ವಿಂಡೀಸ್ ವಿರುದ್ಧ ರೋಚಕ ಜಯ ದಾಖಲಿಸಿದ ಪಾಕಿಸ್ತಾನ

Posted By:
Subscribe to Oneindia Kannada

ದುಬೈ, ಅಕ್ಟೋಬರ್ 18: ವೆಸ್ಟ್‌ಇಂಡೀಸ್ ವಿರುದ್ಧದ ಹಗಲು-ರಾತ್ರಿ ಪ್ರಥಮ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಗೆದ್ದುಕೊಂಡಿದೆ. ಡರೆನ್ ಬ್ರಾವೊ ಅವರ ಪ್ರತಿರೋಧದ ಶತಕದ ನಡುವೆ ಪಾಕಿಸ್ತಾನ ತಂಡ 56 ರನ್‌ ಗಳ ಅಂತರದ ಜಯ ದಾಖಲಿಸಿದೆ.

ಪಾಕಿಸ್ತಾನ ತನ್ನ 400ನೇ ಟೆಸ್ಟ್ ಪಂದ್ಯವನ್ನು ಅತ್ಯಂತ ಸ್ಮರಣೀಯವಾಗಿ ಮುಕ್ತಾಯಗೊಳಿಸಿದೆ. ಸೋಮವಾರ ರಾತ್ರಿ ಕೊನೆಗೊಂಡ ಈ ಟೆಸ್ಟ್‌ನಲ್ಲಿ ಅಂತಿಮ ದಿನದಂದು 12 ಓವರ್‌ಗಳ ಆಟ ಬಾಕಿ ಇರುವಾಗಲೇ 2ನೇ ಇನಿಂಗ್ಸ್‌ನಲ್ಲಿ 289 ರನ್ನಿಗೆ ವಿಂಡೀಸ್ ಆಲೌಟಾಗಿ ಸೋಲೊಪ್ಪಿಕೊಂಡಿತು.

Pakistan beat West Indies by 56 runs in a dramatic day-night Test

ಬ್ರಾವೋ ಹೋರಾಟ: 346 ರನ್ ಗುರಿ ಪಡೆದಿದ್ದ ವಿಂಡೀಸ್‌ಗೆ ಒಂದು ಹಂತದಲ್ಲಿ 27 ಓವರ್‌ಗಳಲ್ಲಿ 83 ರನ್ ಗಳಿಸಬೇಕಾದ ಅಗತ್ಯವಿತ್ತು. 410 ನಿಮಿಷಗಳ ಕಾಲ ಕ್ರೀಸ್ ನಲ್ಲಿದ್ದ ಬ್ರಾವೊ ಅವರು 116 ರನ್(8ನೇ ಶತಕ, 10 ಬೌಂಡರಿ ) ಬಾರಿಸಿ ಗೆಲುವಿನ ಹಂತಕ್ಕೆ ತಂಡವನ್ನು ತಂದರ. ಆದರೆ, ಯಾಸಿರ್ ಷಾ ಹಿಡಿದ ಅದ್ಭುತ ಕ್ಯಾಚಿಗೆ ಬ್ರಾವೋ ಬಲಿಯಾಗುತ್ತಿದ್ದಂತೆ ವಿಂಡೀಸ್ ಆಸೆ ಕಮರಿತು. ಪಾಕಿಸ್ತಾನ ಪರ ವೇಗಿ ಮುಹಮ್ಮದ್ ಆಮಿರ್(3-63) ಹಾಗೂ ಯಾಸಿರ್ ಷಾ(2-113) ಐದು ವಿಕೆಟ್ ಹಂಚಿಕೊಂಡರು.

ಅಜೇಯ ತ್ರಿಶತಕ (302) ಬಾರಿಸಿದ ಪಾಕ್‌ನ ಅಝರ್ ಅಲಿ ಹಾಗೂ 49 ರನ್‌ಗೆ 8 ವಿಕೆಟ್ ಕಬಳಿಸಿದ ವಿಂಡೀಸ್ ಸ್ಪಿನ್ನರ್ ಬಿಶೂ ಹಗಲು-ರಾತ್ರಿ ಪಂದ್ಯದ ಗಮನ ಸೆಳೆದ ಆಟಗಾರರು.

Pakistan beat West Indies by 56 runs in a dramatic day-night Test

ಮೂರು ಟೆಸ್ಟ್ ಸರಣಿಯ ಮಿಕ್ಕ ಪಂದ್ಯಗಳು ಅಬುಧಾಬಿ (ಅಕ್ಟೋಬರ್ 21 ರಿಂದ 25) ಹಾಗೂ ಶಾರ್ಜಾ(ಅಕ್ಟೋಬರ್ 30 ರಿಂದ ನವೆಂಬರ್ 3)ದಲ್ಲಿ ನಡೆಯಲಿದೆ.(ಒನ್ಇಂಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Despite a fighting hundred by Darren Bravo Pakistan pulled off a tension-packed 56-run victory against West Indies in the first day-night Test in Dubai on Monday (Oct 17).
Please Wait while comments are loading...