ವಿಡಿಯೋ: ಧೋನಿ ಹೊಡೆದ ಸಿಕ್ಸರ್ ವ್ಯರ್ಥವಾದ ಆ ಕ್ಷಣ!

Posted By:
Subscribe to Oneindia Kannada

ಕಟಕ್, ಜನವರಿ 19: ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿದೆ. ಎರಡನೇ ಪಂದ್ಯದಲ್ಲಿ ಯುವರಾಜ್ ರಂತೆ ಧೋನಿ ಕೂಡಾ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಆದರೆ, ಪಂದ್ಯದ ಮುಖ್ಯಾಂಶ ನೋಡುವಾಗ ಧೋನಿ ಬಾರಿಸಿದ ಒಂದು ಸಿಕ್ಸರ್ ನೋಡಿದರೆ ಅಭಿಮಾನಿಗಳಿಗೆ ನಿರಾಸೆಯಾಗುತ್ತದೆ. ಏಕೆ? ಮುಂದೆ ಓದಿ..

ಟೀಂ ಇಂಡಿಯಾದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ 43ನೇ ಓವರ ನಲ್ಲಿ ಇಂಗ್ಲೆಂಡಿನ ವೇಗಿ ವೋಕ್ಸ್ ಎಸೆದ ಚೆಂಡನ್ನು ಮಿಡ್ ವಿಕೆಟ್ ಮೇಲೆ ಭರ್ಜರಿಯಾಗಿ ಸಿಕ್ಸ್ ಎತ್ತಿದ ಧೋನಿಗೆ ಅಚ್ಚರಿ ಕಾದಿತ್ತು. [ಸಚಿನ್ ಸಾಲಿನಲ್ಲಿ ನಿಂತ ಶತಕ ವೀರ ಎಂಎಸ್ ಧೋನಿ]

Must-see video: MS Dhoni hits a massive SIX after umpire terms first one as 'dead ball'


ಅಂಪೈರ್ ಚೆಂಡನ್ನು 'ಡೆಡ್ ಬಾಲ್' ಎಂದು ಘೋಷಿಸಿ ಕೈ ಅಲ್ಲಾಡಿಸಿ ಬಿಟ್ಟರು. ಇದರಿಂದ ಅಭಿಮಾನಿಗಳಿಗೂ ಆಘಾತವಾಯಿತು.

ಕಾರಣ ಇಷ್ಟೇ, ಧೋನಿ ಹೊಡೆದ ಚೆಂಚು ಸ್ಪೈಡರ್ ಕ್ಯಾಮೆರಾಗೆ ಬಡಿದಿದ್ದು ಅಂಪೈರ್ ಕಣ್ಣಿಗೆ ಹೇಗೋ ಬಿದ್ದಿದೆ. ತಕ್ಷಣವೇ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಿದ್ದಾರೆ. [ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 2-0 ರಲ್ಲಿ ಸರಣಿ ಜಯ]

ಇದರಿಂದ ಸಹಜವಾಗಿ ಧೋನಿಗೂ ಕಿರಿಕಿರಿ ಎನಿಸಿರಬಹುದು. ಮುಂದಿನ ಎಸೆತವನ್ನು 100 ಮೀಟರ್ ಗೂ ಅಧಿಕ ದೂರಕ್ಕೆ ಅಟ್ಟಿ, ಸಿಕ್ಸರ್ ಎತ್ತಿದರು. ಬಿಸಿಸಿಐ ಈ ವಿಡಿಯೋ ಹಂಚಿಕೊಂಡಿದ್ದು, ಇಲ್ಲಿ ನೋಡಿ

ಕೊನೆಗೆ 10 ಬೌಂಡರಿ, ಅರ್ಧ ಡಜನ್ ಸಿಕ್ಸರ್ ಸಿಡಿಸಿ ತಮ್ಮ ವೃತ್ತಿ ಬದುಕಿನ 10ನೇ ಶತಕ ಸಿಡಿಸಿದರು. 2013ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದ ಧೋನಿ ಮತ್ತೊಮ್ಮೆ ಆರ್ಭಟಿಸಿದರು. ನಾಯಕತ್ವ ತೊರೆದ ಬಳಿಕ ಧೋನಿ ಬಾರಿಸಿದ ಮೊದಲ ಶತಕ ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Dhoni hits a massive SIX!
English summary
India's star batsman Mahendra Singh Dhoni is known for being a calm and composed cricketer but the fans witnessed his rage during second ODI against England at Cuttack on Thursday (January 19).
Please Wait while comments are loading...