ಸ್ಪಾಟ್ ಫಿಕ್ಸಿಂಗ್: ಮೊಹಮ್ಮದ್ ಇರ್ಫಾನ್ ಅಮಾನತು

Posted By:
Subscribe to Oneindia Kannada

ಲಾಹೋರ್, ಮಾರ್ಚ್ 14: ಪಾಕಿಸ್ತಾನ್ ಸೂಪರ್ ಲೀಗ್ ಸಮಯದ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಇರ್ಫಾನ್ ರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಮಾನತುಗೊಳಿಸಿದೆ.

ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಲ್ಲದೆ, ಬುಕ್ಕಿಗಳು ತಮ್ಮನ್ನು ಪಿಕ್ಸಿಂಗ್ ದಂಧೆಗಾಗಿ ಸಂಪರ್ಕಿಸಿದ ವಿ‌ಷಯನ್ನು ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ.

Paceman Mohammad Irfan has been suspended by the PCB

34 ವರ್ಷದ ಎಡಗೈ ಬೌಲರ್ ಮೊಹಮ್ಮದ್ ಇರ್ಫಾನ್ ಸದ್ಯಕ್ಕೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಇದುವರೆಗೂ 4 ಟೆಸ್ಟ್, 60 ಏಕದಿನ ಪಂದ್ಯ ಮತ್ತು 20 ಟಿ-20 ಆಡಿರುವ 7.1 ಅಡಿ ಉದ್ದದ ಇರ್ಫಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಟುಗಳಲ್ಲೇ ಅತ್ಯಂತ ಎತ್ತರದವರು ಎಂಬ ಖ್ಯಾತಿ ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Paceman Mohammad Irfan has been charged and suspended by the Pakistan Cricket Board (PCB) in a spot-fixing case.
Please Wait while comments are loading...