ವೇಳಾಪಟ್ಟಿಯಂತೆ ಭಾರತ-ನ್ಯೂಜಿಲೆಂಡ್ ಕ್ರಿಕೆಟ್ ಸರಣಿ ನಡೆಯುತ್ತೆ!

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್, 04 : ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಸರಣಿಯನ್ನು ಯಾವುದೇ ಕಾರಣಕ್ಕೆ ರದ್ದಾಗುವುದು ಬೇಡ ವೇಳಾಪಟ್ಟಿಯಂತೆ ನಡೆಯಲಿ ಎಂದು ನ್ಯಾಯಮೂರ್ತಿ ಆರ್.ಎಮ್ ಲೋಧ ಬಿಸಿಸಿಐಗೆ ಸೂಚನೆ ಕೊಟ್ಟಿದ್ದಾರೆ.

ಮಂಗಳವಾರ ಪ್ರತಿಕ್ರಿಯೇ ನೀಡಿರುವ ನ್ಯಾಯಮೂರ್ತಿ ಲೋಧ ಅವರು ಲೋಧ ಸಮಿತಿಯ ತೀರ್ಪನ್ನು ಬಿಸಿಸಿಐ ತಪ್ಪಾಗಿ ಅರ್ಥೈಹಿಸಿಕೊಂಡಿದೆ. ವಿವಿಧ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ಹಣ ಬಿಡುಗಡೆಯಾಗುವುದನ್ನು ಮುಟ್ಟುಗೋಲು ಮಾಡಿ ಎಂದು ಬ್ಯಾಂಕ್ ಗಳಿಗೆ ತಿಳಿಸಿದೆ ವಿನಃ ಬಿಸಿಸಿಐನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಮಾಡಿ ಎಂದು ಹೇಳಿಲ್ಲ ಎಂದರು.

Lodha

ಲೋಧ ಸಮಿತಿ ಹೇಳಿದ್ದೇನು?:ಸೆಪ್ಟೆಂಬರ್‌ 30ರಂದು ನಡೆದ ತುರ್ತು ಕಾರ್ಯಕಾರಿ ಸಮಿತಿಯ ಸಭೆ ಯಲ್ಲಿ ಬಿಸಿಸಿಐ ವಿವಿಧ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಅನುದಾನ ನೀಡುವ ತೀರ್ಮಾನ ಕೈಗೊಂಡಿದೆ. ಆ ಸಭೆಯಲ್ಲಿ ಸಮಿತಿಯ ಸೂಚನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.

ಹಾಗಾಗಿ ವಿವಿಧ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಬಿಡುಗಡೆಯಾಗುವುದನ್ನು ಮುಟ್ಟುಗೋಲು ಮಾಡಿ ಎಂದು ಬ್ಯಾಂಕ್ ಗಳಿಗೆ ತಿಳಿಸಿದೆ ಎಂದು ಲೋಧ ಸಮಿತಿ ಹೇಳಿದೆ.

ಇದನ್ನು ತಪ್ಪಾಗಿ ಗ್ರಹಿಸಿರುವ ಬಿಸಿಸಿಐ, ಅಂತರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿರುವ ವೇಳೆ ಬಿಸಿಸಿಐ ನ ಹಣದ ವಹಿವಾಟಿಗೆ ತಡೆ ಒಡ್ಡಿರುವುದರಿಂದ ಸಮಸ್ಯೆ ಉದ್ಬವವಾಗಿದೆ. ಹಣವೇ ಇಲ್ಲವೆಂದಾದರೆ ಪಂದ್ಯಾವಳಿಗಳನ್ನು ನಡೆಸುವುದಾದರೂ ಹೇಗೆ ಎಂದು ಬಿಸಿಸಿಐ ಮಂಡಳಿ ಭಾರತ ಮತ್ತು ನ್ಯೂಜಿಲೆಂಡ್ ಸರಣಿಯನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the BCCI threatened that it might cancel the series, justice RM Lodha on Tuesday (Oct 4) cleared the air over ongoing India-New Zealand series saying the matches will be going on as scheduled.
Please Wait while comments are loading...