ಫಾರ್ಮ್ ಕಳಕೊಂಡ ಗೇಲ್ ಬೆನ್ನಿಗೆ ನಿಂತವರು ಯಾರು?

Subscribe to Oneindia Kannada

ಬೆಂಗಳೂರು, ಏಪ್ರಿಲ್, 18: ಈ ಬಾರಿ ಐಪಿಎಲ್ ನಲ್ಲಿ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅಬ್ಬರ ಇನ್ನು ಕಂಡುಬಂದಿಲ್ಲ. ಆದರೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಗೇಲ್ ಬೆನ್ನಿಗೆ ನಿಂತಿದ್ದಾರೆ.

"ಗೇಲ್ ಬಗ್ಗೆ ನಾವು ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ. ಪ್ರಮುಖ ಪಂದ್ಯದಲ್ಲಿ ಶತಕ ದಾಖಲಿಸುವ ಶಕ್ತಿ ಅವರಿಗಿದೆ. ಉಳಿದ ಆಟಗಾರರ ಪ್ರದರ್ಶನವನ್ನು ಮೊದಲು ಪ್ರಶಂಸೆ ಮಾಡಲೇಬೇಕು" ಎಂದು ಡೆಲ್ಲಿ ವಿರುದ್ಧದ ಸೋಲಿನ ನಂತರ ವಿರಾಟ್ ಹೇಳಿದ್ದಾರೆ.[ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

ipl

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆರ್ ಸಿಬಿ ತಂಡ ಎರಡು ಪಂದ್ಯಗಳನ್ನು ಆಡಿದ್ದು ಆರಂಭಿಕ ಗೇಲ್ ಕ್ರಮವಾಗಿ 1 ಮತ್ತು ಶೂನ್ಯ ಸಂಪಾದನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ಟಿ-20 ಚಾಂಪಿಯನ್ ಆಗಿ ಹೊರಹೊಮ್ಮಿದ್ದರೂ ಕೊನೆಯ ಪಂದ್ಯಗಳಲ್ಲಿ ಗೇಲ್ ಎರಡಂಕಿ ಸಾಧನೆ ಮಾಡಲು ವಿಫಲರಾಗಿದ್ದರು.

"ಗೇಲ್ ವಿಫಲರಾದರೂ ಮೊದಲ ಪಂದ್ಯದಲ್ಲಿ ನಾವು 230 ರನ್ ಕಲೆಹಾಕಿದ್ದೇವು. ಗೇಲ್ ಸಹ ಸ್ಫೋಟಿಸಿದರೆ ಏನಾಗುತ್ತಿತ್ತು? ಕೊಂಚ ಯೋಚನೆ ಮಾಡಿ" ಎಂದು ವಿರಾಟ್ ಹೇಳಿದ್ದಾರೆ.[ವಿಡಿಯೋ: ಗೇಲ್‌ರೊಂದಿಗೆ ಇಂಜಿ ಹುಡುಗರ ಡ್ಯಾನ್ಸ್..ಡ್ಯಾನ್ಸ್]

"ಟಿ-20 ಮಾದರಿಯಲ್ಲಿ 17 ಶತಕ ದಾಖಲೆ ಮಾಡುವುದು ಸುಲಭದ ಮಾತಲ್ಲ. ಗೇಲ್ ಅದನ್ನು ಮಾಡಿ ತೋರಿಸಿದ್ದಾರೆ. ಗೇಲ್ ನಮ್ಮ ತಂಡದ ಪರವಾಗಿ ಆಡುತ್ತಿರುವುದೇ ಹೆಮ್ಮೆಯ ಸಂಗತಿ. ಮುಂದಿನ ಪಂದ್ಯಗಳಲ್ಲಿ ಅವರು ತಮ್ಮ ನೈಜ ಆಟಕ್ಕೆ ಮರಳಲಿದ್ದಾರೆ" ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) captain Virat Kohli today (April 18) said that Chris Gayle's indifferent form is not a cause of worry as he feels that the dashing Jamaican is just one knock away from a big score."I am sure he will come good at some stage of the tournament. Probably, he may get hundred for us when it's required the most. I am not too worried about Gayle, because the other guys are stepping up nicely.
Please Wait while comments are loading...