ವಿಡಿಯೋ :ರನ್ ಮಷಿನ್' ವಿರಾಟ್ ಕೊಹ್ಲಿ ಸಿಡಿಸಿದ ಸಿಕ್ಸರ್

Posted By:
Subscribe to Oneindia Kannada

ಪುಣೆ, ಜನವರಿ 16: ಟೀಂ ಇಂಡಿಯಾದ 'ರನ್ ಮಷಿನ್' ವಿರಾಟ್ ಕೊಹ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಯಶಸ್ವಿ ರನ್ ಚೇಸ್ ಶತಕಗಳ ದಾಖಲೆಯನ್ನು ಮುರಿದಿದ್ದಲ್ಲದೆ, ಭರ್ಜರಿ ಸಿಕ್ಸರ್ ಸಿಡಿಸಿದ್ದು ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

108 ಎಸೆತಗಳಲ್ಲಿ 122 ರನ್ ಬಾರಿಸಿ. ರನ್ ಚೇಸ್ ನಲ್ಲಿ ಕೊಹ್ಲಿ 17ನೇ ಶತಕ ಗಳಿಸಿದರು. ಈ ಮೂಲಕ ರನ್ ಚೇಸ್ ನಲ್ಲಿ ಅಧಿಕ ಶತಕ ಗಳಿಸಿದ ದಾಖಲೆ ಹಾಗೂ ಯಶಸ್ವಿ ಶತಕ ಗಳಿಸಿದ ದಾಖಲೆ ಮುರಿದರು.

Must-see Video: Virat Kohli's unbelievable 6 off Chris Woakes in 1st ODI

ರನ್ ಚೇಸಿಂಗ್ ನಲ್ಲಿ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಆಟಗಾರರ ಪೈಕಿ ಸಚಿನ್ ಅವರು ಮುಂದಿದ್ದರು. ಸಚಿನ್ ಅವರು 14 ಬಾರಿ ಈ ಸಾಧನೆ ಮಾಡಿದ್ದರು. ಈಗ ಕೊಹ್ಲಿ 15 ಬಾರಿ ಶತಕ ಗಳಿಸಿ ತಂಡಕ್ಕೆ ಜಯ ತಂದಿದ್ದಾರೆ.

ಆದರೆ, ಪಂದ್ಯ, ಇನ್ನಿಂಗ್ಸ್ ಲೆಕ್ಕ ಹಾಕಿದರೆ ಸಚಿನ್ ಗಿಂತ ಕೊಹ್ಲಿ ಸಾಕಷ್ಟು ಮುಂದಿದ್ದಾರೆ. ಸಚಿನ್ ಅವರು 14 ಶತಕ (ರನ್ ಚೇಸ್ ನಲ್ಲಿ) ಗಳಿಸಲು 124 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ ಅವರು 60 ಇನ್ನಿಂಗ್ಸ್ ನಲ್ಲೇ ಸಾಧಿಸಿದ್ದಾರೆ.

ಕ್ರಿಸ್ ವೋಕ್ಸ್ ಹಾಕಿದ 34ನೇ ಓವರ್ ನ 2ಎಸೆತವನ್ನು ಸಿಕ್ಸ್ ಬಾರಿಸಿದ ಕೊಹ್ಲಿ ಪಂದ್ಯದಲ್ಲಿ 5 ಸಿಕ್ಸ್ ಸಿಡಿಸಿದರು. ವಿಡಿಯೋ ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian captain Virat Kohli unveiled yet another piece of batting masterclass, this time in the 1st One Day International against England at the Maharashtra Cricket Association (MCA) Stadium here last night (January 15).
Please Wait while comments are loading...