ವಿರಾಟ್ ಕೊಹ್ಲಿ ಮೇಲೆ ಪಾಕಿಸ್ತಾನಿಯರಿಂದ ಇದೆಂಥ ವಿಕೃತಿ!?

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 27: ಈ ಬಾರಿ ಪಾಕಿಸ್ತಾನದವರು ಫೋಟೋಶಾಪ್ ಬಳಸಿಕೊಂಡು ಭಾರತವನ್ನು, ಭಾರತ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿಯನ್ನು ಅವಮಾನ ಮಾಡಿದಿದ್ದಾರೆ.

ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಪಟ್ಟ ಸಿಕ್ಕಿದ ಖುಷಿಯನ್ನು ನೆತ್ತಿಗೆ ಏರಿಸಿಕೊಂಡ ಕೆಲ ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಹುಚ್ಚಾಟ ಮೆರೆದಿದ್ದಾರೆ. ಮಿಸ್ಬಾ ಉಲ್ ಹಕ್ ವಿರಾಟ್ ಕೊಹ್ಲಿ ಅವರನ್ನು ಕುಸ್ತಿ ಅಖಾಡದ ರೀತಿ ಭುಜದ ಮೇಲೆ ಹೊತ್ತು ನಿಂತಿರುವುದು, ಮಿಸ್ಬಾ ರಾಜನ ತರಹ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದರೆ ವಿರಾಟ್ ಸೇವಕನ ತರಹ ಬದಿಯಲ್ಲಿ ನಿಂತುಕೊಂಡಿದ್ದಾರೆ! [ಧೋನಿ ರುಂಡ ಹಿಡಿದು ಹುಚ್ಚಾಟವಾಡಿದ್ದವರಿಗೆ ಮಂಗಳಾರತಿ]


Must Read : ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ

ಹಿಂದೆ ಬಾಂಗ್ಲಾದೇಶದವರು ಬೌಲರ್ ರಹೀಮ್ ಕೈಯಲ್ಲಿ ಎಂ ಎಸ್ ಧೋನಿ ರುಂಡ ಹಿಡಿಸಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. ಇದೀಗ ಪಾಕಿಸ್ತಾನ ಅಂಥದ್ದೆ ಕೆಲಸ ಮಾಡಿದೆ. ಗಡಿ ವಿವಾದಕ್ಕೆ ಮಾತ್ರ ಸೀಮಿತವಾಗಿದ್ದ ವಿಕೃತಿ ಕ್ರೀಡೆಗೂ ಕಾಲಿಟ್ಟಿರುವುದು ದುರ್ದೈವ.[ಧೋನಿ ರುಂಡ ಕೈ ಯಲ್ಲಿ ಹಿಡಿದಿದ್ದ ಬಾಂಗ್ಲಾದೇಶಿಯರು]

ಇಂತಹ ಹತ್ತಾರು ಕುಚೋದ್ಯದ ಚಿತ್ರಗಳನ್ನು ಅಪ್ ಲೋಡ್ ಮಾಡುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿಚಿತ್ರ ಖುಷಿಪಡುತ್ತಿದ್ದಾರೆ.

ಥ್ಯಾಂಕ್ಸ್ ಮಿಸ್ಬಾ

ಥ್ಯಾಂಕ್ಸ್ ಮಿಸ್ಬಾ

ಥ್ಯಾಂಕ್ಸ್ ಮಿಸ್ಬಾ ಅಂಕಲ್ ಎಂದು ಟ್ವೀಟ್ ಮಾಡಿ, ಅದಕ್ಕೆ ಕೊಹ್ಲಿ ಸೆಕ್ಯೂರಿಟಿ ರೀತಿಯಲ್ಲಿ ನಿಂತಿರುವ ಎಡಿಟೆಡ್ ಫೋಟೋ ಹಾಕಲಾಗಿದೆ.

ಲೇಟೆಸ್ಟ್ ranking

ಲೇಟೆಸ್ಟ್ ranking

ಲೇಟೆಸ್ಟ್ ಐಸಿಸಿ ranking ಎಂದು ಟ್ವೀಟ್ ಮಾಡಿರುವ ವ್ಯಕ್ತಿ, ಅದಕ್ಕೆ ಮಿಸ್ಬಾ, ಕೊಹ್ಲಿಯನ್ನು ಎತ್ತಿಕೊಂಡು ಹೋಗುತ್ತಿರುವ ಚಿತ್ರ ಹಾಕಿದ್ದಾನೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿತ್ತು.

ನಂಬರ್ ಒನ್

ನಂಬರ್ ಒನ್

ನಂಬರ್ ಒನ್ ಟೀಂ ಪೇಚು ಮುಖ ಹಾಕುವಂತಾಯಿತು ಎಂದು ಟ್ವೀಟ್ ಮಾಡಿರುವ ಚಿತ್ರದಲ್ಲಿ ಕೊಹ್ಲಿ, ಜಡೇಜಾ ಸಪ್ಪೆಮುಖ ಹಾಕಿರುವ ಫೋಟೋ ಲಗತ್ತಿಸಲಾಗಿದೆ.

ಪಾಕ್ ಅರ್ಹ

ಪಾಕ್ ಅರ್ಹ

ಭಾರತಕ್ಕಿಂತ ಪಾಕ್ ಮೊದಲ ಸ್ಥಾನಕ್ಕೆ ಅರ್ಹ ಎನ್ನುವ ಟ್ವೀಟ್ ನಲ್ಲಿ wwf ಕಾದಾಟದ ಚಿತ್ರವನ್ನು ಹಾಕಿ ಕೆಣಕಲಾಗಿದೆ.

ಮಿಸ್ಬಾ ಕಿಂಗ್

ಮಿಸ್ಬಾ ಕಿಂಗ್

ಮಿಸ್ಬಾ ಕಿಂಗ್ ಎನ್ನುವ ಟ್ವೀಟ್ ನಲ್ಲಿ ಈ ಹಿಂದೆ ವಿರಾಟ್ ಕೊಹ್ಲಿಯ ಕೆಲವು ಚಿತ್ರಗಳನ್ನು ಬಳಸಿ ಅಣಕವಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some Pakistan fans went ahead and photoshopped cut outs of Misbah ul Haq and Virat Kohli to showcase the supremacy of the former over the latter. In some memes, Kohli is seen as second to the king and in one Kohli is seen being FU'd (wrestling move) by Misbah.
Please Wait while comments are loading...