ನೋಟಿಸ್ ಪಡೆದ ಮಾಲಿಂಗ ಈಗ ಐಪಿಎಲ್ ನಿಂದಲೇ ಔಟ್!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 18: ಶ್ರೀಲಂಕಾದ ಟಿ20 ತಂಡದ ಮಾಜಿ ನಾಯಕ, ಪ್ರಮುಖ ವೇಗಿ ಲಸಿತ್ ಮಾಲಿಂಗ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದರೂ ಆಡುವ ನಿಯೋಗ ಕೂಡಿ ಬರಲಿಲ್ಲ. ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ನೋಟಿಸ್ ಪಡೆದಿದ್ದ ಮಾಲಿಂಗ ಈಗ ಗಾಯದ ಸಮಸ್ಯೆಯಿಂದ ಐಪಿಎಲ್ ನಿಂದಲೇ ಔಟ್ ಆಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮಾಲಿಂಗ ಅವರು ಐಪಿಎಲ್ ಮೊದಲರ್ಧದಲ್ಲಿ ಆಡುವುದು ಅನುಮಾನವಾಗಿದೆ. ಆದರೆ, ಶೀಘ್ರದಲ್ಲೇ ತಂಡವನ್ನು ಸೇರಲಿದ್ದಾರೆ ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದರು.ಸ್ಲೋ ಯಾರ್ಕರ್ ಸ್ಪೇಷಲಿಸ್ಟ್ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಶ್ರೀಲಂಕಾದ ಲಸಿತ್ ಮಲಿಂಗಾ ಇನ್ನೇನು ಮುಂಬೈ ತಂಡಕ್ಕೆ ಮರಳಿದ್ದಾರೆ ಎನ್ನುವ ಖುಷಿಯಲ್ಲಿದ್ದ ಮುಂಬೈ ತಂಡಕ್ಕೆ ಭಾರಿ ಆಘಾತವಾಗಿದೆ.

ಆದರೆ, ಮಾಲಿಂಗ ಅವರ ವೈದ್ಯಕೀಯ ಪರೀಕ್ಷೆ ವರದಿಗಳು ಬಂದಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ಪಂದ್ಯಾವಳಿಯಲ್ಲಿ ಆಡಲು ಅನ್ ಫಿಟ್ ಎಂದು ಘೋಷಿಸಲಾಗಿದೆ.[ಮಾಲಿಂಗಗೆ ಶೋಕಾಸ್ ನೋಟಿಸ್!]

Mumbai Indians paceman Lasith Malinga ruled out of IPL 2016

ಗಾಯದ ಸಮಸ್ಯೆಯಿಂದ ಗುಣಮುಖರಾಗದ ಮಾಲಿಂಗ ಅವರು ಈಗ ಮುಂಬರುವ ಟೂರ್ನಿಗಳಾದ- ಶ್ರೀಲಂಕಾದ ಇಂಗ್ಲೆಂಡ್ ಪ್ರವಾಸ, ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲೂ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಮಾಲಿಂಗ ಅವರು ಎಡಕಾಲಿಗೆ ಗಾಯ ಮಾಡಿಕೊಂಡಿದ್ದು, ಸರ್ಜರಿ ಮಾಡಬೇಕೇ? ಬೇಡವೇ? ಎಂಬುದು ಕೂಡಾ ಇನ್ನೂ ನಿರ್ಧಾರವಾಗಿಲ್ಲ.

ಬಂದ ದಾರಿಗೆ ಸುಂಕ ವಿಲ್ಲ ಎಂಬಂತೆ ಮತ್ತೆ ಶ್ರೀಲಂಕಾಕ್ಕೆ ತೆರಳಲಿರುವ ಮಾಲಿಂಗ ಅವರಿಗೆ ಬುಧವಾರ (ಏಪ್ರಿಲ್ 20) ದಂದು ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ವರದಿ ಬಂದ ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲು ಪರಿಗಣಿಸಬಹುದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ. ಆದರೆ, ಐಪಿಎಲ್ ನಿಂದ ಮಾಲಿಂಗ ಔಟ್ ಆಗಿರುವುದು ಖಚಿತವಾಗಿರುವುದು ಅವರ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

ಐಪಿಎಲ್ ನಲ್ಲಿ 98 ಪಂದ್ಯವನ್ನಾಡಿರುವ ಮಾಲಿಂಗ 17.80 ಸರಾಸರಿಯಂತೆ 143 ವಿಕೆಟ್ ಪಡೆದಿದ್ದಾರೆ. ಕಳೆದ ಏಳು ಸೀಸನ್ ನಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಾ ಬಂದಿದ್ದಾರೆ.

ಏಷ್ಯಾಕಪ್ ನಲ್ಲಿ ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಲಂಕಾಕ್ಕೆ ಜಯ ತಂದುಕೊಟ್ಟ ಮಾಲಿಂಗ ಅವರು ವಿಶ್ವ ಟಿ20 ನಂತರ ನಿವೃತ್ತಿಯಾಗುವುದಾಗಿ ಘೋಷಿಸಿದ್ದು ನಿಮಗೆಲ್ಲ ತಿಳಿದಿರಬಹುದು.

ಐಪಿಎಲ್ ನಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅನುಮತಿ ಪಡೆಯಬೇಕಿತ್ತು. ಅನುಮತಿ ಇಲ್ಲದೆ ಭಾರತಕ್ಕೆ ಬಂದಿದ್ದ ಮಾಲಿಂಗಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Lanka pace spearhead Lasith Malinga has been ruled out of the ongoing Indian Premier League (IPL 9) after his franchise, Mumbai Indians' medical team found him unifit for at least another four months beacuse of an recurring knee injury.
Please Wait while comments are loading...