35ನೇ ಜನುಮದಿನಕ್ಕೆ ಕಾಲಿಟ್ಟ ಧೋನಿಗೆ ಶುಭಾಶಯ ಹೇಳಿದ್ರಾ?

Written By:
Subscribe to Oneindia Kannada

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ 35 ನೇ ಹುಟ್ಟು ಹಬ್ಬದ ಸಂಭ್ರಮ. ಭಾರತ ಕ್ರಿಕೆಟ್ ತಂಡವನ್ನು ಮೂರು ಮಾದರಿಯಲ್ಲಿ ನಂಬರ್ 1 ಶ್ರೇಯಾಂಕಕ್ಕೆ ತಲುಪಿಸಿದ್ದ ರಾಂಚಿಯ ಹುಡುಗನಿಗೆ ಇಡೀ ಜಗತ್ತೆ ಶುಭಾಶಯ ಕೋರಿದೆ.

ಸಾಮಾಜಿಕ ತಾಣ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಅಭಿಮಾನಿಗಳು ವಿಶ್ವ ಕಂಡ ಶ್ರೇಷ್ಠ ಫಿನಿಶರ್ ಗೆ ನಮೋ ಎಂದಿದ್ದಾರೆ. ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಎಲ್ಲವನ್ನು ಎತ್ತಿ ಹಿಡಿದ ನಾಯಕ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.[ಸರಳತೆಗೆ ಮತ್ತೊಂದು ಹೆಸರು ಎಂಎಸ್ ಧೋನಿ]

ms dhoni

ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ #DhoniKaSaath ಟ್ರೆಂಡಿಂಗ್ ನಲ್ಲಿನೆ. ಅಸಂಖ್ಯ ಅಭಿಮಾನಿಗಳು ಧೋನಿ ಸಾಧನೆಯನ್ನು ಮೆಲುಕು ಹಾಕುತ್ತಾ ಇದ್ದಾರೆ. ಕ್ರಿಕೆಟ್ ಆಟಗಾರರು ಮಾತ್ರವಲ್ಲದೇ ಬಾಲಿವುಡ್ ದಿಗ್ಗಜರು ಧೋನಿಗೆ ಶುಭಾಶಯ ಸಲ್ಲಿಕೆ ಮಾಡಿದ್ದಾರೆ. ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್ ಜುಲೈ 7ನ್ನು ರಾಷ್ಟ್ರೀಯ ಹೆಲಿಕಾಪ್ಟರ್ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿಗೆ ನೀವು ವಿಷ್ ಮಾಡಿ...[324 ಪಂದ್ಯ: ರಿಕಿ ಪಾಂಟಿಂಗ್ ದಾಖಲೆ ಸಮಕ್ಕೆ ಎಂಎಸ್ ಧೋನಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's limited-overs skipper Mahendra Singh Dhoni is celebrating his 35th birthday on Thursday (July 7). Former Team India players, current team mates along with fans greeted Captain Cool on his birthday. As a result 'HappyBirthdayCaptainCool' is trending on micro-blogging site Twitter.
Please Wait while comments are loading...