ಭಾರತ ಸೋತಿದ್ದು ಸಂತೋಷವಾಗಿದೆ ಎಂದ ಬಾಂಗ್ಲಾ ಕ್ರಿಕೆಟಿಗ

Subscribe to Oneindia Kannada

ಮುಂಬೈ, ಏಪ್ರಿಲ್, 01: ಈ ಬಾಂಗ್ಲಾದೇಶದವರಿಗೆ ಅದು ಏನಾಗಿದೆಯೋ ಗೊತ್ತಿಲ್ಲ. ಹಿಂದೆ ಎಂಎಸ್ ಧೋನಿಯನ್ನು ಅವಹೇಳನ ಮಾಡಿದ್ದ ಬಾಂಗ್ಲಾದೇಶಿಗರು ಕ್ರಿಕೆಟ್ ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದರು. ಇದೀಗ ಉಗಿಸಿಕೊಳ್ಳುವ ಸರದಿ ಬಾಂಗ್ಲಾ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ಅವರದ್ದು.

ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲುತ್ತಿದ್ದಂತೆ ಬಾಂಗ್ಲಾ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ವಿವಾದಾತ್ಮಕ ಟ್ವೀಟ್ ಮಾಡಿದ್ದಲ್ಲದೇ ಟೀಕೆ ತಡೆಯಲಾಗದೆ ನಂತರ ಡಿಲೀಟ್ ಮಾಡಿದ್ದಾರೆ.[ವಿಶ್ವ ಟಿ20: ಟೀಂ ಇಂಡಿಯಾ ಸೋಲಿಸಿ, ಫೈನಲಿಗೆ ವಿಂಡೀಸ್ ಲಗ್ಗೆ]

bangladesh

ಕ್ರೀಡಾ ಸ್ಫೂರ್ತಿಯನ್ನು ಸಂಪೂರ್ಣವಾಗಿ ಮರೆತ ಬಾಂಗ್ಲಾ ವಿಕೆಟ್ ಕೀಪರ್ " ನಿಜವಾದ ಸಂತೋಷ ಅಂದರೆ ಇದು....ಹಾ ಹಾ ಹಾ, ಭಾರತ ಸೆಮಿಫೈನಲ್ ನಲ್ಲಿ ಸೋತಿತು.." ಎಂದು ಟ್ವಿಟ್ ಮಾಡಿದ್ದರು. ಎಂಎಸ್ ಧೋನಿ ಪಂದ್ಯದ ನಂತರ ಮಾತನಾಡುತ್ತಿದ್ದ ಟಿವಿ ಇಮೇಜ್ ನ್ನು ಇದಕ್ಕೆ ಸೇರಿಸಿ ಟ್ವೀಟ್ ಮಾಡಿದ್ದರು.[ಧೋನಿ ರುಂಡ ಹಿಡಿದು ಹುಚ್ಚಾಟವಾಡಿದ್ದವರಿಗೆ ಮಂಗಳಾರತಿ]

ಇದು ಕ್ಷಣ ಮಾತ್ರದಲ್ಲಿ ವೈರಲ್ ಆಗಿದೆ. ಭಾರತೀಯ ಅಭಿಮಾನಿಗಳು ಮುಶ್ಫಿಕರ್ ರಹೀಮ್ ತಿರುಗೇಟು ನೀಡಲು ಆರಂಭಿಸಿದ್ದಾರೆ. ಇದಾದ ಮೇಲೆ ಕ್ಷಮೆ ಕೇಳಿದ ರಹೀಮ್, ನಾನು ವೆಸ್ಟ್ ಇಂಡೀಸ್ ನ ದೊಡ್ಡ ಅಭಿಮಾನಿ, ನನ್ನ ಶಬ್ದಗಳಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ, ಆದರೆ ಅಷ್ಟು ಹೊತ್ತಿಗೆ ಎಲ್ಲವೂ ಆಗಿ ಹೋಗಿದೆ. ಬಾಂಗ್ಲಾ ವಿರುದ್ಧ ಭಾರತ ಗೆದ್ದಾಗ ಸುರೇಶ್ ರೈನಾ ರಹೀಮ್ ರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Rahim
English summary
Bangladesh wicketkeeper Mushfiqur Rahim forgot that cricket is a gentleman's game and displayed his unsporting behaviour last night (March 31) after India lost their ICC World Twenty20 semi-final to West Indies.
Please Wait while comments are loading...