ಭಾರತ 'ಎ' ತಂಡದ ಆಸೀಸ್ ಪ್ರವಾಸ: ಮನೀಶ್, ಕರುಣ್ ಇನ್

Posted By:
Subscribe to Oneindia Kannada

ನವದೆಹಲಿ, ಜೂನ್ 26: ಆಸ್ಟ್ರೇಲಿಯಾ ಪ್ರವಾಸ ತೆರಳಿರುವ ಭಾರತ 'ಎ' ತಂಡಕ್ಕೆ ಕರ್ನಾಟಕದ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಆಯ್ಕೆಯಾಗಿದ್ದಾರೆ. ಆಗಸ್ಟ್ 14ರಿಂಡ ಆರಂಭವಾಗಲಿರುವ ಪ್ರವಾಸಕ್ಕೆ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ನಮನ್ ಓಜಾ ಅವರು ನಾಯಕರಾಗಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ 'ಎ' ತಂಡ 2 ಅನಧಿಕೃತ ಟೆಸ್ಟ್ ಪಂದ್ಯಗಳು ಹಾಗೂ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲಿದೆ. ರಾಹುಲ್ ದ್ರಾವಿಡ್ ಅವರು ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ.

Karun Nair

2014ರಲ್ಲಿ ಭಾರತ ಎ ತಂಡ ಆಸೀಸ್ ಪ್ರವಾಸ ಕೈಗೊಂಡಿದ್ದ ವೇಳೆ ನಮನ್ ಓಜಾ ಅವರು ಒಂದು ದ್ವಿಶತಕ ಹಾಗೂ ಶತಕ ಸಿಡಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಆ. 14ರಿಂದ ಆಸ್ಟ್ರೇಲಿಯಾ ಎ, ದಕ್ಷಿಣ ಆಫ್ರಿಕಾ ಎ ಹಾಗೂ ಆಸೀಸ್ ರಾಷ್ಟ್ರೀಯ ತಂಡ ಒಳಗೊಂಡ ಚತುಷ್ಕೋನ ಏಕದಿನ ಸರಣಿ ನಡೆಯಲಿದೆ.

ನಂತರ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಸೆಪ್ಟೆಂಬರ್ 8ರಿಂದ 11 ಹಾಗೂ ಸೆ.15ರಿಂದ 18ರವರೆಗೆ ಬ್ರಿಸ್ಬೇನ್​ನಲ್ಲಿ ಕ್ರಮವಾಗಿ ಮೊದಲ ಹಾಗೂ 2ನೇ ಚತುರ್ದಿನ ಪಂದ್ಯಗಳು ನಡೆಯಲಿವೆ.

ಭಾರತ ಎ ತಂಡ: ನಮನ್ ಓಜಾ (ವಿಕೆಟ್ ಕೀಪರ್ ಹಾಗೂ ನಾಯಕ), ಫೈಯಾಜ್ ಫಜಲ್, ಅಖಿಲ್ ಹೆರ್ವಾಡ್ಕರ್, ಶ್ರೇಯಸ್ ಅಯ್ಯರ್, ಕರುಣ್ ನಾಯರ್, ಮನೀಷ್ ಪಾಂಡೆ, ಕೇದರ್ ಜಾಧವ್, ವಿಜಯ್ ಶಂಕರ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಜಯದೇವ್ ಉನಾದ್ಕತ್, ಬರೀಂದರ್ ಸ್ರಾನ್, ಶಹಬಾಜ್ ನದೀಮ್ ಮತ್ತು ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್).(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Wicketkeeper-batsman Naman Ojha was today named captain of the India A team, which will take part in the two unofficial 'Tests' and a four-nation One-day tournament, in Australia, starting August 14.
Please Wait while comments are loading...