ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ತೀವ್ರ ಮುಖಭಂಗ

Posted By:
Subscribe to Oneindia Kannada

ಕೇಪ್ ಟೌನ್, ಅಕ್ಟೋಬರ್ 14: ವಿಶ್ವದ ನಂ.1 ತಂಡ, ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ತೀವ್ರ ಮುಖಭಂಗ ಅನುಭವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ 0-5 ಅಂತರದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಕಾಂಗರೂ ತಂಡಕ್ಕೆ ಇದು ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ವೈಟ್ ವಾಶ್ ಎಂದರೆ ಆಘಾತದ ಬಗ್ಗೆ ನೀವು ಊಹಿಸಬಹುದು.

ಪಂದ್ಯದ ಸ್ಕೋರ್ ಕಾರ್ಡ್
ಇಲ್ಲಿ ನಡೆದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 31 ರನ್​ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಎಬಿ ಡಿವಿಲಿಯರ್ಸ್ ಇಲ್ಲದ ದಕ್ಷಿಣ ಆಫ್ರಿಕಾ ತಂಡದ ಈ ಸಾಧನೆ ಮೆಚ್ಚಲೇಬೇಕು.

New low: World champions Australia suffer first ever 0-5 ODI series whitewash

ಟಾಸ್ ಗೆದ್ದು ಬ್ಯಾಟಿಂಗ್ ಮಾಡೀದ ದಕ್ಷಿಣ ಆಫ್ರಿಕಾ, ರಿಲೀ ರೋಸೌ 122 ರನ್(118 ಎಸೆತ, 14X4, 2X6), ಜೆಪಿ ಡುಮಿನಿ 73 ರನ್(75 ಎಸೆತ, 8X4) ಆಕರ್ಷಕ ಅರ್ಧಶತಕದ ನೆರವಿನಿಂದ 8 ವಿಕೆಟ್​ಗೆ 327ರನ್ ಗಳಿಸಿತು. ರನ್ ಚೇಸ್ ಮಾಡಲು ತೊಡಗಿದ ಆಸೀಸ್ ಗೆ ಎಡಗೈ ಆರಂಭಿಕ ಡೇವಿಡ್ ವಾರ್ನರ್ ಆಸರೆಯಾದರು.

ವಾರ್ನರ್ 173 ರನ್(136 ಎಸೆತ, 24‍X4) ಏಕಾಂಗಿ ಹೋರಾಟ ನಡೆಸಿದ್ದು ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ 48.2 ಓವರ್​ಗಳಲ್ಲಿ 296 ರನ್​ಗೆ ಆಲೌಟ್ ಆಗಿ ಸೋಲು ಕಂಡಿತು.

ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ: 8 ವಿಕೆಟ್​ಗೆ 327 (ರೋಸೌ 122, ಡುಮಿನಿ 73, ಆಮ್ಲ 25, ಡಿಕಾಕ್ 12, ಮ್ಯಾನಿ 49ಕ್ಕೆ 3, ಟ್ರೆಮೈನ್ 64ಕ್ಕೆ3), ಆಸ್ಟ್ರೇಲಿಯಾ: 48.2 ಓವರ್​ಗಳಲ್ಲಿ 296 (ವಾರ್ನರ್ 173, ಸ್ಟೀವನ್ ಸ್ಮಿತ್ 0, ಫಿಂಚ್ 19, ಮಿಚೆಲ್ ಮಾರ್ಷ್ 35, ಅಬೋಟ್ 48ಕ್ಕೆ 2, ರಬಡಾ 84ಕ್ಕೆ 2, ತಾಹಿರ್ 42ಕ್ಕೆ 2)

ಸುದ್ದಿಗೋಷ್ಠಿಯಲ್ಲಿ ಫಾಪ್ ಡುಪ್ಲೇಸಿಸ್


ದಕ್ಷಿಣ ಆಫ್ರಿಕಾ ತಂಡದ ಸಂಭ್ರಮಾಚರಣೆ


ಸಂಪೂರ್ಣವಾಗಿ ಸೋಲು ಕಂಡೆವು: ಸ್ಟೀವ್ ಸ್ಮಿತ್

(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
David Warner hit a magnificent century for Australia but could not prevent South Africa from completing a clean sweep by winning the fifth and final one-day international by 31 runs at Newlands on Wednesday (Oct 12).
Please Wait while comments are loading...