ಸೋಲಿನ ಹೊಣೆ ಹೊತ್ತರೂ ಧೋನಿ ಕಿಚಾಯಿಸೋದು ನಿಂತಿಲ್ಲ!

Posted By:
Subscribe to Oneindia Kannada

ಬೆಂಗಳೂರು, ಜ.22: ಅತಿಥೇಯ ಆಸ್ಟೇಲಿಯಾ ವಿರುದ್ಧ ಸತತ ಮೂರು ಸೋಲು ಕಂಡು ಸರಣಿ ಕೈಗಿತ್ತ ಮೇಲೆ ಸೋಲಿಗೆ ನಾನೇ ಕಾರಣ ಎಂದು ಧೋನಿ ಒಪ್ಪಿಕೊಂಡಿದ್ದಾರೆ. ಆದರೆ, ಧೋನಿ ಕಾಲೆಳೆಯುವುದು, ಕಿಚಾಯಿಸುವುದು ಸಾಮಾಜಿಕ ಜಾಲ ತಾಣಗಳಲ್ಲಿ ನಿಂತಿಲ್ಲ.

ನಾಲ್ಕನೇ ಪಂದ್ಯದಲ್ಲಿ ಗೆಲ್ಲಲು 349ರನ್ ಗುರಿ ಇದ್ದರೂ ಭಾರತದ ಪರ ಶಿಖರ್ ಧವನ್ (126 ರನ್) ಹಾಗೂ ವಿರಾಟ್ ಕೊಹ್ಲಿ (106) ಶತಕ ಬಾರಿಸಿ ಗೆಲುವಿನ ಕನಸು ಹುಟ್ಟಿಸಿದರು. ಆದರೆ, ಇಬ್ಬರಲ್ಲಿ ಒಬ್ಬರಾದರೂ ಕೊನೆ ತನಕ ಉಳಿದಿದ್ದರೆ ಪಂದ್ಯದ ದಿಕ್ಕು ಬದಲಾಯಿಸಬಹುದಾಗಿತ್ತು.

349ರನ್ ಚೇಸ್ ಮಾಡುತ್ತಿದ್ದ ಟೀಂ ಇಂಡಿಯಾ 37 ಓವರ್ ನಲ್ಲಿ 277/1 ಸ್ಕೋರ್ ಮಾಡಿ ಸುಸ್ಥಿತಿಯಲ್ಲಿತ್ತು ಆದರೆ, ಅಂತಿಮವಾಗಿ 49.2 ಓವರ್ ಗಳಲ್ಲಿ 323 ಸ್ಕೋರಿಗೆ ಆಲೌಟ್ ಆಯಿತು. ಭಾರತ ವಿರುದ್ಧ ಸತತ ನಾಲ್ಕು ಪಂದ್ಯ ಗೆದ್ದ ಬಳಿಕ ಆಸ್ಟ್ರೇಲಿಯಾ ತನ್ನ ನೆಲದಲ್ಲಿ ಸತತ 19 ಗೆಲುವು ದಾಖಲೆ ಬರೆದಿದೆ.

ಪಂದ್ಯ ಸೋತಿದ್ದು ಬೇಸರವಿದೆ. ಅನುಭವಿಗಳು ಕೊನೆ ತನಕ ವಿಕೆಟ್ ಕಾಯ್ದುಕೊಳ್ಳಬೇಕಾಗಿತ್ತು. ನಮಗೆ ಗೆಲ್ಲುವ ಎಲ್ಲಾ ಅವಕಾಶಗಳಿತ್ತು ಎಂದು ಧೋನಿ ಹೇಳಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಟ್ರಾಲ್, ಮೀಮ್ಸ್ ಮುಂದಿವೆ ನೋಡಿ...

ಧೋನಿ ಜೊತೆ ಉಮೇಶ್ ಯಾದವ್ ಗೂ ಗೂಸಾ

ಧೋನಿ ಜೊತೆ ಉಮೇಶ್ ಯಾದವ್ ಗೂ ಗೂಸಾ

ಧೋನಿ ಜೊತೆ ಉಮೇಶ್ ಯಾದವ್ ಗೂ ಟ್ವೀಟ್, ಟ್ರಾಲ್ ಮೂಲಕ ಗೂಸಾ ನೀಡಲಾಗಿದೆ. ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಲು ಇವರಿಬ್ಬರೆ ಕಾರಣ ಎನ್ನಲಾಗಿದೆ.

ಯುವರಾಜ್ ಸಿಂಗ್ ಏನು ಕೇಳ್ತಾ ಇದ್ದಾರೆ ನೋಡಿ

ಯುವರಾಜ್ ಸಿಂಗ್ ಏನು ಕೇಳ್ತಾ ಇದ್ದಾರೆ ನೋಡಿ

ನಮ್ ನೆನಪು ಆಗಲಿಲ್ವ ಎಂದು ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ಕೇಳ್ತಾ ಇದ್ದಾರಂತೆ.

ಉಮೇಶ್ ಯಾದವ್ ರನ್ ಗಳಿಸಲು ಪರದಾಟ

ಉಮೇಶ್ ಯಾದವ್ ರನ್ ಗಳಿಸಲು ಪರದಾಟ

ಉಮೇಶ್ ಯಾದವ್ ರನ್ ಗಳಿಸಲು ಪರದಾಡಿ ಕೊನೆ ವೇಳೆಯಲ್ಲಿ ಜಡೇಜಗೆ ಸ್ಟ್ರೈಕ್ ಕೊಡದೆ ಇದ್ದಾಗ ಹುಟ್ಟಿದ ಟ್ರಾಲ್ ಇದು.

ಧೋನಿಗೆ ಕೊಹ್ಲಿ ಏನೋ ಹಿತವಚನ ನೀಡ್ತಾ ಇದ್ದಾರೆ

ಧೋನಿಗೆ ಕೊಹ್ಲಿ ಏನೋ ಹಿತವಚನ ನೀಡ್ತಾ ಇದ್ದಾರೆ

ಧೋನಿಗೆ ಕೊಹ್ಲಿ ಏನೋ ಹಿತವಚನ ನೀಡ್ತಾ ಇದ್ದಾರೆ, ನಾವು ಅದನ್ನೇ ಹೇಳ್ತಾ ಇದ್ವಿ ಎಂದು ಧವನ್ ಹೇಳಿದರಂತೆ

ಹೆಲ್ಮೆಟ್ ಅಂಪೈರ್ ಜಾನ್ ಬಗ್ಗೆ ಟ್ರಾಲ್

ಹೆಲ್ಮೆಟ್ ಅಂಪೈರ್ ಜಾನ್ ಬಗ್ಗೆ ಟ್ರಾಲ್

ಹೆಲ್ಮೆಟ್ ಅಂಪೈರ್ ಜಾನ್ ಬಗ್ಗೆ ಟ್ರಾಲ್ ಹೀಗಿದೆ

 ಮಠ ಚಿತ್ರದ ಡೈಲಾಗ್ ಬಳಸಿ ಟ್ರಾಲ್

ಮಠ ಚಿತ್ರದ ಡೈಲಾಗ್ ಬಳಸಿ ಟ್ರಾಲ್

ಮಠ ಚಿತ್ರದ ಡೈಲಾಗ್ ಬಳಸಿ ಟ್ರಾಲ್, 75 ಎಸೆತಗಳಲಿ 75 ರನ್ ಹೊಡೆಯೋಕೆ ಆಗಲ್ವ ಎಂದು ಪ್ರಶ್ನೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Captain MS Dhoni said he will take responsibility for defeat as India snatched defeat from the jaws of victory against Australia in the 4th One Day International here at the Manuka Oval on Wednesday (January 20). But, Dhoni and Umesh Yadav trolled on Social networking sites
Please Wait while comments are loading...