ಐಪಿಎಲ್ 2018 : ಆಟಗಾರರ ಸಂಬಳ, ಧೋನಿ ಎಲ್ಲಿಗೆ? ಇತ್ಯಾದಿ

Posted By:
Subscribe to Oneindia Kannada
ಐಪಿಎಲ್ ಆಟಗಾರರ ಸಂಬಳ, ಅಮಾನತುಗೊಂಡಿದ್ದ ತಂಡಗಳ ಮರು ಸೇರ್ಪಡೆ ಇತ್ಯಾದಿ | Oneindia Kannada

ಬೆಂಗಳೂರು, ಡಿಸೆಂಬರ್ 06: ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಇದ್ದ ಆತಂಕ ನಿವಾರಣೆಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಹೊಸ ನಿಯಮಾವಳಿಗಳ ವಿವರ ಇಲ್ಲಿದೆ.

ಚೆನ್ನೈ ಪರ ಧೋನಿ ಆಡಬಹುದು, ಥ್ರಿಲ್ ಆದ ಫ್ಯಾನ್ಸ್

ಐಪಿಎಲ್ ಆಡಳಿತ ಮಂಡಳಿ ಬುಧವಾರ ಸಭೆ ನಡೆಸಿ ತೆಗೆದುಕೊಂಡ ಪ್ರಮುಖ ನಿರ್ಣಯಗಳಲ್ಲಿ ಆಟಗಾರರ ಸಂಬಳ, ತಂಡದ ಬಳಿ ಇರಿಸಿಕೊಳ್ಳಬಹುದಾದ ಮೊತ್ತ, ಅಮಾನತುಗೊಂಡಿದ್ದ ತಂಡಗಳ ಮರು ಸೇರ್ಪಡೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ.

2018ರ ಐಪಿಎಲ್ ಯಲ್ಲಿ ಎರಡು ತಂಡಗಳು ಆಡಲಿದ್ದು, ಹಳೆ ತಂಡದಲ್ಲಿದ್ದ 5 ಆಟಗಾರರನ್ನು ಖರೀದಿ ಮಾಡಬಹುದು ಹಾಗೂ ಕೆಲ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಮತ್ತೊಮ್ಮೆ ಬ್ಯಾಟ್ ಬೀಸಬಹುದಾಗಿದೆ.

ತಂಡದಲ್ಲಿ ಆಟಗಾರರ ಸಂಖ್ಯೆ, ಸಂಬಳ ಮಿತಿ

ತಂಡದಲ್ಲಿ ಆಟಗಾರರ ಸಂಖ್ಯೆ, ಸಂಬಳ ಮಿತಿ

* ಮೂರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
* ಐಪಿಎಲ್ ನಲ್ಲಿ ಪ್ರತಿಯೊಂದು ತಂಡ 25 ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
* ಈ ಪೈಕಿ 17 ಭಾರತೀಯರಾದರೆ 8 ವಿದೇಶಿ ಆಟಗಾರರಿಗೆ ಅವಕಾಶವಿರುತ್ತದೆ.

ತಂಡದಲ್ಲಿ ಆಟಗಾರರ ಸಂಖ್ಯೆ: 25 ಆಟಗಾರರು (8 ಗರಿಷ್ಠ ವಿದೇಶಿ ಆಟಗಾರರು), ಕನಿಷ್ಟ 18 ಆಟಗಾರರು.

ಸಂಬಳ ಮಿತಿ
2018: 80 ಕೋಟಿ ರು
2019: 82 ಕೋಟಿ ರು
2020: 85 ಕೋಟಿ ರು
ಕನಿಷ್ಟ ಖರ್ಚು ಮಿತಿ : ಸಂಬಳ ಮಿತಿಯ ಶೇ 75ರಷ್ಟು

ಆಟಗಾರರನ್ನು ಉಳಿಸಿಕೊಳ್ಳುವ ದರ ಪಟ್ಟಿ

ಆಟಗಾರರನ್ನು ಉಳಿಸಿಕೊಳ್ಳುವ ದರ ಪಟ್ಟಿ

ಆಯ್ಕೆ 1
3 ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಂಡರೆ
ಸಂಬಳ ಮಿತಿ
ಆಟಗಾರ 1: 15 ಕೋಟಿ ರು
ಆಟಗಾರ 2 : 11 ಕೋಟಿ ರು
ಆಟಗಾರ 3: 7 ಕೋಟಿ ರು
***

ಆಯ್ಕೆ 2
2 ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಂಡರೆ
ಸಂಬಳ ಮಿತಿ
ಆಟಗಾರ 1: 12.5 ಕೋಟಿ ರು
ಆಟಗಾರ 2 : 8.5 ಕೋಟಿ ರು

****
ಆಯ್ಕೆ 3

1 ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಂಡರೆ
ಸಂಬಳ ಮಿತಿ
ಆಟಗಾರ 1: 12.5 ಕೋಟಿ ರು
ಮೊದಲ ಬಾರಿಗೆ ಆಡುವ ಆಟಗಾರರಿಗೆ 3 ಕೋಟಿ ಪ್ರತಿ ಆಟಗಾರರಂತೆ ನೀಡಬಹುದು.

ಹರಾಜಿನ ಖರ್ಚು ವೆಚ್ಚ ಲೆಕ್ಕಾಚಾರ

ಹರಾಜಿನ ಖರ್ಚು ವೆಚ್ಚ ಲೆಕ್ಕಾಚಾರ

ಮೊದಲ ಬಾರಿಗೆ ಆಡುವವರು(Un capped Players)
* 10 ಲಕ್ಷ ರು ಮಿತಿಯನ್ನು 20 ಲಕ್ಷ ರುಗೆ ಏರಿಕೆ
* 20 ಲಕ್ಷ ರು ಮಿತಿಯನ್ನು 30 ಲಕ್ಷ ರುಗೆ ಏರಿಕೆ
* 30 ಲಕ್ಷ ರು ಮಿತಿಯನ್ನು 40 ಲಕ್ಷ ರುಗೆ ಏರಿಕೆ

ಹರಾಜಿನಲ್ಲಿ ನಿಗದಿಯಾದ ಮೂಲ ಬೆಲೆ ಅಲ್ಲದೆ ಇದು ಆಟಗಾರರಿಗೆ ಸಿಗಲಿರುವ ಸಂಬಳದ ಮಿತಿಯಾಗಿದೆ.

ಹಾಲಿ ಆಟಗಾರರರಿಗೆ ಸಿಗುವ ಸಂಬಳ

ಹಾಲಿ ಆಟಗಾರರರಿಗೆ ಸಿಗುವ ಸಂಬಳ

* 30 ಲಕ್ಷ ರು ಮಿತಿಯನ್ನು 50 ಲಕ್ಷ ರುಗೆ ಏರಿಕೆ
* 50 ಲಕ್ಷ ರು ಮಿತಿಯನ್ನು 75 ಲಕ್ಷ ರುಗೆ ಏರಿಕೆ
* 75 ಲಕ್ಷ ರು ಮಿತಿಯನ್ನು 1 ಕೋಟಿ ರುಗೆ ಏರಿಕೆ
* 1 ಕೋಟಿ ರು ಮಿತಿಯನ್ನು 1.5 ಕೋಟಿ ರು ಗೆ ಏರಿಕೆ
* 1.5 ಕೋಟಿ ರು ಮಿತಿಯನ್ನು 2 ಕೋಟಿ ರು ಗೆ ಏರಿಕೆ
* 2 ಕೋಟಿ ರು ಮಿತಿಯನ್ನು ಹಾಗೆ ಉಳಿಸಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: New guidelines for IPL
English summary
The IPL Governing Council met in New Delhi on Wednesday (December 6) to decide on the salary cap, player retention policy and player regulations for the upcoming editions of the league. The BCCI decisions decoded.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ