ಸಂಗಕ್ಕಾರನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡದಲ್ಲಿ ಒಬ್ಬ ಭಾರತೀಯ

Posted By:
Subscribe to Oneindia Kannada

ಬೆಂಗಳೂರು, ಜೂನ್ 28: ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ ಆಯ್ಕೆಯ ಸರ್ವಶ್ರೇಷ್ಠ ತಂಡದಲ್ಲಿ ಭಾರತದಿಂದ ಏಕೈಕ ಆಟಗಾರನಾಗಿ ಸಚಿನ್ ಇದ್ದರೆ, ಶ್ರೀಲಂಕಾದ ದಿಗ್ಗಜ ಕುಮಾರ್ ಸಂಗಕ್ಕಾರ ಅವರ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಸ್ಥಾನ ಪಡೆದುಕೊಂಡಿಲ್ಲ.

38 ವರ್ಷ ವಯಸ್ಸಿನ ಸಂಗಕ್ಕಾರ ಅವರ ಆಲ್ ಟೈಮ್ XIಗೆ ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್ ಮನ್ ಅರವಿಂದ ಡಿಸಿಲ್ವಾ ಅವರು ನಾಯಕರಾಗಿದ್ದಾರೆ. ವಿಡಿಯೋ ಮೂಲಕ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ಟ್ವಿಟ್ಟರ್ ಐಡಿ ಬಳಸಿ ಈ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. [ಮೆಕಲಮ್ ಆಯ್ಕೆಯ ಶ್ರೇಷ್ಠ ತಂಡದಲ್ಲಿ ಸಚಿನ್ ಗೆ ಸ್ಥಾನ]

No place for Sachin Tendulkar in Kumar Sangakkara's all-time XI; 1 Indian included

ಸಚಿನ್ ಆಯ್ಕೆ ಇಲ್ಲ: ಟೆಸ್ಟ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹತ್ತು ಹಲವು ದಾಖಲೆಗಳನ್ನು ಬರೆದಿರುವ ಸಚಿನ್ ಅವರು ಸಂಗಾಕ್ಕಾರ ಅವರ XIನಲ್ಲಿ ಸ್ಥಾನ ಪಡೆದಿಲ್ಲ. ಬದಲಿಗೆ ಸಮಕಾಲೀನ ದಿಗ್ಗಜರಾದ ಬ್ರಿಯಾನ್ ಲಾರಾ ಹಾಗೂ ರಿಕಿ ಪಾಂಟಿಂಗ್ ಅವರು ಸ್ಥಾನ ಪಡೆದಿದ್ದಾರೆ.

ದ್ರಾವಿಡ್ ಆಯ್ಕೆ: ಮ್ಯಾಥ್ಯೂ ಹೇಡನ್ ಅವರು ಆರಂಭಿಕರಾಗಿ ಕಣಕ್ಕಿಳಿಸಲಿದ್ದು, ಅವರ ಜೊತೆಗೆ ಭಾರತದಿಂದ ಏಕೈಕ ಆಟಗಾರನಾಗಿ ರಾಹುಲ್ ದ್ರಾವಿಡ್ ರನ್ನು ಆಯ್ಕೆ ಮಾಡಲಾಗಿದೆ. [ಐತಿಹಾಸಿಕ ದಾಖಲೆ ಸೃಷ್ಟಿಸಿದ ಕುಮಾರ್ ಸಂಗಕ್ಕಾರ]

ಒಟ್ಟಾರೆ, ಸಂಗಕ್ಕಾರ ತಂಡದಲ್ಲಿ 4 ಆಸ್ಟ್ರೇಲಿಯನ್ನರು, 3 ಶ್ರೀಲಂಕನ್ನರು, ಭಾರತ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನದಿಂದ ತಲಾ 1 ಆಟಗಾರದಿದ್ದಾರೆ.

ಕ್ರಿಕೆಟ್ ನ ಶ್ರೇಷ್ಠ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರೆನಿಸಿದ್ದ ಸಂಗಕ್ಕಾರ ಅವರು 134 ಟೆಸ್ಟ್, 404 ಏಕದಿನ ಕ್ರಿಕೆಟ್ ಹಾಗೂ 56 ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 27,000ರನ್ ಗಳು ಹಾಗು 63 ಸೆಂಚುರಿ (ಟೆಸ್ಟ್ 38, ಏಕದಿನದಲ್ಲಿ 25) ಗಳಿಸಿದ್ದಾರೆ. [ಸಂಗಕ್ಕಾರನಿಗೆ ಟೀಂ ಇಂಡಿಯಾದಿಂದ ಬಹುಪರಾಕ್]

ಕುಮಾರ್ ಸಂಗಕ್ಕಾರ ಅವರು ಆಲ್ ಟೈಮ್ XI (ಬ್ಯಾಟಿಂಗ್ ಕ್ರಮದಂತೆ)
1. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
2. ರಾಹುಲ್ ದ್ರಾವಿಡ್ (ಭಾರತ)
3. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
4.ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
5.ಅರವಿಂದ ಡಿಸಿಲ್ವಾ (ಶ್ರೀಲಂಕಾ, ನಾಯಕ)
6. ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
7. ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ, ವಿಕೆಟ್ ಕೀಪರ್)
8. ಶೇನ್ ವಾರ್ನ್ (ಆಸ್ಟ್ರೇಲಿಯಾ)
9. ಮುತ್ತಯ್ಯ ಮುರಳೀಧರನ್(ಶ್ರೀಲಂಕಾ)
10. ವಾಸೀಂ ಅಕ್ರಮ್ (ಪಾಕಿಸ್ತಾನ)
11. ಚಮಿಂಡಾ ವಾಸ್ (ಶ್ರೀಲಂಕಾ)
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Sri Lankan captain Kumar Sangakkara today (June 28) picked his all-time XI which featured only one Indian in Rahul Dravid.
Please Wait while comments are loading...