ಕ್ರಿಕೆಟ್: ಆಯ್ಕೆ ಸಮಿತಿ ಅಧ್ಯಕ್ಷರಾಗಿ ಎಂಎಸ್ ಕೆ ಪ್ರಸಾದ್

Posted By:
Subscribe to Oneindia Kannada

ಮುಂಬೈ, ಸೆ. 21: ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಕೆ ಪ್ರಸಾದ್ ರನ್ನು ಆಯ್ಕೆ ಮಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಆದೇಶ ಹೊರಡಿಸಿದೆ.

ಬಿಸಿಸಿಐ ಹೊಸ ಆಯ್ಕೆ ಸಮಿತಿ ನೇಮಿಸಿದ್ದು, ಪ್ರಸಾದ್ ಅವರು ಅಧ್ಯಕ್ಷರಾಗಿದ್ದಾರೆ. ದಕ್ಷಿಣ ವಲಯದಿಂದ ಈ ಬಾರಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಸಂದೀಪ್ ಪಾಟೀಲ್ ಅವರಿಂದ ತೆರವಾದ ಸ್ಥಾನದಲ್ಲಿ ಪ್ರಸಾದ್ ಕಾರ್ಯನಿರ್ವಹಿಸಲಿದ್ದಾರೆ.

41 ವರ್ಷ ವಯಸ್ಸಿನ ಪ್ರಸಾದ್ ಅವರು ಆಂಧ್ರಪ್ರದೇಶ ಮೂಲದವರಾಗಿದ್ದು, ಭಾರತದ ಪರ 6 ಟೆಸ್ಟ್ ಹಾಗೂ 17 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಕೇಂದ್ರ ವಲಯದಿಂದ ಗಗನ್ ಖೋಡಾ (ಒಂದು ಟೆಸ್ಟ್ ಪಂದ್ಯವನ್ನಾಡಿಲ್ಲ). ದೇವಾಂಗ್ ಗಾಂಧಿ, ಜತಿನ್ ಪರಾಂಜಪೆ ಹಾಗೂ ಸರಣ್ ದೀಪ್ ಸಿಂಗ್ ಅವರು ಆಯ್ಕೆ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ. ಪರಾಂಜಪೆ ಕೂಡಾ ಬರೀ ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದು, ಟೆಸ್ಟ್ ಪಂದ್ಯ ಆಡಿದ ಅನುಭವ ಹೊಂದಿಲ್ಲ.

ಕರ್ನಾಟಕದ ವೆಂಕಟೇಶ್ ಪ್ರಸಾದ್ ಅವರನ್ನು ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮುಂದುವರೆಯಲು ಬಿಸಿಸಿಐ ಸೂಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former India wicketkeeper-batsman MSK Prasad was on Wednesday (September 21) appointed by the BCCI as the chairman of the new selection committee of the Indian cricket team.
Please Wait while comments are loading...