ಇಂಡೋ-ಬಾಂಗ್ಲಾ ಟೆಸ್ಟ್: 459 ರನ್ ಗಳ ಟಾರ್ಗೆಟ್ ನೀಡಿದ ಭಾರತ

Written By: Ramesh
Subscribe to Oneindia Kannada

ಹೈದರಬಾದ್, ಫೆಬ್ರವರಿ. 12 : ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ತಂಡದ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 299 ರನ್ ಗಳ ಮುನ್ನಡೆ ಸಾಧಿಸಿದ್ದ ಭಾರತ 2ನೇ ಇನ್ನಿಂಗ್ಸ್ ನಲ್ಲಿ 158 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡು ಬಾಂಗ್ಲಾಕ್ಕೆ ಗೆಲ್ಲಲು 459 ರನ್ ಗಳ ಗುರಿ ನೀಡಿದೆ.

459 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 4ನೇ ದಿನದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿ ಮಾಡಿದೆ. ಶಕೀಬ್ ಅಲ್‌ ಹಸನ್ 21 ಮತ್ತು ಮಹಮ್ಮದುಲ್ಲಾ 9 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸೋಮವಾರ ಅಂತಿಮ ದಿನವಾಗಿದ್ದು ಭಾರತ ಗೆಲ್ಲಲು ಇನ್ನು 7 ವಿಕೆಟ್ ಗಳನ್ನು ಉರಿಳಿಸಬೇಕಿದೆ.

Hyderabad Test, Day 4: Bangladesh restricted to 388; India opt not to impose follow-on

ನಾಲ್ಕನೇ ದಿನ ಭಾನುವಾರ ಬಾಂಗ್ಲಾದೇಶ 388 ರನ್ ಗಳಿಗೆ ಸರ್ವ ಪತನ ಕಂಡಿದೆ. ಇದರಿಂದ ಭಾರತ 299 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ಬಾಂಗ್ಲಾ ಪರ ಮುಷ್ಫಿಕರ್ ರಹೀಮ್ 127 ರನ್ ಬಾರಿಸಿ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಐದನೇ ಶತಕ ಪೂರೈಸಿದರು. [2ನೇ ದಿನದಾಟ: ವಿರಾಟ್ ಕೊಹ್ಲಿ ದ್ವಿಶತಕ ನೆರವಿನಿಂದ 687/6 ಡಿಕ್ಲೇರ್]

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಮೊದಲ ಇನಿಂಗ್ಸ್‌ ನಲ್ಲಿ 6 ವಿಕೆಟ್ ಕಳೆದುಕೊಂಡು 687 ರನ್ ಗಳಿಗೆ ಡಿಕ್ಲೇರ್ಡ್ ಮಾಡಿಕೊಂಡಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಆರಂಭದಲ್ಲಿ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಮುಷ್ಫಿಕರ್ ರಹೀಮ್ ಮತ್ತು ಶಕೀಬ್ ಅಲ್‌ ಹಸನ್ ಭಾರತದ ಬೌಲರ್ ಗಳ ಬೆವರಿಳಿಸಿದರು. ಅಂತಿಮವಾಗಿ ಶಕೀಬ್ 82 ಮತ್ತು ರಹೀಮ್ 127 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಭಾರತ ಪ ಉಮೇಶ್ ಯಾದವ್ 83 ರನ್ ಗಳನ್ನು ನೀಡಿ 3 ಪಡೆದರೆ, ಅಶ್ವಿನ್ 98ಕ್ಕೆ 2, ಜಡೇಜಾ 70 2 ವಿಕೆಟ್ ಕಬಳಿಸಿದ್ದಾರೆ. ನಾಳೆ (ಸೋಮವಾರ) ಅಂತಿಮ ದಿನವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India bowlers bundled out Bangladesh for 388 in the first innings to take 299-run lead on day four of the one-off Test at Hyderabad on Sunday (Feb 12).
Please Wait while comments are loading...