ಯೂನಿವರ್ಸಲ್ ಬಾಸ್ ಸಂದರ್ಶನ ಮಾಡಿದ ಕ್ಯಾಪ್ಟನ್ ಕೊಹ್ಲಿ

Posted By:
Subscribe to Oneindia Kannada

ರಾಜ್ ಕೋಟ್, ಏಪ್ರಿಲ್ 19: ಬಿಂದಾಸ್ ಆಟಗಾರ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಗೇಲ್ ಅವರು ಮತ್ತೆ ಲಯಕ್ಕೆ ಮರಳಿದ ಬೆನ್ನಲ್ಲೇ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಚುಟುಕು ಸಂದರ್ಶನ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಗುಜರಾತ್ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ 38 ಎಸೆತಗಳಲ್ಲಿ 77ರನ್ ಚೆಚ್ಚಿ ಪಂದ್ಯಶ್ರೇಷ್ಠ ಎನಿಸಿಕೊಂಡರು.ಕೊಹ್ಲಿ ಕೂಡಾ 50 ಎಸೆತಗಳಲ್ಲಿ 64ರನ್ ಬಾರಿಸಿದರು. ಗೇಲ್ ಅವರು ಈ ಪಂದ್ಯದಲ್ಲಿ 3ರನ್ ಗಳಿಸಿದ್ದಾಗ ಟಿ20ಯಲ್ಲಿ 10,000ರನ್ ಪೂರೈಸಿದ ಮೊದಲ ಕ್ರಿಕೆಟರ್ ಎಂಬ ಸಾಧನೆ ಮಾಡಿದರು.

Must-see Video: 'Legend' Virat Kohli interviews 'Universe Boss' Chris Gayle in IPL 2017

ಮೊದಲ ವಿಕೆಟ್ ಗೆ ಈ ಇಬ್ಬರು ಆಟಗಾರರು 122ರನ್ ಜೊತೆಯಾಟ ಸಾಧಿಸಿದ್ದರಿಂದ ಆರ್ ಸಿಬಿ 20 ಓವರ್ ಗಳಲ್ಲಿ 213/2 ಸ್ಕೋರ್ ಮಾಡಲು ಸಾಧ್ಯವಾಯಿತು. ಕೊನೆಗೆ ಗುಜರಾತ್ ಲಯನ್ಸ್ ತಂಡಕ್ಕೆ ಬ್ರೆಂಡನ್ ಮೆಕಲಮ್ ಬಲ ಸಿಕ್ಕರೂ ಪಂದ್ಯ ಗೆಲ್ಲಲಾಗಲಿಲ್ಲ.

ಪಂದ್ಯದ ನಂತರ ಇಬ್ಬರು ತಮಾಷೆಯಿಂದ ಮಾತನಾಡುವಾಗ ಗೇಲ್ ಗೆ ಕೊಹ್ಲಿ ಪ್ರಶ್ನೆಗಳನ್ನು ಕೇಳಿದರು. ಕೊಹ್ಲಿಯನ್ನು ಲೆಜೆಂಡ್ ಎಂದು ಗೇಲ್ ಕರೆದರೆ, ಗೇಲ್ ರನ್ನು ಯೂನಿವರ್ಸಲ್ ಬಾಸ್ ಎಂದೇ ಕೊಹ್ಲಿ ಸಂಬೋಧಿಸಿದರು. ಐಪಿಎಲ್ ಟಿ20.ಕಾಂ ವೆಬ್ ತಾಣದಲ್ಲಿ ಸಂದರ್ಶನದ ವಿಡಿಯೋ ನೋಡಿ ಆನಂದಿಸಿ..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Royal Challengers Bangalore (RCB) captain Virat Kohli swapped his bat with a microphone as he interviewed team-mate Chris Gayle on Tuesday night (April 18) after a 21-run victory over Gujarat Lions (GL) in Match 20 of the Indian Premier League (IPL) 2017.
Please Wait while comments are loading...