ಚೆನ್ನೈನಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಲಿದ್ದಾರೆ ಎಂಎಸ್

Posted By:
Subscribe to Oneindia Kannada

ಚೆನ್ನೈ, ಜುಲೈ 22 : ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ಸಂಜೆ 'ಸಿಕ್ಸರ್' 'ಸಿಕ್ಸರ್' ಎಂಬ ಘೋಷಣೆಗಳೇ ಮೊಳಗಲಿವೆ. ತಮಿಳುನಾಡು ಪ್ರೀಮಿಯರ್ ಲೀಗ್ 2017 ಆರಂಭವಾಗುವ ಮುನ್ನ ದಿಗ್ಗಜ ದಾಂಡಿಗರು ಚೆಂಡನ್ನು ಬೌಂಡರಿಯಾಚೆ ಅಟ್ಟಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಗೆ ಸ್ಟೈಲಾಗಿ ಮರುಸ್ವಾಗತ ಕೋರಿದ ಧೋನಿ

ಚೆಂಡನ್ನು ಬೌಂಡರಿಯಾಚೆಯಲ್ಲ ಮೈದಾನದಿಂದಲೇ ಆಚೆ ಅಟ್ಟುವುದರಲ್ಲಿ ನಿಸ್ಸೀಮರಾಗಿರುವ ಭಾರತದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಮುಂತಾದವರು ಸಿಕ್ಸರ್ ಸಿಡಿಸಲು ಬ್ಯಾಟನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ.

MS Dhoni to take part in six-hitting contest at TNPL

ಇಂಡಿಯಾ ಸಿಮೆಂಟ್ಸ್ ಆಯೋಜಿಸಿರುವ ಟಿಎನ್‌ಪಿಎಲ್ 2017 ಆರಂಭವಾಗುವ ಮುನ್ನ ನಡೆಯಲಿರುವ ಸಿಕ್ಸರ್ ಸ್ಪರ್ಧೆಯಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಮೋಹಿತ್ ಶರ್ಮಾ, ಬದರಿನಾಥ್, ಅನಿರುದ್ಧ ಶ್ರೀಕಾಂತ್, ಪವನ್ ನೇಗಿ, ಮುರಳಿ ವಿಜಯ್ ಮುಂತಾದವರು ಕೂಡ ಸಿಕ್ಸರ್ ಸಿಡಿಸಲಿದ್ದಾರೆ.

ಧೋನಿ ಹುಟ್ಟುಹಬ್ಬಕ್ಕೆ ಕೊಹ್ಲಿ, ಯುವಿ ಶುಭ ಹಾರೈಕೆ

ಸಂಜೆ 6 ಗಂಟೆಗೆ ಆರಂಭವಾಗಲಿರುವ ಸಿಕ್ಸರ್ ಸ್ಪರ್ಧೆಯಲ್ಲಿ ಯಾವುದೇ ಬೌಲರ್ ಗಳು ಭಾಗವಹಿಸುತ್ತಿಲ್ಲ. ಬದಲಾಗಿ ಬೌಲಿಂಗ್ ಮಷೀನ್ ಬ್ಯಾಟ್ಸ್ ಮನ್ ಗಳಿಗೆ ಸವಾಲು ಒಡ್ಡಲಿದೆ. ಯಾವ ದಾಂಡಿಗ ಎಷ್ಟು ಸಿಕ್ಸರ್ ಸಿಡಿಸಲಿದ್ದಾರೆ ಎಂದು ತಿಳಿಯಲು ಪ್ರೇಕ್ಷಕರು ಚಿದಂಬರಂ ಸ್ಟೇಡಿಯಂನಲ್ಲಿ ಜಮಾಯಿಸಲಿದ್ದಾರೆ.

ಸಿಕ್ಸರ್ ಸ್ಪರ್ಧೆಯ ನಂತರ 7.15ಕ್ಕೆ ಟಿಎನ್‌ಪಿಎಲ್ 2017ರ ಮೊದಲ ಪಂದ್ಯ ಆರಂಭವಾಗಲಿದೆ. ಡಿಫೆಂಡಿಂಗ್ ಚಾಂಪಿಯನ್ ಅಲ್ಬರ್ಟ್ ಟುಟಿ ಪ್ಯಾಟ್ರಿಯಟ್ಸ್ ಮತ್ತು ದಿಂಡಿಗಲ್ ಡ್ರಾಗನ್ ನಡುವೆ ಮೊದಲ ಪಂದ್ಯ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahendra Singh Dhoni will be taking part in six-hitting contest at TNPL 2017 at M Chidambaram stadium in Chennai on 22nd July. Former cricketer of Australia Mathew Hayden will also be hitting sixes in the event organized by India Cements.
Please Wait while comments are loading...