ಗೇಲಿ ಮಾಡಿದವರಿಗೆ ತಕ್ಕ ಉತ್ತರ ನೀಡಿದ ಮೊಹಮ್ಮದ್ ಕೈಫ್

Posted By:
Subscribe to Oneindia Kannada

ನವದೆಹಲಿ, ಮೇ 19:ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ತಡೆ ಸಿಕ್ಕ ಸಂಭ್ರಮಾಚರಣೆಯನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ ಕ್ರಿಕೆಟರ್ ಕೈಫ್ ರನ್ನು ಗೇಲಿ ಮಾಡಿದ ಪ್ರಸಂಗ ನಡೆದಿದೆ.

ಆದರೆ, ಕಿಡಿಗೇಡಿಗಳಿಗೆ ಕೈಫ್ ತಕ್ಕ ಉತ್ತರ ನೀಡಿದ್ದು, ಟೀಕಾಕಾರರು ಬಾಯ್ಮುಚ್ಚುವಂತೆ ಮಾಡಿದ್ದಾರೆ.

Mohammad is my name: See how Kaif clean bowled a Pakistan troll Read more at: https://www.oneindia.com/sports/cricket/nobody-is-thekedaar-of-any-religion-mohammad-kaif-tells-troll-2439798.html

ಜಾತಿ, ಧರ್ಮ, ಮತ, ಪಂಥಗಳಿಗಿಂತ ದೇಶ ಮೊದಲು ಎಂಬ ಪಾಠ ಮಾಡಿದ್ದಾರೆ. ಕೈಫ್ ಅವರ ಸರಣಿ ಟ್ವೀಟ್ ಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಅವರ ಪರ ತೀರ್ಪು ಬಂದಿದ್ದಕ್ಕೆ ಇಡೀ ದೇಶವೇ ಸಂತಸಪಟ್ಟಿದೆ. ಇದೇ ಖುಷಿಯಲ್ಲಿ ಇಂಡಿಯಾಕ್ಕೆ ಶುಭವಾಗಲಿ, ಗೆಲುವು ಸಿಕ್ಕಿದೆ ಎಂಬರ್ಥದಲ್ಲಿ ಕೈಫ್ ಟ್ವೀಟ್ ಮಾಡಿದ್ದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು, ಕೈಫ್ ಅವರು ತಮ್ಮ ಹೆಸರಿನಲ್ಲಿ 'ಮೊಹಮ್ಮದ್' ಹೆಸರನ್ನು ಕಳಚಿ ನಂತರ ಟ್ವೀಟ್ ಮಾಡಿ ಎಂದಿದ್ದರು. ಸೆಹ್ವಾಗ್ ಅವರ ಟ್ವೀಟ್ ಗೂ ಆಕ್ಷೇಪಗಳು ಕೇಳಿ ಬಂದಿತ್ತು.

ಇದಕ್ಕೆ ಉತ್ತರ ನೀಡಿರುವ ಕೈಫ್, ದೇಶದಲ್ಲಿ ಅಸಹಿಷ್ಣುತೆ ಹರಡುವ ಮುನ್ನ ದೇಶ ಮೊದಲು ನಂತರ ಮಿಕ್ಕ ಎಲ್ಲಾ ವಿಚಾರ ಎಂಬುದನ್ನು ಕಾಣಿರಿ, ಯಾವುದೇ ಧರ್ಮಕ್ಕಾಗಲಿ, ಯಾವುದೇ ಹೆಸರಿಗಾಗಲಿ ಯಾರೂ ಪಾಳೆಗಾರರಿಲ್ಲ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When a troll attacked Mohammad Kaif for hailing international Court of Justice's verdict in the Kulbhushan Jadhav case, ‏the cricketer taught him a lesson in taking pride about one's country. Kaif's three-point tweet telling trolls that India comes showed why we love these cricketers so much.
Please Wait while comments are loading...