ಧೋನಿ ಬದುಕಿನ 'ಅನ್ ಟೋಲ್ಡ್ ಸ್ಟೋರಿ' ಟ್ರೇಲರ್ ವೈರಲ್

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 12: ಟೀಂ ಇಂಡಿಯಾದ ನಾಯಕ ಎಂಎಸ್ ಧೊನಿ ಜೀವನಾಧಾರಿತ 'ಅನ್ ಟೋಲ್ಡ್ ಸ್ಟೋರಿ ಟ್ರೇಲರ್' ಗುರುವಾರ ಬಿಡುಗಡೆಯಾಗಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಎಂ ಎಸ್ ಧೋನಿ ಪಾತ್ರವನ್ನು ನಿಭಾಯಿಸಿದ್ದಾರೆ. ಕೈರಾ ಅಡ್ವಾಣಿ ಸಾಕ್ಷಿ ಧೋನಿ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.[ಸರಳತೆಗೆ ಮತ್ತೊಂದು ಹೆಸರು ಎಂಎಸ್ ಧೋನಿ]

dhoni

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧೋನಿ ಟ್ರೇಲರ್ ಬಿಡಗಡೆ ಮಾಡಿದರು. ನಾನು ಒಂದು ದಾರಿಯಲ್ಲಿ ನಡೆದೆ, ಆ ಪ್ರಯಾಣವೇ ಜೀವನವಾಯಿತು ಎಂದು ಧೋನಿ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.[324 ಪಂದ್ಯ: ರಿಕಿ ಪಾಂಟಿಂಗ್ ದಾಖಲೆ ಸಮಕ್ಕೆ ಎಂಎಸ್ ಧೋನಿ]

ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಸಹ ಟ್ವೀಟ್ ಮಾಡುವ ಮೂಲಕ ಧೋನಿ ಜೀವನ ಆಧಾರಿಯ ಚಿತ್ರಕ್ಕೆ ಶುಭಾಶಯ ಕೋರಿದ್ದು ಅಪಾರ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಟ್ರೇಲರ್ ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The wait is finally over, the highly anticipated trailer of biopic over Team India's ODI skipper Mahendra Singh Dhoni has been released on Thursday (Aug 11). The trailer of MS Dhoni: The Untold Story was released by the filmmakers which became viral on social media.
Please Wait while comments are loading...