ಕಪಿಲ್ ದೇವ್ ಸಾಧನೆ ಸಮಕ್ಕೆ ನಿಂತ ಆಲ್ ರೌಂಡರ್ ಆರ್ ಅಶ್ವಿನ್

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 19: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ(ಡಿಸೆಂಬರ್ 19) ಮತ್ತೊಂದು ದಾಖಲೆ ಬರೆದಿದ್ದಾರೆ. ಕ್ರಿಕೆಟ್ ದಿಗ್ಗಜ, ಮಾಜಿ ನಾಯಕ ಕಪಿಲ್ ದೇವ್ ಅವರ ಸಾಧನೆಯ ಸಮಕ್ಕೆ ನಿಂತಿದ್ದಾರೆ.

ತವರು ಪಿಚ್ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಡುತ್ತಿರುವ ರವಿಚಂದ್ರನ್ ಅಶ್ವಿನ್ ಅವರು ಒಂದೇ ಸರಣಿಯಲ್ಲಿ 250 ಪ್ಲಸ್ ರನ್ ಹಾಗೂ 25 ವಿಕೆಟ್ ಪಡೆದ ಆಟಗಾರರ ಕ್ಲಬ್ ಗೆ ಸೇರ್ಪಡೆಗೊಂಡಿದ್ದಾರೆ. [ಸ್ಪಿನ್ ಮಾಂತ್ರಿಕ ಅಶ್ವಿನ್ ಗಳಿಸಿದ ದಾಖಲೆಗಳು]

30 ವರ್ಷ ವಯಸ್ಸಿನ ಆರ್ ಅಶ್ವಿನ್ ಅವರು 23 ಬಾರಿ ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್ ಗಳಿಸಿ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮೂರನೇ ಟೆಸ್ಟ್ ಪಂದ್ಯದ ವೇಳೆ ಮುರಿದಿದ್ದರು.

New record: R Ashwin emulates Kapil Dev, joins elite list of 7 players

ಇದಲ್ಲದೆ, ಆಲ್ ರೌಂಡರ್ ಆಟ ಕಪಿಲ್ ದೇವ್ ನಂತರ 500 ಪ್ಲಸ್ ರನ್ ಹಾಗೂ 50 ವಿಕೆಟ್ ಗಳನ್ನು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ ಸಾಧನೆಯನ್ನು ಆರ್ ಅಶ್ವಿನ್ ಮಾಡಿದ್ದಾರೆ. ಜತೆಗೆ 2016ರಲ್ಲಿ 11 ಟೆಸ್ಟ್ ಪಂದ್ಯದಲ್ಲಿ 53ವಿಕೆಟ್ ಪಡೆದಿದ್ದು, ಒಂದು ಕ್ಯಾಲೆಂಡರ್ ವರ್ಷದಲ್ಲಿ ಸ್ಪಿನ್ನರ್ ಒಬ್ಬರ ಉತ್ತಮ ಸಾಧನೆಯಾಗಿದೆ.

250 ಪ್ಲಸ್ ರನ್ ಹಾಗೂ 25 ವಿಕೆಟ್ ಪಡೆದ ಆಲ್ ರೌಂಡರ್ ಗಳ ಪಟ್ಟಿ:
* ರವಿಚಂದ್ರನ್ ಅಶ್ವಿನ್ (ಭಾರತ) vs ಇಂಗ್ಲೆಂಡ್, 2016 (270ರನ್ ಹಾಗೂ 28 ವಿಕೆಟ್ ಗಳು) (ಡಿಸೆಂಬರ್ 19ರಂತೆ ಪಂದ್ಯ ಇನ್ನೂ ಜಾರಿಯಲ್ಲಿದೆ)
* ಇಯಾನ್ ಬೋಥಮ್ (ಇಂಗ್ಲೆಂಡ್) vs ಆಸ್ಟ್ರೇಲಿಯಾ, 1985 (250, 31)
* ಇಯಾನ್ ಬೋಥಮ್ (ಇಂಗ್ಲೆಂಡ್) vs ಆಸ್ಟ್ರೇಲಿಯಾ, 1981 (399, 34)
* ಕಪಿಲ್ ದೇವ್ (ಭಾರತ) vs ಪಾಕಿಸ್ತಾನ, 1979-80 (278, 32)
* ಟ್ರೆವರ್ ಗಾಡ್ಡಾರ್ಡ್ (ದಕ್ಷಿಣ ಆಫ್ರಿಕಾ) vs ಆಸ್ಟ್ರೇಲಿಯಾ, 1966 (294, 26)
* ರಿಚಿ ಬೆನೋ (ಆಸ್ಟ್ರೇಲಿಯಾ) vs ದಕ್ಷಿಣ ಆಫ್ರಿಕಾ, 1957 (329, 30)
* ಎ ಫಾಲ್ಕ್ನರ್ (ದಕ್ಷಿಣ ಆಫ್ರಿಕಾ) vs ಇಂಗ್ಲೆಂಡ್, 1910 (545, 29)
* ಜಾರ್ಜ್ ಗಿಫೆನ್ (ಆಸ್ಟ್ರೇಲಿಯಾ) vs ಇಂಗ್ಲೆಂಡ್, 1894 (474, 34)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ravichandran Ashwin continued to set new records as a Test all-rounder. Today (December 19), he emulated the legendary Kapil Dev at his home ground - MA Chidambaram Stadium.
Please Wait while comments are loading...