ಗಂಗೂಲಿ, ಬಿಸಿಸಿಐ ಅಧ್ಯಕ್ಷ ಹುದ್ದೆ ಬೇಡವೆನ್ನಲು ಕಾರಣವಿದೆ!

Posted By:
Subscribe to Oneindia Kannada

ಕೋಲ್ಕತಾ, ಮೇ 15: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನವನ್ನು ಶಶಾಂಖ್ ಮನೋಹರ್ ತೊರೆದ ಬಳಿಕ, ಹಲವಾರು ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದೆ. ಕಳೆದ ಕೆಲ ದಿನಗಳಲ್ಲಿ ಈ ಪಟ್ಟಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರು ಸೇರ್ಪಡೆಗೊಂಡಿದೆ. ಆದರೆ, 'ಹುದ್ದೆಗೆ ನಾನು ಅರ್ಹನಲ್ಲ' ಎಂದು ಗಂಗೂಲಿ ನಮ್ರವಾಗಿ ಹೇಳಿದ್ದಾರೆ ಕೂಡಾ. ಆದರೆ, ಕಾರಣ ಅಷ್ಟೇನಾ? ಮುಂದೆ ಓದಿ...

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

'ಬಿಸಿಸಿಐ ಅಧ್ಯಕ್ಷನಾಗುವ ಅರ್ಹತೆ ಸದ್ಯಕ್ಕೆ ನನಗಿಲ್ಲ. ನಾನು ಸದ್ಯಕ್ಕೆ ಅಧ್ಯಕ್ಷನಾಗುವ ಪ್ರಯತ್ನ ಪಡಲಾರೆ' ಎಂದು ಭಾರತದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ (ಸಿಎಬಿ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಹೇಳಿದ್ದು ನೆನಪಿರಬಹುದು. [ಗಂಗೂಲಿಗೆ ಚಿಂತೆ : ಪಂದ್ಯದ ವೇಳೆ ಕತ್ತಲಾದ ಈಡೆನ್ ಗಾರ್ಡನ್ಸ್]

ಆದರೆ, ಬಿಸಿಸಿಐ ಹುದ್ದೆಗೆ ಕೇವಲ ಅರ್ಹತೆಯೇ ಮಾನದಂಡವಾದರೆ, ರಾಜಕಾರಣಿಗಳು, ಉದ್ಯಮಿಗಳೆಲ್ಲರೂ ಕ್ರಿಕೆಟ್ ಆಡಳಿತ ಸಂಸ್ಥೆ ಬಾಸ್ ಆಗಲು ಹಾತೊರೆಯುತ್ತಿರಲಿಲ್ಲ. ಇತ್ತ ಬಿಸಿಸಿಐ ತೊರೆದು ಐಸಿಸಿಯ ಸ್ವತಂತ್ರ ಅಧ್ಯಕ್ಷರಾಗಿರುವ ಶಶಾಂಕ್ ಮನೋಹರ್ ಅವರ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡುವ ಹುಡುಕಾಟ ನಡೆದಿದೆ.

Not qualified to be BCCI president: Sourav Ganguly

ಗಂಗೂಲಿಗೆ ಅರ್ಹತೆ ಜತೆಗೆ ಅನುಭವ ಬೇಕಿದೆ: ಸೌರವ್ ಗಂಗೂಲಿ ಅವರು ಕನಿಷ್ಠ ಮೂರು ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ಹಾಜರಾಗಬೇಕಾಗುತ್ತದೆ. ಆಗ ಮಾತ್ರ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಗಮೋಹನ್ ದಾಲ್ಮಿಯಾರ ಹಠಾತ್ ನಿಧನದಿಂದ ತೆರವಾಗಿದ್ದ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

ಪ್ರತಿಷ್ಠಿತ ಹುದ್ದೆ ವಹಿಸಿಕೊಳ್ಳಲು ಸಾಕಷ್ಟು ಅನುಭವಿ ವ್ಯಕ್ತಿಗಳಿದ್ದಾರೆ. ನಾನು ಅಧ್ಯಕ್ಷ ಸ್ಥಾನದ ಮೇಲೆ ಆಸಕ್ತಿ ಹೊಂದಿಲ್ಲ ಎಂದಷ್ಟೇ ಹೇಳಿರುವ ಗಂಗೂಲಿ ಅವರು ಸದ್ಯಕ್ಕೆ ದಾಲ್ಮಿಯಾ ಅವರು ಬೆಂಗಾಲ್ ಕ್ರಿಕೆಟ್ ಉದ್ಧಾರಕ್ಕಾಗಿ ಕಂಡ ಕನಸುಗಳನ್ನು ಸಾಕಾರಗೊಳಿಸುವುದು ಗಂಗೂಲಿ ಉದ್ದೇಶವಾಗಿದೆ. [ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಮೂವರು ಪೈಪೋಟಿ, ಯಾರು ಇವರು?]

ಈಡೆನ್ ಗಾರ್ಡನ್ಸ್ ರಿಪೇರಿ, ವಿದ್ಯುತ್ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ವಾಹನ ನಿಲುಗಡೆ ಸಮಸ್ಯೆ ಹೀಗೆ ಮೂಲ ಸೌಕರ್ಯಗಳನ್ನೇ ಒದಗಿಸಲಾಗದ ಸಂಸ್ಥೆ ತೊರೆದು ಉನ್ನತ ಹುದ್ದೆಗೇರುವುದು ಗಂಗೂಲಿಗೆ ಬೇಡದ ವಿಚಾರ. ಹೀಗಾಗಿ, ಮೊದಲಿಗೆ ಬೆಂಗಾಲ್ ಕ್ರಿಕೆಟ್ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಿ ಅನುಭವ ಪಡೆದ ಮೇಲೆ ಬಿಸಿಸಿಐ ಬಾಸ್ ಆಗುವ ಯೋಚನೆ ಗಂಗೂಲಿ ಅವರಿಗಿದೆ. [ವಿಡಿಯೋ :ಈಡೆನ್ ಗಾರ್ಡನ್ಸ್ ನಲ್ಲಿ 'ಮಂಕಿ ಟ್ರಬಲ್']

ಇನ್ನೊಂದೆಡೆ ಅಧ್ಯಕ್ಷ ಸ್ಥಾನಕ್ಕಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಜಯ್ ಶಿರ್ಕೆ, ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಜಿ.ಗಂಗರಾಜು ಹಾಗೂ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಈ ಮೂವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ.(ಐಎಎನ್ ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India captain and incumbent Cricket Association of Bengal ( CAB ) president Sourav Ganguly said on Friday that he does not meet the qualification criteria required for the Indian cricket board's top job.
Please Wait while comments are loading...