ವಿಡಿಯೋ: ಜಡೇಜ ಹಿಡಿದ ಅದ್ಭುತ ಕ್ಯಾಚಿಗೆ ವಾರ್ನರ್ ಬಲಿ!

Posted By:
Subscribe to Oneindia Kannada

ರಾಂಚಿ, ಮಾರ್ಚ್ 16: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜ ಅವರು ಅದ್ಭುತ ಕ್ಯಾಚ್ ಹಿಡಿದಿದ್ದು ಈಗ ಸದ್ಯಕ್ಕೆ ಸಕತ್ ಟ್ರೆಂಡಿಂಗ್ ನಲ್ಲಿದೆ. ಗುರುವಾರ(ಮಾರ್ಚ್ 16) ಆರಂಭವಾದ ರಾಂಚಿ ಟೆಸ್ಟ್ ಪಂದ್ಯದ ಮೊದಲ ದಿನದಂದು ಡೇವಿಡ್ ವಾರ್ನರ್ ಅವರು ನೀಡಿದ ರಿಟರ್ನ್ ಕ್ಯಾಚನ್ನು ಜಡೇಜ ಹಿಡಿದ ವಿಡಿಯೋ ಇಲ್ಲಿದೆ...

ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಟ್ ರೆನ್ಶಾ ಅವರು ಉತ್ತಮ ಆರಂಭ ಒದಗಿಸಿದರು ಡೇವಿಡ್ ವಾರ್ನರ್ ಅವರು 19 ರನ್ ಗಳಿಸಿ ಆಡುತ್ತಿದ್ದಾಗ ಪಂದ್ಯದ 10ನೇ ಓವರ್ ನಲ್ಲಿ ರವೀಂದ್ರ ಜಡೇಜ ಅವರಿಗೆ ರಿಟರ್ನ್ ಕ್ಯಾಚಿತ್ತು ಔಟಾದರು.[ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸಿದ ಆಸೀಸ್ ಮಾಧ್ಯಮಕ್ಕೆ ಛೀಮಾರಿ!]

Must-see video: Ravindra Jadeja removes David Warner with a brilliant 'reflex catch'

ರೆನ್ಶಾ ವಿಕೆಟ್ 44 ರನ್ ಗಳಿಸಿ ಉಮೇಶ್ ಯಾದವ್ ಗೆ ಬಲಿಯಾದರು. ಆಸ್ಟ್ರೇಲಿಯಾ ಮೊದಲ ದಿನದ ಚಹಾ ವಿರಾಮದ ವೇಳೆಗೆ 60 ಓವರ್ ಗಳಲ್ಲಿ 194/4 ಸ್ಕೋರ್ ಮಾಡಿದ್ದು, ನಾಯಕ ಸ್ಟೀವ್ ಸ್ಮಿತ್ 80 ರನ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 19ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಜಡೇಜ ಹಿಡಿದ ಕ್ಯಾಚ್ ವಿಡಿಯೋ ನೋಡಿ:

ಇದಕ್ಕೂ ಮುನ್ನ ಎರಡು ತಂಡಗಳಲ್ಲೂ ಬದಲಾವಣೆ ಮಾಡಲಾಯಿತು. ಟೀಂ ಇಂಡಿಯಾದಲ್ಲಿ ಅಭಿನವ್ ಮುಕುಂದ್ ಬದಲಿಗೆ ಮುರಳಿ ವಿಜಯ್ ತಂಡಕ್ಕೆ ಮರಳಿದರು. ಆಸ್ಟ್ರೇಲಿಯಾ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಪ್ಯಾಟ್ ಕುಮಿನ್ಸ್ ಅವರು ಆಡುವ ‍XI ಸೇರಿದ್ದು, ಮಿಚೆಲ್ ಆರ್ಷ್, ಮಿಚೆಲ್ ಸ್ಟಾಕ್ ತಂಡ ತೊರೆದಿದ್ದಾರೆ.[ಟೀಂ ಇಂಡಿಯಾ ಗೆಲುವಿಗೂ ಸಿದ್ದರಾಮಯ್ಯ ಟ್ವೀಟ್ ಗೂ ಲಿಂಕ್!]

ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯ ಗೆದ್ದು 1-1 ರಲ್ಲಿ ಸಮ ಸಾಧಿಸಿವೆ. ಮುಂದಿನ ಪಂದ್ಯ ಧರ್ಮಶಾಲದಲ್ಲಿ ಮಾರ್ಚ್ 25-29ರ ತನಕ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ravindra Jadeja took a brilliant reflex catch off his own ball to give India their first breakthrough in the third Test match against Australia here on Thursday (March 16).
Please Wait while comments are loading...