸಿದರು.

Pakistan team leaves for World T20 in India, set to land in Kolkata

ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಜತೆ ಮಾತುಕತೆ ನಡೆಸಿದ್ದು ಅಲ್ಲದೇ ಹೈಕಮಿಷನರ್ ಕೂಡ ಭಾರತದ ಗೃಹ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ್ದು ಭಾರೀ ಭದ್ರತೆಯನ್ನು ನೀಡುವುದಾಗಿ ಮಾತು ಕೊಟ್ಟಿದ್ದಾರೆಂದು ಸೇಥಿ ತಿಳಿಸಿದ್ದಾರೆ.[ಸೆಹ್ವಾಗ್ ಆಯ್ಕೆಯ ಫೇವರಿಟ್ 4 ತಂಡ?]

ಧರ್ಮಶಾಲಾದಲ್ಲಿ ಪಾಕಿಸ್ತಾನ ತಂಡಕ್ಕೆ ಸೂಕ್ತ ಭದ್ರತೆ ಇಲ್ಲವೆಂಬ ಕಾರಣಕ್ಕೆ ಮಾರ್ಚ್ 19 ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಪಾಕಿಸ್ತಾನ ಸರ್ಕಾರ ಹಠ ಹಿಡಿದಿತ್ತು ಜೊತೆಗೆ ಭದ್ರತೆಯನ್ನು ನೀಡುವ ಕುರಿತು ಲಿಖಿತ ರೂಪದಲ್ಲಿ ನೀಡಬೇಕೆಂದು ಆಗ್ರಹಿಸಿತ್ತು. ಅದರಂತೆಯೇ ಧರ್ಮಶಾಲಾ ಪಂದ್ಯವನ್ನು ಕೋಲ್ಕತ್ತಾಕ್ಕೆ ಶಿಫ್ಟ್ ಮಾಡಿದ್ದು ಇಂದು ಸಂಜೆ ವೇಳೆಗಾಲೇ ಪಾಕ್ ಕ್ರಿಕೆಟ್ ತಂಡ ಕೋಲ್ಕತ್ತಾಗೆ ಬಂದು ಇಳಿಯಲಿದೆ.[ಕೋಲ್ಕತಾಗೆ ಬಂದ್ರೆ ಈಡನ್‌ಗೆ 'ಗುದ್ದಲಿ' ಪೂಜೆ!]

ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದ್ದ ಭಾರತ ಪಾಕ್ ಭದ್ರತೆಯ ವಿಷಯದಲ್ಲಿ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವಣ ಪಂದ್ಯ ನಡೆಯುತ್ತಿದೆಯೋ ಇಲ್ಲವೋ ಎಂಬ ಆತಂಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿತ್ತು. ಆ ಎಲ್ಲಾ ಗೊಂದಲಗಳು ಅಂತ್ಯಗೊಂಡಿದ್ದು ಅಭಿಮಾನಿಗಳಲ್ಲಿ ಸಂತೋಷವನ್ನುಂಟು ಮಾಡಿದ್ದು ಮಾರ್ಚ್ 19 ರ ಹೈವೋಲ್ಟೆಜ್ ಪಂದ್ಯಕ್ಕೆ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಸಾಕ್ಷಿಯಾಗಲಿದ್ದು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 27-member Pakistan cricket contingent left for India to take part in the World Twenty20, finally ending days of uncertainty over their participation in the mega event.
Please Wait while comments are loading...