ಕರಾಚಿ ಹೋಟೆಲ್ ಗೆ ಬೆಂಕಿ, ಕ್ರಿಕೆಟರ್ಸ್ ಗೆ ಗಾಯ

Posted By:
Subscribe to Oneindia Kannada

ಕರಾಚಿ, ಡಿಸೆಂಬರ್ 05:ಇಲ್ಲಿನ ಶರ್ಹಾಹ್-ಎ-ಫೈಸಲ್‍ನ ರೆಜೆಂಟ್ ಫ್ಲಾಜಾ 4 ಸ್ಟಾರ್ ಹೋಟೆಲಿನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಇದೇ ಹೋಟೆಲ್ ನಲ್ಲಿದ್ದ ಪಾಕಿಸ್ತಾನದ ಸ್ಥಳೀಯ ಲೀಗ್ ಆಟಗಾರರು ಗಾಯಗೊಂಡಿರುವ ಸುದ್ದಿ ಬಂದಿದೆ.

ಐಷಾರಾಮಿ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಆರಕ್ಕೂ ಅಧಿಕ ಮಹಡಿಗಳಿಗೆ ವ್ಯಾಪಿಸಿತ್ತು. ಈ ದುರ್ಘಟನೆಯಲ್ಲಿ 11ಕ್ಕೂ ಜನ ಮೃತಪಟ್ಟು, 75 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ ಕ್ರಿಕೆಟರ್ಸ್ ಇರುವುದು ದೃಢಪಟ್ಟಿದೆ.

Pakistan cricketers injured in hotel fire, match abandoned

ಬೆಂಕಿ ದುರಂತದಲ್ಲಿ ಹೋಟೆಲ್ ಕೊಠಡಿಗಳಲ್ಲಿದ್ದ ಸುಮಾರು 100 ಮಂದಿ ಅಪಾಯಕ್ಕೆ ಸಿಲುಕಿದ್ದರು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದರು.

ಕ್ವಾದ್ ಇ ಅಜಾಮ್ ಟ್ರೋಫಿ ಪಂದ್ಯವಾಡಲು ಬಂದಿದ್ದ ಯುನೈಟೆಡ್ ಬ್ಯಾಂಕ್ ಹಾಗೂ ಸುಯಿ ಸದರನ್ ಗ್ಯಾಸ್ ತಂಡದ ಆಟಗಾರರು ಈ ಹೋಟೆಲ್ ನಲ್ಲಿ ತಂಗಿದ್ದರು. ಕೆಲವರಿಗೆ ಬೆಂಕಿ ಅನಾಹುತದಲ್ಲಿ ಗಾಯವಾಗಿದ್ದರೆ, ಹಲವಾರು ಮಂದಿ ಆಘಾತಕ್ಕೊಳಗಾಗಿದ್ದಾರೆ ಹೀಗಾಗಿ ಪಂದ್ಯವನ್ನು ರದ್ದುಪಡಿಸಲಾಗಿದೆ ಎಂದು ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.


ಯಾಸಿರ್ ಮುರ್ತಜಾ ಅವರು ಕಿಟಕಿ ಗಾಜನ್ನು ಮುರಿದು ಎರಡನೇ ಮಹಡಿಯಿಂದ ಹಾರಿ ಬಚಾವಾಗಿದ್ದಾರೆ. ಈ ಸಾಹಸದಲ್ಲಿ ಕಾಲು ಮುರಿದುಕೊಂಡಿದ್ದಾರೆ. ಮತ್ತೊಬ್ಬ ಆಟಗಾರ ಹಮ್ಮದ್ ಅವರ ಕಾಲು ಉಳುಕಿಸಿಕೊಂಡಿದ್ದಾರೆ. ಪಂದ್ಯ ರದ್ದುಪಡಿಸಲು ಮನವಿ ಮಾಡಿಕೊಂಡ ಯುನೈಟೆಡ್ ತಂಡ ಈಗ ಲೀಗ್ ನಿಂದ ಹೊರಕ್ಕೆ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A crucial match of the Quaid-e-Azam Trophy was abandoned on Monday (December 5) after members of the competing teams in the tournament suffered trauma and injuries when a fire broke out in their hotel early morning.
Please Wait while comments are loading...