ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ವಿರುದ್ಧ ಸೋಲು: ನಿವೃತ್ತಿಗೆ ಅಫ್ರಿದಿ ನಿರ್ಧಾರ

ಮೊಹಾಲಿ, ಮಾರ್ಚ್, 23: ವಿಶ್ವ ಕ್ರಿಕೆಟ್ ಲೋಕದಿಂದ ಮತ್ತೊಬ್ಬ ಆಟಗಾರ ನಿವೃತ್ತಿ ಪಡೆದುಕೊಳ್ಳುತ್ತಿದ್ದಾರೆ. ವಿಶ್ವಕಪ್ ಟಿ-20 ಕ್ರಿಕೆಟ್‌ ಟೂರ್ನಿಯ ಬಳಿಕ ಚುಟುಕು ಕ್ರಿಕೆಟ್‌ ಮಾದರಿಗೆ ವಿದಾಯ ಹೇಳುವುದಾಗಿ ಪಾಕಿಸ್ತಾನ ತಂಡದ ನಾಯಕ ಶಹೀದ್‌ ಅಫ್ರಿದಿ ಹೇಳಿದ್ದಾರೆ.

ಪಾಕಿಸ್ತಾನ ನ್ಯೂಜಿಲೆಂಡ್‌ ವಿರುದ್ಧ ಸೋತ ಬಳಿಕ ಮಾತನಾಡಿದ ಅಫ್ರಿದಿ ನಿವೃತ್ತಿ ವಿಷಯವನ್ನು ತಿಳಿಸಿದರು. 'ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯ(ಮಾರ್ಚ್ 25) ನನ್ನ ಕೊನೆಯ ಪಂದ್ಯವಾಗಲಿದೆ ಎಂದು ಹೇಳಿದರು.[ನಿವೃತ್ತಿ ಬಗ್ಗೆ ಎಬಿಡಿ ವಿಲಿಯರ್ಸ್ ಬಿಚ್ಚಿಟ್ಟ ಸತ್ಯವೇನು?]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

shahid afridi


ಜಗತ್ತುಕಂಡ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಅಫ್ರಿದಿಗೂ ಸ್ಥಾನವಿದೆ. 398 ಏಕದಿನ ಪಂದ್ಯದಲ್ಲಿ 8 ಸಾವಿರಕ್ಕೂ ಅಧಿಕ ರನ್ ಹಾಗೂ 395 ವಿಕೆಟ್ ಪಡೆದಿದ್ದಾರೆ. 27 ಟೆಸ್ಟ್ ಆಡಿ ಸಾವಿರದ ಏಳುನೂರಕ್ಕೂ ಅಧಿಕ ರನ್ ಹಾಗೂ 48 ವಿಕೆಟ್ ಪಡೆದಿದ್ದಾರೆ. 97 ಟಿ-20ಪಂದ್ಯಗಳನ್ನಾಡಿ ಸಾವಿರದ ಮುನ್ನೂರಕ್ಕೂ ಹೆಚ್ಚು ರನ್ ಹಾಗೂ 97 ವಿಕೆಟ್ ಕಿತ್ತ ಸಾಧನೆ ಅಫ್ರಿದಿ ಅವರ ಹೆಸರಿನಲ್ಲಿದೆ.[ನಿವೃತ್ತಿಯ ನಿಜ ಕಾರಣ ಪತ್ರದಲ್ಲಿ ಬಿಚ್ಚಿಟ್ಟ ಸೆಹ್ವಾಗ್]

ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕ್ ಕ್ರಿಕೆಟ್ ತಂಡದ ನಾಯಕತ್ವ ಬದಲಾವಣೆ ಮಾಡುತ್ತೇನೆ ಎಂದು ಹೇಳಿತ್ತು. ಟಿ-20 ಯಲ್ಲಿ ಭಾರತದ ವಿರುದ್ಧ ಪಾಕ್ ಸೋಲು ಕಂಡ ನಂತರ ಅಫ್ರಿದಿ ಸೇರಿದಂತೆ ಎಲ್ಲ ಆಟಗಾರರ ಮೇಲೆ ಪಾಕಿಸ್ತಾನದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X