ಭಾರತ ವಿರುದ್ದದ ಏಕದಿನ ಸರಣಿಗೆ ಕೋರೆ ಆಂಡರ್ಸನ್

Posted By:
Subscribe to Oneindia Kannada

ಬೆಂಗಳೂರು, ಸೆ.19: ಭಾರತ ವಿರುದ್ಧದ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ ಆಲ್ ರೌಂಡರ್ ಕೋರೆ ಆಂಡರ್ಸನ್ ಅವರನ್ನು ನ್ಯೂಜಿಲೆಂಡ್ ತಂಡ ಕರೆಸಿಕೊಂಡಿದೆ. ಟೆಸ್ಟ್ ಸರಣಿಗೆ ಆಯ್ಕೆಯಾದರೂ ಗಾಯಗೊಂಡಿರುವ ವೇಗಿ ಟಿಮ್ ಸೌಥಿ ಅವರಿಗೂ 15 ಸದಸ್ಯರ ಏಕದಿನ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಗ್ಯಾಲರಿ: ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್

ಬ್ಯಾಟ್ಸ್ ಮನ್ ಅಂಟೊನ್ ಡೆವ್ ಸಿಕ್, ಆಲ್ ರೌಂಡರ್ ಜಿಮ್ಮಿ ನೀಶಮ್, ವಿಕೆಟ್ ಕೀಪರ್ ಬಿ.ಜೆ ವಾಟ್ಲಿಂಗ್ ಅವರು ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. [ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

ಭಾರತದಲ್ಲಿ ನಡೆದ ವಿಶ್ವ ಟಿ20 ಸಮರದ ಸಂದರ್ಭದಲ್ಲಿ ಗಾಯಗೊಂಡಿದ್ದ ಕೋರೆ ಆಂಡರ್ಸನ್ ಅವರು ನಂತರ ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಗಾಯದ ಸಮಸ್ಯೆಯಿಂದ ಮುಕ್ತರಾಗಿರುವುದರಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಆಯ್ಕೆ ಸಮಿತಿ ಅಧ್ಯಕ್ಷ ಗಾವಿನ್ ಲಾರ್ಸನ್ ಹೇಳಿದ್ದಾರೆ. [ನಾಯಕ ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

ODI series against India Corey Anderson included in ODI squad

ಈ ನಡುವೆ ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಗಾಯದ ಸಮಸ್ಯೆಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದ ನ್ಯೂಜಿಲೆಂಡ್ ತಂಡದ ಆಲ್ ರೌಂಡರ್ ಜಿಮ್ಮಿ ನೀಶಾಮ್ 15 ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. [ಭಾರತ ವಿರುದ್ಧದ 3 ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ]

ಸೆ.22 ರಿಂದ ಅಕ್ಟೋಬರ್ 12 ರ ವರೆಗೆ ಮೂರು ಟೆಸ್ಟ್ ಸರಣಿ ಪಂದ್ಯಗಳು ನಡೆಯಲಿವೆ. ನಂತರ ಅಕ್ಟೋಬರ್ 19 ರಿಂದ ಅ.29 ರ ವರೆಗೆ 5 ಏಕದಿನ ಪಂದ್ಯಗಳನ್ನು ಭಾರತ ವಿರುದ್ಧ ಆಡಲಿದೆ.

ತಂಡ ಇಂತಿದೆ: ಕೇನ್ ವಿಲಿಯಮ್ಸನ್(ನಾಯಕ), ಕೋರೆ ಆಂಡರ್ಸನ್, ಡೌಗ್ ಬ್ರೆಸ್ ವೆಲ್, ಅಂಟೊನ್ ಡೆವ್ ಸಿಕ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಜೇಮ್ಸ್, ನೀಶಮ್, ಲೂಕ್ ರಾಂಚಿ, ಮಿಚೆಲ್ ಸಂಟ್ನರ್, ಈಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬಿಜೆ ವಾಟ್ಲಿಂಗ್ (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New Zealand on Monday recalled all-rounder Corey Anderson for the five-match ODI series against India. Pacer Tim Southee, who was ruled out of the Test series due to an injury, also found a place in the 15-member ODI squad.
Please Wait while comments are loading...