ಏಕೈಕ ಟೆಸ್ಟ್ : ಬಾಂಗ್ಲಾ ವಿರುದ್ಧ ಸುಲಭ ಜಯ ದಾಖಲಿಸಿದ ಭಾರತ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ13: ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲಲು 459 ರನ್ ಗುರಿ ಪಡೆದಿದ್ದಪ್ರವಾಸಿ ಬಾಂಗ್ಲಾದೇಶ ತಂಡ ಸೋಲು ಕಂಡಿದೆ. ಅಂತಿಮ ದಿನದಂದು ಎರಡನೇ ಇನ್ನಿಂಗ್ಸ್ ನಲ್ಲಿ 250 ರನ್ನಿಗೆ ಆಲೌಟ್ ಆಗುವ ಮೂಲಕ ಸುಲಭವಾಗಿ ಶರಣಾಗಿದೆ.

ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ನಾಲ್ಕು ವಿಕೆಟ್ ಕಿತ್ತರೆ, ಇಶಾಂತ್ ಶರ್ಮ ಎರಡು ವಿಕೆಟ್ ಕಬಳಿಸಿದರು. ಬಾಂಗ್ಲಾದೇಶದ ಪ್ರಮುಖ ಬ್ಯಾಟ್ಸ್ ಮನ್ ಗಳು ದಿನದ ಮೊದಲಾರ್ಧದಲ್ಲೇ ಪೆವಿಲಿಯನ್ ಸೇರಿದ್ದರು. ಮಹಮದುಲ್ಲಾ 64ರನ್ ಗಳಿಸಿ ಕೊಂಚ ಪ್ರತಿರೋಧ ಒಡ್ಡಿದರು.

ಉಳಿದಂತೆ ಸೌಮ್ಯ ಸರ್ಕಾರ್ 42ರನ್ ಗಳಿಸಿದ್ದು ಬಿಟ್ಟರೆ ಮೊಮಿನಲ್ ಹಕ್, ಶಕಿಬುಲ್, ನಾಯಕ ಮುಫ್ಫಿಕರ್ ರಹೀಂ 30ರನ್ ಗಡಿ ದಾಟಲಿಲ್ಲ. ಅಶ್ವಿನ್ ಹಾಗೂ ಜಡೇಜ ಸ್ಪಿನ್ ಮೋಡಿಗೆ ಸಿಲುಕಿದ ಬಾಂಗ್ಲಾದೇಶ ಪಂದ್ಯವನ್ನು 208ರನ್ ಗಳಿಂದ ಕಳೆದುಕೊಂಡಿದೆ.

Hyderabad Test, Day 5: Bangladesh face uphill task of saving game, India eye another win

ಸಂಕ್ಷಿಪ್ತ ಸ್ಕೋರ್
ಭಾರತ
ಮೊದಲ ಇನಿಂಗ್ಸ್​ನ 166 ಓವರ್​ಗಳಲ್ಲಿ 6 ವಿಕೆಟ್​ಗೆ 687ರನ್ ಗಳಿಸಿ ಡಿಕ್ಲೇರ್.
ಎರಡನೇ ಇನ್ನಿಂಗ್ಸ್: 29 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ಡಿಕ್ಲೇರ್
ಬಾಂಗ್ಲಾದೇಶ
ಮೊದಲ ಇನಿಂಗ್ಸ್​ನ 127.5 ಓವರ್​ಗಳಲ್ಲಿ 388ರನ್ನಿಗೆ ಆಲೌಟ್
ಎರಡನೇ ಇನ್ನಿಂಗ್ಸ್ : 100.3 ಓವರ್ ಗಳಲ್ಲಿ 250 ಆಲೌಟ್

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India beat Bangladesh by 208 on the final day of one-off Test against India here at Uppal Stadium, Hyderabad on Monday (Feb 13).
Please Wait while comments are loading...