ಆಂಗ್ಲರ ಮೇಲೆ ಗೆದ್ದ ಪಾಕಿಸ್ತಾನದಿಂದ ವಿಶಿಷ್ಟ ಸಂಭ್ರಮಾಚರಣೆ

Posted By:
Subscribe to Oneindia Kannada

ಲಂಡನ್, ಜುಲೈ 18: ಲಾರ್ಡ್ಸ್ ಮೈದಾನದಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಐತಿಹಾಸಿಕ ಜಯ ದಾಖಲಿಸಿದೆ. ಮಿಸ್ಬಾ ಉಲ್ ಹಕ್ ಶತಕ, ಯಾಸಿರ್ ಶಾ ದಾಖಲೆ ಜತೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆದಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡ 75ರನ್ ಗಳ ಸೋಲು ಕಂಡಿದೆ. ಪಂದ್ಯ ಗೆದ್ದ ನಂತರ ಮಿಸ್ಬಾ ಅವರು ಕಮಾಂಡೊ ಮಾದರಿಯಲ್ಲಿ ತಂಡದ ಎಲ್ಲಾ ಸದಸ್ಯರನ್ನು ಸಾಲಾಗಿ ನಿಲ್ಲಿಸಿ ನಿರಂತರವಾಗಿ ಪುಶ್‌ ಅಪ್ ನಡೆಸುವ ಮೂಲಕ ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡಿದರು. ಈ ಮೂಲಕ ಪಾಕಿಸ್ತಾನದ ಸೇನೆಗೆ ತಮ್ಮ ಗೌರವ ಸಲ್ಲಿಸಿದ್ದಾರೆ.

Watch: Pakistan cricketers doing push-ups to celebrate historic win Vs England at Lord's

ಆರ್ಮಿಗೆ ಸೆಲ್ಯೂಟ್ ಏಕೆ: ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುವ ಮೊದಲು ಪಾಕಿಸ್ತಾನ ತಂಡ ಆರ್ಮಿ ಬೂಟ್ ಕ್ಯಾಂಪ್‌ನಲ್ಲಿ ಭಾಗವಹಿಸಿತ್ತು. ಕಳಪೆ ಫಿಟ್‌ನೆಸ್‌ನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದ ಪಾಲ್ಗೊಂಡಿದ್ದ ಈ ಬೂಟ್ ಕ್ಯಾಂಪ್ ನಿಂದ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ನಾಯಕ ಮಿಸ್ಬಾ ನಂಬಿದ್ದಾರೆ.

ರವಿವಾರ ಇಲ್ಲಿ ನಾಲ್ಕನೆ ದಿನದಾಟದಲ್ಲೇ ಇಂಗ್ಲೆಂಡ್‌ನ್ನು ಮಣಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದ ಪಾಕ್ ಆಟಗಾರರು ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ನೇತೃತ್ವದಲ್ಲಿ ಮೈದಾನದ ಖ್ಯಾತ ಪೆವಿಲಿಯನ್‌ಗೆ ಸೆಲ್ಯೂಟ್ ಮಾಡಿದ ಬಳಿಕ ಪುಶ್‌ಅಪ್ ನಡೆಸಿ ಗೆಲುವಿನ ಸಂಭ್ರಮಾಚರಣೆಯನ್ನು ವಿಭಿನ್ನವಾಗಿ ಆಚರಿಸಿ ಗಮನ ಸೆಳೆಯಿತು.

42ರ ಹರೆಯದ ಮಿಸ್ಬಾ ಗುರುವಾರ ಟೆಸ್ಟ್‌ನ ಮೊದಲ ದಿನ ಶತಕ ತಲುಪಿದ ತಕ್ಷಣ 10 ಪುಶ್‌ಅಪ್ ನಡೆಸಿ ಶತಕದ ಸಂಭ್ರಮವನ್ನು ವ್ಯಕ್ತಪಡಿಸಿದ್ದರು.

283ರನ್ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 207ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.ಪಾಕಿಸ್ತಾನ ಪರ ಲೆಗ್ ಸ್ಪಿನ್ನರ್ ಯಾಸಿರ್ ಶಾ ಅವರು ಎರಡನೇ ಇನ್ನಿಂಗ್ಸ್ ನಲ್ಲಿ 69 ರನ್ನಿತ್ತು 4 ವಿಕೆಟ್ ಹಾಗೂ ಒಟ್ಟಾರೆ 141ರನ್ ಗಳಿಗೆ 10 ವಿಕೆಟ್ ಪಡೆದು ದಾಖಲೆ ಬರೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After defeating England at the historic Lord's Cricket Ground in the opening Test, Pakistan cricketers celebrated the victory in a unique style here on Sunday (July 18).
Please Wait while comments are loading...