ಯುವಿ ಸಿಡಿಸಿದ್ದ ಸತತ ಆರು ಸಿಕ್ಸರ್ ಗೆ ಇಂದಿಗೆ 9 ವರ್ಷ!

Written By: Ramesh
Subscribe to Oneindia Kannada

ಬೆಂಗಳೂರು, ಸೆ.19 : ಟೀಂ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಬಾರಿಸಿದ ಸತತ ಆರು ಸಿಕ್ಸರ್ ಗಳಿಗೆ ಇಂದಿಗೆ ಒಂಭತ್ತು ವರ್ಷಗಳು ತುಂಬಿವೆ.2007ರ ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 6 ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಎಲ್ಲರನ್ನೂ ಚಕಿತಗೊಳಿಸಿದ್ದರು.

2007ರ ಸೆಪ್ಟೆಂಬರ್ 19 ರಂದು ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್ ನಲ್ಲಿ ಸತತ ಆರು ಸಿಕ್ಸರ್ ಗಳನ್ನು ಸಿಡಿಸಿದ ದಾಖಲೆಗೆ ದಕ್ಷಿಣ ಆಫ್ರಿಕಾದ ಕಿಂಗ್ಸ್ ಮೀಡ್ ಮೈದಾನ ಸಾಕ್ಷಿಯಾಗಿತ್ತು.ಯುವಿಯ ಅಂದಿನ ಆ ರೋಚಕ ಆಟ ಇಂದಿಗೂ ಅಭಿಮಾನಿಗಳು ಮರೆತಿಲ್ಲ. [ಧೋನಿಗೆ ನನ್ನ ಕಾಲ್ ರಿಸೀವ್ ಮಾಡಲು ಟೈಂ ಇಲ್ಲ: ಯುವಿ]

yuvraj singh

ಫ್ಲಿಂಟಾಫ್ ಹಾಗೂ ಯುವಿ ನಡುವಿನ ಮಾತುಕತೆ ಬಳಿಕ 19ನೇ ಓವರ್ ಬೌಲಿಂಗ್ ಮಾಡಲು ಬಂದಿದ್ದ ಸ್ಟುವರ್ಟ್ ಬ್ರಾಡ್ ಗೆ ಸರಿಯಾಗಿ ತಳಿಸಿ ತಮ್ಮ ಕೋಪವನ್ನು ತೀರಿಸಿಕೊಂಡಿದ್ದರು. ಸ್ಟುವರ್ಟ್ ಬ್ರಾಡ್ ಅವರ ಓವರ್ ನಲ್ಲಿ 36 ರನ್ ಬಾರಿಸಿ ಕೇವಲ 12 ಎಸೆತಗಳಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದರು.

ಅದೇ ವರ್ಷದಲ್ಲಿಯೇ ಅಂತರಾಷ್ಟ್ರೀಯ ಟ್ವಂಟಿ-20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಅವರ ಬ್ಯಾಟಿಂಗ್ ಅಭಿಮಾನಿಗಳಲ್ಲಿ ಹೊಸ ಅನುಭವ ನೀಡಿತ್ತು. ಯುವರಾಜ್ ಬಾರಿಸಿದ್ದ ಸತತ ಆರು ಸಿಕ್ಸರ್ ನೆರವಿನಿಂದ ಭಾರತ ಅಂದು ಇಂಗ್ಲೆಂಡ್ ವಿರುದ್ಧ 18 ರನ್ ಗಳ ಜಯಭೇರಿ ಕಂಡಿತ್ತು.

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There have been various contributions from Yuvraj Singh to Indian cricket over the years since he made his debut back in 1999. But what will forever remain the top most is the six sixes he hit on September 19 nine years back at Kingsmead against England.
Please Wait while comments are loading...