ವೇಗದ 250 ಟೆಸ್ಟ್ ವಿಕೆಟ್ ಗಳಿಕೆ: ದಾಖಲೆ ಬರೆದ ಅಶ್ವಿನ್

Subscribe to Oneindia Kannada

ಹೈದರಾಬಾದ್, ಫೆಬ್ರವರಿ 12: ಹೈದರಾಬಾದಿನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅತೀ ವೇಗವಾಗಿ 250 ಟೆಸ್ಟ್ ವಿಕೆಟ್ ಗಳನ್ನು ಪಡೆದ ದಾಖಲೆ ಅಶ್ವಿನ್ ಪಾಲಾಗಿದೆ.

ಹೈದರಾಬಾದ್ ಟೆಸ್ಟ್ ನ ನಾಲ್ಕನೇ ದಿನದ ಆಟದಲ್ಲಿ ಬಾಂಗ್ಲಾದೇಶದ ನಾಯಕ ಮುಫ್ಫಿಕರ್ ರೆಹಮಾನ್ ವಿಕೆಟ್ ಪಡೆಯುವುದರೊಂದಿಗೆ ಅವರು ಈ ಸಾಧನೆ ಮಾಡಿದ್ದಾರೆ. ಕೇವಲ 45 ಟೆಸ್ಟ್ ಗಳಲ್ಲಿ ಅಶ್ವಿನ್ 250 ವಿಕೆಟ್ ಪಡಿದ್ದಾರೆ. ಈ ಮೂಲಕ 1981ರಲ್ಲಿ ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಲಿಲ್ಲಿ 48 ಟೆಸ್ಟ್ ಗಳಿಂದ ಈ ಸಾಧನೆ ಮಾಡಿದ್ದರು. [ಹಾಂಕಾಂಗ್ ಟ್ವೆಂಟಿ-20 ಕ್ರಿಕೆಟ್ ಲೀಗ್‌ಗೆ ಯುಸೂಫ್ ಪಠಾಣ್ ಎಂಟ್ರಿ]

Now Ashwin is the fastest 250 wicket taker in the Test Cricket History

ಟೆಸ್ಟ್ ಕ್ರಿಕೆಟಿನಲ್ಲಿ ವೇಗವಾಗಿ 250 ವಿಕೆಟ್ ಪಡೆದ ಬೌಲರುಗಳೆಂದರೆ,

*ರವಿಚಂದ್ರನ್ ಅಶ್ವಿನ್ (ಭಾರತ) - 45 ಟೆಸ್ಟ್

*ಡೆನ್ನಿಸ್ ಲಿಲ್ಲಿ (ಆಸ್ಟ್ರೇಲಿಯಾ) - 48 ಟೆಸ್ಟ್

*ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ) - 49 ಟೆಸ್ಟ್

*ಅಲನ್ ಡೊನಾಲ್ಡ್ (ದಕ್ಷಿಣ ಆಫ್ರಿಕಾ) - 50 ಟೆಸ್ಟ್

*ವಾಕರ್ ಯೂನಿಸ್ (ಪಾಕಿಸ್ತಾನ) - 51 ಟೆಸ್ಟ್

*ಮುತ್ತಯ್ಯ ಮುರಳೀಧರನ್ (ಶ್ರೀ ಲಂಕಾ) - 51 ಟೆಸ್ಟ್

ಸದ್ಯ ಅಶ್ವಿನ್ ಇನ್ನೂ 17 ವಿಕೆಟ್ ಪಡೆದರೆ ಭಾರತದ 5ನೇ ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಸಾಲಿನಲ್ಲಿ ಮಿಂಚಲಿದ್ದಾರೆ. ಬಿಷನ್ ಸಿಂಗ್ ಬೇಡಿ 266 ಟೆಸ್ಟ್ ವಿಕೆಟುಗಳೊಂದಿಗೆ ಸದ್ಯ 5ನೇ ಸ್ಥಾನದಲ್ಲಿದ್ದಾರೆ.

2016ನೇ ವರ್ಷದಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡಾ ಆಗಿದ್ದು 72 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯ ರೇಸಿನಲ್ಲಿದ್ದಾರೆ. [ಇಂಡೋ-ಬಾಂಗ್ಲಾ ಟೆಸ್ಟ್: 299 ರನ್ ಗಳ ಮುನ್ನಡೆ ಸಾಧಿಸಿದ ಭಾರತ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's prominent spinner Ravichandran Ashwin becoming the fastest to reach 250 wickets in the International Test Cricket history. In India versus Bangladesh first test at Hyderabad, Ashwin reached the 250 land mark wickets in his 45th Test, three fewer than Australian bowler Dennis Lilee.
Please Wait while comments are loading...