ಕೊಹ್ಲಿ ಹೆಗಲೇರಬೇಕಿದ್ದ ಚಾಂಪಿಯನ್ 'ಗದೆ' ಪಾಕ್​ ಪಾಲಾಯ್ತು!

Written By: Ramesh
Subscribe to Oneindia Kannada

ಲಾಹೋರ್, ಸೆ.22 : ಪ್ರತಿ ವರ್ಷ ಐಸಿಸಿ ನೀಡುವ ಟೆಸ್ಟ್ ಚಾಂಪಿಯನ್ ಷಿಪ್ ಟ್ರೋಫಿ ಈ ಬಾರಿ ಭಾರತಕ್ಕೆ ಕೈತಪ್ಪಿದೆ.ಇದರಿಂದ ವಿರಾಟ್ ಕೊಹ್ಲಿ ಹೆಗಲು ಏರ ಬೇಕಿದ್ದ ಟೆಸ್ಟ್​​ ಕ್ರಿಕೆಟ್ ಚಾಂಪಿಯನ್ ಷಿಪ್ ಗದೆ ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಅವರು ಗದೆಯನ್ನು ಹೊತ್ತುಕೊಂಡರು.

ಲಾಹೋರ್ ನ ಗಡಾಫಿ ಮೈದಾನದಲ್ಲಿ ನಡೆದ ಟೆಸ್ಟ್ ಚಾಂಪಿಯನ್ ಷಿಪ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ಥಾನ ಟೆಸ್ಟ್​​​ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್​​ ಹಕ್​​​ ಗದೆ(ಪ್ರಶಸ್ತಿ)ಯನ್ನು ಸ್ವೀಕರಿಸಿದರು. ಐಸಿಸಿ ಮುಖ್ಯ ಕಾರ್ಯನಿರ್ವಹಕ ಡೇವಿಡ್ ರಿಚಾರ್ಡ್ ಸನ್ ಪ್ರಶಸ್ತಿ ಪ್ರಧಾನ ಮಾಡಿದರು. ಇದೇ ಮೊದಲ ಭಾರಿಗೆ ಪಾಕಿಸ್ತಾನಕ್ಕೆ ಈ ಗೌರವಕ್ಕೆ ಪಾತ್ರವಾಯಿತು.

Misbah-ul-Haq

ಸದ್ಯ ಟೆಸ್ಟ್​​ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಟೆಸ್ಟ್​​ ಚಾಂಪಿಯನ್​​ಷಿಪ್​​ ಪ್ರಶಸ್ತಿಯನ್ನು(ಗದೆ) ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೀಡುತ್ತದೆ. ಈ ಪ್ರಶಸ್ತಿಯನ್ನು 2003 ರಿಂದ ಐಸಿಸಿ ನೀಡುತ್ತಾ ಬಂದಿದೆ. ಕೆಲವೇ ದಿನಗಳ ಹಿಂದೆ ನಂಬರ್​​ 1 ಪಟ್ಟ ಅಲಂಕರಿಸಿದ್ದ ಪಾಕ್​​ ಗೆ ಈ ಗೌರವ ಸಿಕ್ಕಿದೆ.

ಭಾರತ ತಂಡ ಮಳೆಯ ಕಾರಣದಿಂದ ವೆಸ್ಟ್ ಇಂಡಿಸ್ ವಿರುದ್ಧ ಕೊನೆಯ ಪಂದ್ಯದವನ್ನು ಡ್ರಾ ಮಾಡಿಕೊಂಡ ಪರಿಣಾಮ ಮೊದಲ ಸ್ಥಾನದಿಂದ ಕೆಳಗೆ ಇಳಿಯ ಬೇಕಾಯಿತು. ಇನ್ನು ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಗೆದ್ದು ಮೊದಲ ಸ್ಥಾನ ಅಲಂಕರಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan captain Misbah-ul-Haq on Wednesday received the ICC Test Championship mace for leading the side to the top of the ICC Test Team Rankings for the first time since the current rankings system was introduced in 2003.
Please Wait while comments are loading...