'ಮ್ಯಾಚ್ ಫಿನಿಷರ್:' ಸಚಿನ್, ಕೊಹ್ಲಿಗಿಂತ ಧೋನಿಯೇ ಬೆಸ್ಟ್!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಟೀಂ ಇಂಡಿಯಾದ 'ರನ್ ಮಷಿನ್' ವಿರಾಟ್ ಕೊಹ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಸಮಕ್ಕೆ ನಿಂತಿರಬಹುದು. ಆದರೆ, ಸಚಿನ್ ಹಾಗೂ ಕೊಹ್ಲಿಗಿಂತ ಧೋನಿಯೇ ಬೆಸ್ಟ್ ಎನ್ನುತ್ತಿದೆ ಅಂಕಿ ಅಂಶ.

ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 154ರನ್ ಚೆಚ್ಚಿದರು. ಕೊಹ್ಲಿ ಆರ್ಭಟದಿಂದ ಕಿವೀಸ್ ವಿರುದ್ಧ ಭಾರತ 7 ವಿಕೆಟ್ ಗಳ ಜಯ ದಾಖಲಿಸಿದ್ದು ನೆನಪಿರಬಹುದು. [ಧೋನಿ ಈಗ 9 ಸಾವಿರ ರನ್ ಗಳ ಸರದಾರ]

ರನ್ ಚೇಸಿಂಗ್ ನಲ್ಲಿ 14 ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ಸಮಕ್ಕೆ ಕೊಹ್ಲಿ ನಿಂತಿದ್ದಾರೆ. ಅಲ್ಲದೆ ಚೇಸಿಂಗ್ ನಲ್ಲಿ 26 ಶತಕಗಳ ಪೈಕಿ ಬಹುತೇಕ ಜಯಮಾಲೆ ಧರಿಸಿದ್ದಾರೆ.[ವಿಶ್ವದಾಖಲೆ ಬರೆದ ಧೋನಿ 'ಮಿಂಚಿನ ಸ್ಟಂಪಿಂಗ್' ಸೂಪರ್!]

ಆದರೆ, ರನ್ ಚೇಸ್ ಮಾಡಿ ಜಯ ತಂದಿರುವ ಆಟಗಾರರ ಪೈಕಿ ಏಕದಿನ ತಂಡದ ನಾಯಕ ಎಂಎಸ್ ಧೋನಿ ಅವರು ಉತ್ತಮ ರನ್ ಸರಾಸರಿ ಹೊಂದಿದ್ದಾರೆ. [ಸಚಿನ್ ದಾಖಲೆ ಸಮಕ್ಕೆ ನಿಂತ ಕೊಹ್ಲಿ]

35 ವರ್ಷ ವಯಸ್ಸಿನ ಧೋನಿ ಅವರು ಕಿವೀಸ್ ವಿರುದ್ಧದ ಮೂರನೇ ಪಂದ್ಯದಲ್ಲೂ 80ರನ್ ಗಳಿಸಿ ಗೆಲುವಿಗೆ ಕೊಡುಗೆ ನೀಡಿದ್ದರು. ಧೋನಿ ಈ ಒಂದೇ ಪಂದ್ಯದಲ್ಲಿ ಮೂರು ದಾಖಲೆಗಳನ್ನು ಸರಿಗಟ್ಟಿದ್ದರು. [ಸಚಿನ್ 'ಸಿಕ್ಸರ್' ದಾಖಲೆ ಮುರಿದ ಧೋನಿ]

ತ್ವರಿತಗತಿಯಲ್ಲಿ ವಿಕೆಟ್ ಕೀಪರ್ ಆಗಿ ಹೆಚ್ಚು ಸ್ಟಂಪಿಂಗ್, ನಾಯಕನಾಗಿ ಹಾಗೂ ಆಟಗಾರನಾಗಿ ಹೆಚ್ಚು ಸಿಕ್ಸರ್ ಹಾಗೂ 9,000ರನ್ ಗಳಿಕೆ ದಾಖಲೆ ಬರೆದರು.

#1 ಎಂಎಸ್ ಧೋನಿ

#1 ಎಂಎಸ್ ಧೋನಿ

2005 ರಿಂದ 2016ರ ಅವಧಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಅವರು ಅವರು ರನ್ ಚೇಸಿಂಗ್ ನಲ್ಲಿ 88 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 62 ಇನ್ನಿಂಗ್ಸ್ ಆಡಿ 2428ರನ್ ಕಲೆ ಹಾಕಿದ್ದಾರೆ.

ಅಜೇಯ 183 ರನ್ ಗರಿಷ್ಠ ಮೊತ್ತದ ಜತೆಗೆ 101.86 ರನ್ ಸರಾಸರಿ ಹೊಂದಿದ್ದಾರೆ. ರನ್ ಚೇಸಿಂಗ್ ವೇಳೆ 16 ಅರ್ಧ ಶತಕ ಹಾಗೂ 2 ಶತಕ ಸಂಪಾದಿಸಿದ್ದಾರೆ.

#2 ವಿರಾಟ್ ಕೊಹ್ಲಿ

#2 ವಿರಾಟ್ ಕೊಹ್ಲಿ

27 ವರ್ಷ ವಯಸ್ಸಿನ ವಿರಾಟ್ ಕೊಹ್ಲಿಅವರು 26 ಏಕದಿನ ಕ್ರಿಕೆಟ್ ಶತಕಗಳನ್ನು ಕೇವಲ 174 ಪಂದ್ಯಗಳಲ್ಲಿ ಗಳಿಸಿದ್ದು ದಾಖಲೆಯಾಗಿದೆ. ರನ್ ಚೇಸ್ ವೇಳೆ 14 ಶತಕ ಬಾರಿಸಿದ್ದಾರೆ.

2008ರಿಂದ 2016ರ ತನಕ 62 ಪಂದ್ಯಗಳಲ್ಲಿ 3,514ರನ್ 59 ಇನ್ನಿಂಗ್ಸ್ ಗಳಲ್ಲಿ ಬಂದಿದೆ. ರನ್ ಸರಾಸರಿ 90.10. ಒಟ್ಟು 15 ಅರ್ಧಶತಕಗಳನ್ನು ಕೊಹ್ಲಿ ಬಾರಿಸಿದ್ದಾರೆ.

#3 ಎಬಿ ಡಿ ವಿಲಿಯರ್ಸ್

#3 ಎಬಿ ಡಿ ವಿಲಿಯರ್ಸ್

ದಕ್ಷಿಣ ಆಫ್ರಿಕಾದ ಏಕದಿನ ಕ್ರಿಕೆಟ್ ತಂಡದ ನಾಯಕ ಎಬಿ ಡಿ ವಿಲಿಯರ್ಸ್ ಅವರು 2005 ರಿಂದ 2016ರ ಅವಧಿಯಲ್ಲಿ 57 ಪಂದ್ಯಗಳಲ್ಲಿ 53 ಇನ್ನಿಂಗ್ಸ್ ಗಳಲ್ಲಿ 2,363ರನ್ ಕಲೆ ಹಾಕಿದ್ದು, 81.48ರನ್ ಸರಾಸರಿ ಹೊಂದಿದ್ದಾರೆ. ಅಜೇಯ 136 ರನ್ ಗರಿಷ್ಠ ಮೊತ್ತದೊಂದಿಗೆ 5 ಶತಕ ಗಳಿಸಿದ್ದಾರೆ.

#4 ಮೈಕಲ್ ಕ್ಲಾರ್ಕ್

#4 ಮೈಕಲ್ ಕ್ಲಾರ್ಕ್

ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು 2003 ರಿಂದ 2015ರ ಅವಧಿಯಲ್ಲಿ 2,142ರನ್ ಗಳನ್ನು 53 ಇನ್ನಿಂಗ್ಸ್ ಗಳಲ್ಲಿ ಕಲೆ ಹಾಕಿದ್ದಾರೆ. 73.86ರನ್ ಸರಾಸರಿ ಹೊಂದಿದ್ದು 17 ಅರ್ಧಶತಕ ಹಾಗೂ 3 ಶತಕ ಬಾರಿಸಿದ್ದಾರೆ. ರನ್ ಚೇಸ್ ವೇಳೆ ಅಜೇಯ 105 ಇವರ ಗರಿಷ್ಠ ಮೊತ್ತ.

#5 ಅರ್ಜುನ ರಣತುಂಗ

#5 ಅರ್ಜುನ ರಣತುಂಗ

ಶ್ರೀಲಂಕಾಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ನಾಯಕ ಅರ್ಜುನ ರಣತುಂಗ ಅವರು ಟಾಪ್ 5 ರನ್ ಸರಾಸರಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 1982 ರಿಂದ 1999 ರ ತನಕದ ಅವಧಿಯಲ್ಲಿ 62ಪಂದ್ಯಗಳನ್ನಾಡಿದ್ದು, ಎಡಗೈ ಬ್ಯಾಟ್ಸ್ ಮನ್ 56 ಇನ್ನಿಂಗ್ಸ್ ಗಳಿಂದ 2007ರನ್ ಗಳಿಸಿದ್ದಾರೆ. ಅಜೇಯ 131ರನ್ ಇವರ ಗರಿಷ್ಠ ಮೊತ್ತ. ರನ್ ಸರಾಸರಿ 69.20. ಒಂದು ಶತಕ ಹಾಗೂ 13 ಅರ್ಧಶತಕ ಬಾರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's batting masterclass Virat Kohli equalled 'Master Blaster' Sachin Tendulkar's record of hitting 14 ODI centuries batting second during 3rd ODI against New Zealand at Mohali on Sunday (October 23).
Please Wait while comments are loading...