'ಮ್ಯಾಚ್ ಫಿಕ್ಸಿಂಗ್ ನಿಂದ ಪಾಕ್ ಫೈನಲ್ ಪ್ರವೇಶಿಸಿದೆ'

Posted By:
Subscribe to Oneindia Kannada

ನವದೆಹಲಿ, ಜೂನ್ 16 : ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿರುವ ಪಾಕಿಸ್ತಾನದ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಗಂಭೀರ ಆರೋಪ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡ ಸ್ವಂತ ಬಲದಲ್ಲಿ ಫೈನಲ್ ತಲುಪಿಲ್ಲ. ಪಾಕ್ ಫೈನಲ್ ತಲುಪಲು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಮೀರ್ ಸೊಹೈಲ್ ಪಾಕಿಸ್ತಾನ ಮಾಧ್ಯಮವೊಂದರ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

ಅಂಗ್ಲರನ್ನು ಬಗ್ಗು ಬಡಿದ ಪಾಕಿಸ್ತಾನ, ಚಾಂಪಿಯನ್ಸ್ ಟ್ರೋಫಿ ಫೈನಲಿಗೆ

Pakistan reached ICC Champions Trophy final via 'fixing', alleges Aamer Sohail

ಚೆನ್ನಾಗಿ ಆಡಿದರೆ ಅವರನ್ನು ಅಭಿನಂದಿಸುತ್ತೇವೆ. ಕಳಪೆ ಪ್ರದರ್ಶನ ನೀಡಿದರೆ ಟೀಕಿಸುತ್ತೇವೆ. ಇಂಗ್ಲೆಂಡ್‍ ತಂಡವನ್ನು ಪಾಕಿಸ್ತಾನ ಪರಾಭವಗೊಳಿಸಿದಾಗ ಪಾಕ್ ಕ್ರಿಕೆಟ್ ತಂಡ ಸಂತೋಷದಿಂದ ಕುಣಿದಾಡಿದ್ದು ಕಾಣಿಸಲಿಲ್ಲ. ಯಾಕೆಂದರೆ ಫೈನಲ್‍ ಗೆ ತಲುಪುತ್ತೇವೆ ಎಂದು ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು.

ಇದಕ್ಕಿಂತ ಹೆಚ್ಚೇನೂ ಹೇಳಲಾರೆ, ಇನ್ನುಳಿದದ್ದು ಪಂದ್ಯವನ್ನು ವೀಕ್ಷಿಸಿದ ಜನರೇ ಹೇಳುತ್ತಾರೆ ಎಂದು ಸೊಹೈಲ್ ಸಂದರ್ಶನದಲ್ಲಿ ಹೇಳಿದ್ದಾರೆ.

ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸುಲಭ ಗೆಲುವು ಪಡೆದು ಫೈನಲ್ ಗೆ ತಲುಪಿರುವ ಪಾಕಿಸ್ತಾನ ಜೂನ್ 18ರಂದು ಫೈನಲ್ ನಲ್ಲಿ ಭಾರತವನ್ನು ಎದುರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fixing claims seem to have returned to mar Pakistan cricket. Former captain Aamer Sohail has vaguely accused the team of making it to the final of the ICC Champions Trophy on the basis of "external forces". During an interview to a Pakistan news channel, the former opener has said that the team should not be flying too high, because if they're in the final, it's because "they were supposed to".
Please Wait while comments are loading...