ಪಾಕಿಸ್ತಾನಿ ಸ್ಪಿನ್ನರ್ ಯಾಸೀರ್ ಶಾಗೆ ನಿಷೇಧ

Posted By:
Subscribe to Oneindia Kannada

ದುಬೈ, ಡಿ.27: ಪಾಕಿಸ್ತಾನದ ಸ್ಪಿನ್ನರ್ ಯಾಸೀರ್ ಶಾ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಅವರಿಗೆ ನಿಷೇಧ ಹೇರಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾನುವಾರ ಪ್ರಕಟಿಸಿದೆ.

ಐಸಿಸಿ ಉದ್ದೀಪನ ವಿರೋಧಿ ನಿಯಮಕ್ಕೆ ಅನುಸಾರವಾಗಿ ಕ್ರಮ ಜರುಗಿಸಲಾಗಿದೆ. ಯಾಸೀರ್ ಅವರ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನವೆಂಬರ್ 13, 2015ರಂದು ಪರೀಕ್ಷೆಗೊಳಪಡಿಸಲಾಗಿತ್ತು. [ಶ್ರೀಲಂಕಾ ಕ್ರಿಕೆಟರ್ ಮೇಲೆ ಮಾದಕ ದ್ರವ್ಯ ಸೇವನೆ ಆರೋಪ]

Pakistan Leg-Spinner Yasir Shah Fails in Doping Test, Banned

ಅವರ ದೇಹದಲ್ಲಿ ಕ್ಲೊರ್ಟಲಿಡೋನ್ (chlortalidone) ನಿಷೇಧಿತ ಪದಾರ್ಥ ಇರುವುದು ಪತ್ತೆಯಾಗಿತ್ತು. ವಾಡಾ ನಿಯಂತ್ರಣ ಪಟ್ಟಿ ಸೆಕ್ಷನ್ 5 ಹಾಗೂ ಐಸಿಸಿ ನಿಯಮದ ಪ್ರಕಾರ ನಿಷೇಧಿತ ಪದಾರ್ಥ ಇರುವುದು ಪತ್ತೆಯಾದ್ದರಿಂದ ಯಾಸೀರ್ ಅವರಿಗೆ ಬೌಲಿಂಗ್ ಮಾಡದಂತೆ ನಿಷೇಧ ಹೇರಲಾಗಿದೆ.

ಇತ್ತೀಚೆಗೆ ಶ್ರೀಲಂಕಾದ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಶಾಲ್ ಪೆರೆರಾ ಅವರ ಮೇಲೆ ಮಾದಕ ದ್ರವ್ಯ ಸೇವಿಸಿದ ಆರೋಪ ಹೊರೆಸಲಾಗಿದೆ. ಡೋಪ್ ಟೆಸ್ಟ್ ನಲ್ಲಿ ಫೇಲ್ ಆಗಿರುವ ಪೆರೆರಾ ಈಗ ನ್ಯೂಜಿಲೆಂಡ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ತವರಿಗೆ ಮರಳಿದ್ದರು. ಶ್ರೀಲಂಕಾದ ವಿಕೆಟ್ ಕೀಪರ್ ಕುಶಾಲ್ ಪೆರೆರಾ ಅವರು ಮಾದಕ ದ್ರವ್ಯ ಸೇವಿಸಿದ್ದು ಎರಡನೇ ಪರೀಕ್ಷೆಯಲ್ಲೂ ದೃಢಪಟ್ಟಿತ್ತು. ಬಿ ಸ್ಯಾಂಪಲ್ ಪಾಸಿಟಿವ್ ಎಂದು ಬಂದಿರುವುದರಿಂದ ಪೆರೆರಾ ನಾಲ್ಕು ವರ್ಷಗಳ ನಿಷೇಧದ ಭೀತಿ ಎದುರಿಸುತ್ತಿದ್ದಾರೆ. ಈ ಹಿಂದೆ ಶ್ರೀಲಂಕಾದ ಅಂತಾರಾಷ್ಟ್ರೀಯ ಕ್ರಿಕೆಟರ್ ಉಪುಲ್ ತರಂಗಾ ಅವರು ಇದೇ ರೀತಿ ಸಿಕ್ಕಿಬಿದ್ದು, ಮೂರು ತಿಂಗಳ ನಿಷೇಧಕ್ಕೆ ಒಳಗಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan Leg-Spinner Yasir Shah Fails in Doping Test, Banned. Pakistan spinner Yasir Shah's test was conducted on November 13, 2015 and his sample contained a prohibited substance called chlortalidone.
Please Wait while comments are loading...