ಆಸ್ಟ್ರೇಲಿಯಾದಲ್ಲಿ ಮುಂದಿನ ವಿಶ್ವ ಟಿ20 ಟೂರ್ನಮೆಂಟ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಏಪ್ರಿಲ್ 01: ಎರಡು ವರ್ಷಕ್ಕೊಮ್ಮೆ ನಡೆಯಬೇಕಿದ್ದ ವಿಶ್ವ ಟಿ20 ಕ್ರಿಕೆಟ್ ರೂಪುರೇಷೆಯನ್ನು ಆಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬದಲಾಯಿಸಿದೆ. ಇನ್ಮುಂದೆ ವಿಶ್ವ ಟಿ20 ನಾಲ್ಕು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ ಹಾಗಾಗಿ ಮುಂಬರುವ 2020 ರ 7ನೇ ಆವೃತ್ತಿಯ ವಿಶ್ವ ಟಿ20 ಕ್ರಿಕೆಟ್ ಟೂರ್ನಮೆಂಟ್ ನ್ನು ಆಸ್ಟ್ರೇಲಿಯಾ ಅತಿಥ್ಯ ವಹಿಸಿಕೊಳ್ಳಲಿದೆ.

ಯಶಸ್ವಿಯಲ್ಲಿ ಸಧ್ಯ ಭಾರತದಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ವಿಶ್ವ ಟಿ20 ಕ್ರಿಕೆಟ್ ಫೈನಲ್ ಪಂದ್ಯವಷ್ಟೇ ಬಾಕಿ ಇದ್ದು. ಏಪ್ರಿಲ್ 03 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯಲಿದ್ದು ಅಂದು ವಿಶ್ವ ಟಿಂಟಿ-20ಯ 6ನೇ ಟೂರ್ನಮೆಂಟ್ ಗೆ ತೆರೆ ಬೀಳಲಿದೆ.[ಭಾರತದ ಸೋಲಿಗೆ ಧೋನಿ ಕೊಟ್ಟ 5 ಕಾರಣಗಳು]

2007 ರ ವಿಶ್ವ ಟಿ-20 ಕ್ರಿಕೆಟ್ ಟೂರ್ನಮೆಂಟ್ ನ್ನು ಮೊದಲ ಬಾರಿಗೆ ಅತಿಥ್ಯ ವಹಿಸಿದ್ದ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿ ನಡೆಸಿಕೊಟ್ಟು ಜತೆಗೆ ಈ ವಿಶ್ವ ಮಿನಿ ಸಮರವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ದಕ್ಷಿಣ ಆಫ್ರಿಕಾಗೆ ಸಲ್ಲುತ್ತದೆ. ಆ ಚೊಚ್ಚಲ ವಿಶ್ವ ಟಿ20 ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು. [ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ]

Next T20 World Cup format Changed to be hosted in Australia in 2020

ವಿಶೇಷವೆನೆಂದರೆ ಈವರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಈ ಟೂರ್ನಮೆಂಟ್ ನ್ನು ಇನ್ಮುಂದೆ ಪ್ರತಿ 4 ವರ್ಷಗಳಿಗೊಮ್ಮೆ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹಾಗಾಗಿ 2018 ರಲ್ಲಿ ನಡೆಯಬೇಕಿದ್ದ ವಿಶ್ವ ಟಿ20 ಟೂರ್ನಿಯನ್ನು 2020 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. 2020 ರ ವಿಶ್ವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ

2020 ರಲ್ಲಿ ಪಾಲ್ಗೊಳ್ಳಲಿರುವ ತಂಡಗಳು : ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ, ನೆದರ್ಲೆಂಡ್, ಐರ್ಲೆಂಡ್, ಹಾಂಗ್ ಕಾಂಗ್ , ಜಿಂಬಾಬ್ವೆ, ಯುಎಇ.

ಈ ವರೆಗೆ ಅತಿಥ್ಯ ವಹಿಸಿಕೊಂಡ ದೇಶಗಳು :
* 2007 - ದಕ್ಷಿಣ ಆಫ್ರಿಕಾ
* 2009 - ಇಂಗ್ಲೆಂಡ್.
* 2010 - ವೆಸ್ಟ್ ಇಂಡೀಸ್.
* 2012 - ಶ್ರೀಲಂಕಾ.
* 2014 - ಬಾಂಗ್ಲಾದೇಶ.
* 2016- ಭಾರತ
* 2020 - ಆಸ್ಟ್ರೇಲಿಯಾ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Next T20 World Cup format Changed to be hosted in Australia in 2020. First time Australia will be hosting T20 World Cup. This will be the 7th edition of this highly successful ICC tournament which inaugurated in 2007 in South Africa.
Please Wait while comments are loading...