ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಕೇನ್ ವಿಲಿಯಮ್ಸನ್ ನಾಯಕ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ವೆಲ್ಲಿಂಗ್ಟನ್, ಏಪ್ರಿಲ್ 28: ಏಕದಿನ, ಟಿ20 ಕ್ಯಾಪ್ಟನ್ ಆಗಿ ತಂಡವನ್ನು ಉತ್ತಮ ಮುನ್ನಡೆಸಿಕೊಂಡು ಹೋಗುತ್ತಿರುವ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮನ್ ಕೇನ್ ವಿಲಿಯಮ್ಸನ್ ಅವರೆಗೆ ಮತ್ತೊಂದು ಜವಬ್ದಾರಿಯನ್ನು ವಹಿಸಲಾಗಿದೆ. ಈಗಾಗಲೇ ಏಕದಿನ ಹಾಗೂ ಟ್ವಿಂಟಿ20 ಮಾದರಿಯ ಕ್ರಿಕೆಟ್ ಗೆ ನಾಯಕರಾಗಿದ್ದ ವಿಲಿಯಮ್ಸನ್ ಅವರನ್ನು ಟೆಸ್ಟ್ ಕ್ರಿಕೆಟ್ ಗೂ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬ್ರೆಂಡನ್ ಮೆಕಲಮ್ ಅವರ ವಿದಾಯದಿಂದ ನ್ಯೂಜಿಲೆಂಡ್ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಕೇನ್ ವಿಲಿಯಮ್ಸನ್ ಅವರು ಆಯ್ಕೆ ಆಗಿದ್ದಾರೆ. ಇದರಿಂದ ಟೆಸ್ಟ್, ಏಕದಿನ ಹಾಗೂ ಟಿ20 ಈ ಮೂರು ಮಾದರಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ವಿಲಿಯಮ್ಸನ್ ಮುನ್ನಡೆಸಲಿದ್ದಾರೆ.

New Zealand name Kane Williamson as Test captain

ಕೇನ್ ವಿಲಿಯಮ್ಸನ್ ಅವರು ಇತ್ತೀಚೆಗೆ ಭಾರತದಲ್ಲಿ ನಡೆದ ವಿಶ್ವ ಟಿ20 ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ನೇತೃತ್ವವನ್ನು ವಹಿಸಿಕೊಂಡು ಯಶಸ್ವಿಯಾಗಿ ಸೆಮೀಸ್ ವರೆಗೆ ತಂಡವನ್ನು ಕೊಂಡೊಯ್ದಿದ್ದರು. ಇದರಿಂದ ವಿಲಿಯಮ್ಸನ್ ಅವರಿಗೆ ನ್ಯೂಜಿಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಲು ಅವಕಾಶ ನೀಡಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ (ಎನ್.ಝಡ್.ಸಿ) ತಿಳಿಸಿದೆ.

2010 ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವ ಕೇನ್ ವಿಲಿಯಮ್ಸನ್ 46 ಟೆಸ್ಟ್ ಗಳಲ್ಲಿ 13 ಶತಕ, 19 ಅರ್ಧಶತಕ ಒಳಗೊಂಡು 4037 ರನ್ ಗಳಿಸಿದ್ದಾರೆ. ಹಾಗೂ 85 ಏಕದಿನ ಪಂದ್ಯಗಳಲ್ಲಿ 7 ಶತಕ, 25 ಅರ್ಧಶತಕದೊಂದಿಗೆ 3666 ರನ್ ಸಂಪಾದಿಸಿದ್ದಾರೆ. ಇವರು ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ಟೆಸ್ಟ್ ನಲ್ಲಿ 44ಕ್ಕೆ4, ಏಕದಿನದಲ್ಲಿ 22ಕ್ಕೆ4 ಇವರ ಬೆಸ್ಟ್ ಬೌಲಿಂಗ್ ಪ್ರದರ್ಶನವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
New Zealand confirmed batsman Kane Williamson as their Test skipper on Thursday (April 28), following Brendon McCullum's retirement in February.
Please Wait while comments are loading...