ಭಾರತ ವಿರುದ್ಧದ 3 ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

Posted By:
Subscribe to Oneindia Kannada

ವೆಲ್ಲಿಂಗ್ಟನ್, ಸೆಪ್ಟೆಂಬರ್, 06: ಭಾರತ ವಿರುದ್ಧ ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಗಾಯದ ಸಮಸ್ಯೆಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದ ನ್ಯೂಜಿಲೆಂಡ್ ತಂಡದ ಆಲ್ ರೌಂಡರ್ ಜಿಮ್ಮಿ ನೀಶಾಮ್ 15 ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಸೆ.22 ರಿಂದ ಅಕ್ಟೋಬರ್ 12 ರ ವರೆಗೆ ಮೂರು ಟೆಸ್ಟ್ ಸರಣಿ ಪಂದ್ಯಗಳು ನಡೆಯಲಿವೆ. ನಂತರ ಅಕ್ಟೋಬರ್ 19 ರಿಂದ ಅ.29 ರ ವರೆಗೆ 5 ಏಕದಿನ ಪಂದ್ಯಗಳನ್ನು ಭಾರತ ವಿರುದ್ಧ ಆಡಲಿದೆ.[ನಾಯಕ ಧೋನಿಗೆ 3 ದಾಖಲೆ ಮುರಿಯುವ ಚಾನ್ಸ್]

ಈವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಿಮ್ಮಿ ನೀಶಾಮ್ ಒಂದು ವರ್ಷಗಳ ನಂತರ ತಂಡವನ್ನು ಸೇರಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಜಿಮ್ಮಿ ಬಲವಾದ ಗಾಯ ಮಾಡಿಕೊಂಡು ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಗಾಯದಿಂದ ಚೇತರಿಸಿಕೊಂಡ ಜಿಮ್ಮಿ ನೀಶಾಮ್ ಒಂದು ವರ್ಷದ ನಂತರ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಸ್ಥಾನ ಪಡೆದಿದ್ದಾರೆ.[ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

New Zealand name 15-member Test squad for India tour

ಇನ್ನು ಕಳೆದ ತಿಂಗಳು ದಕ್ಷಿಣ ಆಫ್ರಿಕಾದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ನ ಹಿರಿಯ ಆಟಗಾರ ಮಾರ್ಟಿನ್ ಗುಫ್ತಿಲ್ ಅವರು ಟೆಸ್ಟ್ ಸರಣಿಗೆ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿದೆ.

ತಂಡ ಇಂತಿದೆ : ಕೇನ್ ವಿಲಿಯಮ್ಸನ್(ನಾಯಕ), ಟ್ರೆಂಟ್ ಬೌಲ್ಟ್, ಡಗ್ ಬ್ರೇಸ್‌ವೆಲ್, ಮಾರ್ಕ್ ಕ್ರೇಗ್, ಮಾರ್ಟಿನ್ ಗುಫ್ತಿಲ್, ಟಾಮ್ ಲಥಾಮ್, ಲುಕ್ ರಾಂಚಿ (ವಿಕೆಟ್ ಕೀಪರ್), ಜಿಮ್ಮಿ ನೀಶಾಮ್, ಹೆನ್ರಿ ನಿಕೋಲ್ಸ್, ಮಿಚೆಲ್ ಸೆಂಟನರ್, ಈಶ ಸೋಧಿ, ರಾಸ್ ಟೇಲರ್, ಟಿಮ್ ಸೌಥಿ, ನೀಲ್ ವಾಗ್ನರ್, ಬಿಜೆ ವಾಟ್ಲಿಂಗ್. [ಭಾರತ ಕೂಡಾ 'ಪಿಂಕ್ ಬಾಲ್ ಟೆಸ್ಟ್' ಆಡಲು ಸಿದ್ಧ : ಬಿಸಿಸಿಐ]

3 ಟೆಸ್ಟ್ ಸರಣಿ ವೇಳಾಪಟ್ಟಿ:

* ಮೊದಲ ಟೆಸ್ಟ್ : ಸೆಪ್ಟೆಂಬರ್ 22 ರಿಂದ 26, -ಗ್ರೀನ್ ಪಾರ್ಕ್ ಕಾನ್ಪುರ.
* ಎರಡನೇ ಟೆಸ್ಟ್ : ಸೆ.30 ರಿಂದ ಅಕ್ಟೋಬರ್ 4 - ಇಂದೋರ್.
* ಮೂರನೇ ಟೆಸ್ಟ್ : ಅಕ್ಟೋಬರ್ 8 ರಿಂದ 12 - ಈಡನ್ ಗಾರ್ಡನ್ ಕೊಲ್ಕತ್ತಾ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Zealand have recalled allrounder Jimmy Neesham after an injury-enforced absence from international cricket and retained out-of form opener Martin Guptill in the 15-member squad for a three-Test tour of India beginning later this month.
Please Wait while comments are loading...