ಮೇ 6ರ ಹೊತ್ತಿಗೆ ಮೈದಾನಕ್ಕಿಳಿಯುವೆ : ಯುವರಾಜ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 21: ಟೀಂ ಇಂಡಿಯಾದ ಆಲ್ ರೌಂಡರ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರು ಮತ್ತೆ ತಂಡ ಸೇರುವ ಬಗ್ಗೆ ಮಾತನಾಡಿದ್ದಾರೆ. ವಿಶ್ವ ಟಿ20 ನಂತರ ಗಾಯಾಳುವಾಗಿ ಮೈದಾನದಿಂದ ಹೊರಗುಳಿದಿರುವ ಯುವಿ ಅನುಪಸ್ಥಿತಿ, ಅಭಿಮಾನಿಗಳಿಗೆ ಕಾಡುತ್ತಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್ 9ರಲ್ಲಿ 'ಸಿಕ್ಸರ್ ಕಿಂಗ್' ಯುವರಾಜ್ ಅವರು ಯಾವಾಗ ಆಡುತ್ತಾರೆ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಾಧ್ಯವಿಲ್ಲದಿದ್ದರೂ, ಮೇ 6ರ ಪಂದ್ಯಕ್ಕೆ ಲಭ್ಯವಾಗುವ ಬಗ್ಗೆ ಸ್ವತಃ ಯುವರಾಜ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

My target is to play IPL game on May 6, says Yuvraj Singh

ಮೇ 6ರಂದು ಗುಜರಾತ್ ಲಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ನಿಗದಿಯಾಗಿದೆ. ವಿಶ್ವ ಟ್ವೆಂಟಿ20ಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದ ಯುವಿ, ಐಪಿಎಲ್ 9ರಲ್ಲಿ ಹೈದರಾಬಾದ್ ಪರ ಇನ್ನೂ ಬ್ಯಾಟ್ ಬೀಸಬೇಕಿದೆ.

ಯುವಿ ಹೇಳಿದ್ದೇನು?: ಮೇ6ರ ಪಂದ್ಯವನ್ನು ಆಡುವ ನಿರೀಕ್ಷೆಯಿದೆ. ಅಷ್ಟರೊಳಗೆ ನಾನು ದೈಹಿಕವಾಗಿ ಫಿಟ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ನನ್ನ ಫಿಜಿಯೋ, ವೈದ್ಯರ ಜೊತೆ ಚರ್ಚಿಸುತ್ತಿದ್ದೇನೆ. ಶೀಘ್ರದಲ್ಲೇ ಮೈದಾನಕ್ಕಿಳಿಯುವೆ ಎಂದು ಹೇಳಿದ್ದಾರೆ. ಪ್ಯೂಮಾ ಬೋಲ್ಡ್ ಟ್ರಿಕ್ಸ್ ಕ್ರೀಡಾ ವಸ್ತ್ರಗಳನ್ನು ಆನಾವರಣಗೊಳಿಸಿ ಮಾತನಾಡುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Recuperating Sunrisers Hyderabad's star batsman Yuvraj Singh said on Thursday (April 21) he is currently recovering well and is hopeful of returning to Indian Premier League (IPL) action against Gujarat Lions on May 6.
Please Wait while comments are loading...