ವಾರೆ ವ್ಹಾ ಯುವಿ, ರೈನಾ ಶೈನ್, ಕೊಹ್ಲಿ ಕಮಾಲ್...

Subscribe to Oneindia Kannada

ಸಿಡ್ನಿ, ಫೆಬ್ರವರಿ, 01: ಆಸ್ಟ್ರೇಲಿಯಾ ವಿರುದ್ಧ ಟಿ 20 ಯಲ್ಲಿ ಗೆದ್ದು ಬೀಗಿದ ಭಾರತ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಯುವರಾಜ್ ಸಿಂಗ್ ಅಂತಿಮ ಪಂದ್ಯದಲ್ಲಿ ತಮ್ಮ ಶಕ್ತಿ ಇನ್ನು ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ

ಭಾರತದಲ್ಲೇ ನಡೆಯಲಿರುವ ಟಿ 20 ವಿಶ್ವಕಪ್ ಗೆ ಮುನ್ನ ಈ ಜಯ ಹೊಸ ವಿಶ್ವಾಸವನ್ನು ತುಂಬಿದೆ. ಹೊಸಬರ ಮತ್ತು ಹಳಬರ ಸಮತೋಲನದಿಂದ ಜಯ ದಕ್ಕಿದೆ. ಏಕದಿನ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ತಂಡ ಮತ್ತೆ ಪುಟಿದೆದ್ದಿದೆ.[ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ]

ನಾಯಕ ಎಂಎಸ್ ಧೋನಿ, ತಂಡಕ್ಕೆ ಮರಳಿದ ಸುರೇಶ್ ರೈನಾ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಯುವರಾಜ್ ಸಿಂಗ್ ಅವರ ಭವಿಷ್ಯವನ್ನು ಪಂದ್ಯಗಳು ನಿರ್ಧಾರ ಮಾಡುತ್ತಿದ್ದವು. ಜಯ ಯುವರಾಜ್ ಸಿಂಗ್ ಕ್ರಿಕೆಟ್ ಜೀವನದ ಹಾದಿಗೆ ಮತ್ತಷ್ಟು ಶಕ್ತಿ ತುಂಬಿದೆ. ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಶಕ್ತಿಯಾಗಿ ಕಾಣಿಸಿಕೊಂಡರೆ, ಯುವ ವೇಗಿ ಬುಮ್ರಾ ಭಾರತಕ್ಕೆ ಹೊಸ ಅಸ್ತ್ರವಾಗಿ ಸಿಕ್ಕಿದ್ದಾರೆ. ಧೋನಿ ಹುಡುಗರ ಕೇಕೆಯನ್ನು ಚಿತ್ರಗಳಲ್ಲಿ ನೋಡಿಕೊಂಡು ಬರೋಣ....

ಹಳೆಯ ಆಟದ ನೆನಪು

ಹಳೆಯ ಆಟದ ನೆನಪು

ಪಂದ್ಯ ಗೆದ್ದ ನಂತರ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಸಂಭ್ರವನ್ನು ಹಂಚಿಕೊಂಡಿದ್ದು ಹೀಗೆ.

ಹುರ್ರೇ..ಗೆದ್ದೆ ಬಿಟ್ಟೆವು

ಹುರ್ರೇ..ಗೆದ್ದೆ ಬಿಟ್ಟೆವು

ಕೊನೆಯ ಓವರ್ ನ ಕೊನೆ ಎಸೆತದವರೆಗೂ ಕುತೂಹಲ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಸುರೇಶ್ ರೈನಾ ಚೆಂಡನ್ನು ಬೌಂಡರಿ ಅಟ್ಟಿದ ನಂತರ ಸಂಭ್ರಮಿಸಿದ ಪರಿ.

ಜಯ ತಂದ ಯುವಿ

ಜಯ ತಂದ ಯುವಿ

ಕೊನೆ ಓನರ್ ನ ಮೊದಲ ಎಸೆತವನ್ನು ಬೌಂಡರಿ ಎರಡನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ ಯುವರಾಜ್ ಸಿಂಗ್ ಭಾರತ ಗೆದ್ದ ತಕ್ಷಣ ಸಂಭ್ರಮಿಸಿದ ಬಗೆ.

ಕಪ್ ನಮ್ಮದೇ

ಕಪ್ ನಮ್ಮದೇ

ಟಿ-20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ ಟ್ರೋಫಿಯನ್ನು ಹೊತ್ತು ಸಂಭ್ರಮಿಸಿದ ವಿರಾಟ್ ಕೊಹ್ಲಿ.

ಭಾರತಕ್ಕೆ ಅಗ್ರ ಸ್ಥಾನ

ಭಾರತಕ್ಕೆ ಅಗ್ರ ಸ್ಥಾನ

ಆಸ್ಟ್ರೇಲಿಯಾವನ್ನು 3-0ಯಿಂದ ಮಣಿಸಿದ ಭಾರತ ಟಿ-20ಯಲ್ಲಿ 120 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ.ವೆಸ್ಟ್ ಇಂಡೀಸ್ ತಂಡ ಸದ್ಯ 118 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ವಿಕೆಟ್ ಸಂಭ್ರಮ

ವಿಕೆಟ್ ಸಂಭ್ರಮ

ಆಸ್ಟ್ರೇಲಿಯಾ ಆಟಗಾರರಿಗೆ ಪೆವಿಲಿಯನ್ ದಾರಿ ತೋರಿಸಿದಾಗ ಭಾರತದ ಪಾಳೆಯದಲ್ಲಿ ಸಂತಸದ ಹೊನಲು.

ಜಡೇಜಾ ವಿಕ್ರಮ

ಜಡೇಜಾ ವಿಕ್ರಮ

ಟಿ-20 ಬೌಲಿಂಗ್ ನಲ್ಲಿ ಮ್ಯಾಜಿಕ್ ತೋರಿದ ರವೀಂದ್ರ ಜಡೇಜಾ ಸರಣಿಯಲ್ಲಿ ಅದ್ಭುತ ಕ್ಯಾಚ್ ಗಳನ್ನು ಹಿಡಿದು ದಾಖಲೆ ನಿರ್ಮಿಸಿದರು.

ರೈನಾ ಆರ್ಭಟ

ರೈನಾ ಆರ್ಭಟ

ಚೇಸಿಂಗ್ ವೇಳೆ ಕೊನೆಯಲ್ಲಿ ಆರ್ಭಟಿಸಿದ ರೈನಾ ಭಾರತಕ್ಕೆ ಜಯ ತಂದುಕೊಟ್ಟರು. ಆಸ್ಟ್ರೇಲಿಯಾ ನೀಡಿದ ಜೀವದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಭಾರತಕ್ಕೆ ವಿಜಯಮಾಲೆ ತೊಡಿಸಿದರು.

ರೋಹಿತ್ ಅರ್ಧಶತಕ

ರೋಹಿತ್ ಅರ್ಧಶತಕ

ಆಸ್ಟ್ರೇಲಿಯಾ ಬೌಲರ್ ಗಳನ್ನು ಮೊದಲಿನಿಂದಲೂ ಕಾಡುತ್ತ ಬಂದಿರುವ ರೋಹಿತ್ ಶರ್ಮಾ ಮತ್ತೊಮ್ಮೆ ಅರ್ಧ ಶತಕ ದಾಖಲಿಸಿ ಭಾರತಕ್ಕೆ ಭದ್ರ ಬುನಾದಿ ಒದಗಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's top batting order put Shane Watson's unbeaten 71-ball 124 not out in the shade as they clinched the third and final match of their Twenty20 International (T20I) series by 7 wickets to blank Australia 3-0 at the Sydney Cricket Ground (SCG) on Sunday (January 31).
Please Wait while comments are loading...