ಧೋನಿಗೆ ನನ್ನ ಕಾಲ್ ರಿಸೀವ್ ಮಾಡಲು ಟೈಂ ಇಲ್ಲ: ಯುವಿ

Posted By:
Subscribe to Oneindia Kannada

ನವದೆಹಲಿ, ಸೆ. 08: ಟೀಂ ಇಂಡಿಯಾದ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಅವರ ಹೊಚ್ಚ ಹೊಸ ಜವಳಿ ಬ್ರ್ಯಾಂಡ್ ಲೋಕಾರ್ಪಣೆ ಸುದ್ದಿ ಓದಿರುತ್ತೀರಿ. ಈ ಸಂಭ್ರಮ ಸಮಾರಂಭದಲ್ಲಿ ನಾಯಕ ಎಂಎಸ್ ಧೋನಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಯುವರಾಜ್ ನೀಡಿದ ಉತ್ತರ ಇಲ್ಲಿದೆ.

ಕಳೆದ ಭಾನುವಾರದಂದು ಯುವರಾಜ್ ಸಿಂಗ್ ಅವರು ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಗೆ ಚಾಲನೆ ನೀಡಿದರು. ಈ ಸಮಾರಂಭಕ್ಕೆ ಚಿತ್ರರಂಗ, ಕ್ರಿಕೆಟ್ ರಂಗದ ಗಣ್ಯಾತಿಗಣ್ಯರು ಆಗಮಿಸಿದ್ದರು. ಯುವರಾಜ್ ಸಿಂಗ್ ಗೆ ಶುಭಹಾರೈಸಲು ವೆಸ್ಟ್ ಇಂಡೀಸ್ ನಿಂದ ಕ್ರಿಸ್ ಗೇಲ್ ಹಾಗೂ ಡಿಜೆ ಬ್ರಾವೋ ಕೂಡಾ ಬಂದಿದ್ದರು. ಆದರೆ, ಧೋನಿ ಮಾತ್ರ ಕಾಣಿಸಲಿಲ್ಲ. [ಯುವರಾಜ್ ಸಿಂಗ್ ಹೊಸ ಬ್ರ್ಯಾಂಡ್ ಭರ್ಜರಿ ಓಪನಿಂಗ್]

MS Dhoni 'too busy' to pick up my calls: Yuvraj Singh

YWC ಫ್ಯಾಷನ್ ಬ್ರ್ಯಾಂಡ್ ಲೋಕಾರ್ಪಣೆಗಾಗಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಅರ್ಜುನ್ ರಾಮ್ ಪಾಲ್, ಫರ್ಹಾನ್ ಅಖ್ತರ್, ಕ್ರಿಸ್ ಗೇಲ್, ಡ್ವಾಯ್ನೆ ಬ್ರಾವೋ ಸೇರಿದಂತೆ ಕ್ರಿಕೆಟ್ ಆಟಗಾರರು ಬಂದಿದ್ದರು.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಧೋನಿ ಏಕೆ ಬರಲಿಲ್ಲ?: ಎಂಎಸ್ ಧೋನಿ ಅವರು ತುಂಬಾ ಬ್ಯುಸಿ ಇದ್ದರೆ ಎನಿಸುತ್ತದೆ. ನಾನು ಫೋನ್ ಕಾಲ್ ಮಾಡಿದರೂ ರಿಸೀವ್ ಮಾಡಿಲ್ಲ. ಅವರು ಎಲ್ಲಿದ್ದಾರೆ ಎಂದು ಹುಡುಕಿ ಸಾಕಾಗಿ ಹೋಗಿದೆ. ಅಮೆರಿಕದ ಟಿ20 ಆಟದ ನಂತರ ಯಾರಿಗೂ ಸಿಕ್ಕಿಲ್ಲ. ಅವರ ಶುಭ ಹಾರೈಕೆ ನನ್ನ ಈ ಪ್ರಯತ್ನದೊಂದಿಗೆ ಎಂದು ನಂಬಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಈ ರೀತಿ ಫೋನ್ ಕಾಲ್ ರಿಸೀವ್ ಮಾಡದೆ ಇರುವುದು ಧೋನಿಗೆ ಹೊಸ ಸಂಗತಿ ಏನಲ್ಲ. ಈ ಹಿಂದೆ ವಿವಿಎಸ್ ಲಕ್ಷ್ಮಣ್ ಕೂಡಾ ಧೋನಿ ಮೇಲೆ ಇದೇ ಆರೋಪ ಹೊರೆಸಿದ್ದರು. ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ತಮ್ಮ ಮಗನಿಗೆ ಅವಕಾಶ ನೀಡದೆ ವೃತ್ತಿ ಬದುಕನ್ನು ಧೋನಿ ಹಾಳುಗೆಡವಿದರು ಎಂದು ಅನೇಕ ಬಾರಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Celebrities lined-up to attend veteran India cricketer Yuvraj Singh's fashion line launch on Sunday (September 4) but everyone wondered why Team India skipper Mahendra Singh Dhoni was missing from the gala event.
Please Wait while comments are loading...