ಟಿ20 ಸರಣಿ ವೈಟ್ ವಾಶ್, ಧೋನಿರಿಂದ ಹೊಸ ದಾಖಲೆ

Posted By:
Subscribe to Oneindia Kannada

ಸಿಡ್ನಿ, ಫೆ. 01: ಮೂರು ಟಿ20 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಧೋನಿ ಪಡೆ ಹೊಸ ಇತಿಹಾಸ ಬರೆದಿದೆ. ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಮೊದಲ ಭಾರತೀಯ ನಾಯಕ ಎಂಬ ಕೀರ್ತಿಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನ (ಎಸ್ ಸಿಜಿ)ದಲ್ಲಿ ಭಾನುವಾರ (ಜನವರಿ 31) ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 198ರನ್ ಗಳ ದಾಖಲೆ ಗುರಿಯನ್ನು ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ದಾಟಿ ಜಯಭೇರಿ ಬಾರಿಸಿದೆ.[ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ]

ಈ ಮೂಲಕ ಮೂರು ಟಿ20 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಧೋನಿ ಪಡೆ ಹೊಸ ಇತಿಹಾಸ ಬರೆಯಿತು. ಇದಕ್ಕೂ ಮುನ್ನ ಅಡಿಲೇಡ್ ನಲ್ಲಿ 37ರನ್ ಹಾಗೂ ಮೆಲ್ಬೋರ್ನ್ ನಲ್ಲಿ 27ರನ್ ಗಳ ಅಂತರದ ಜಯ ದಾಖಲಿಸಿತ್ತು. . ಜೊತೆಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ.
3ನೇ ಟಿ 20 ಪಂದ್ಯದ ಸ್ಕೋರ್ ಕಾರ್ಡ್ | ಟಿ20 ಸರಣಿ ಪೂರ್ಣ ಫಲಿತಾಂಶ


MS Dhoni and Team India create history with 3-0 whitewash in Sydney

ಧೋನಿ ಈಗ ನಿರಾಳ: ಏಕದಿನ ಕ್ರಿಕೆಟ್ ಹಾಗೂ ಟಿ 20 ಕ್ರಿಕೆಟ್ ನ ಯಶಸ್ವಿ ನಾಯಕ ಧೋನಿ ಅವರು ಟಿ20 ಸರಣಿಗೂ ಮುನ್ನ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ, 34ವರ್ಷ ವಯಸ್ಸಿನ ಧೋನಿ ಅವರು ಈ ಸರಣಿ ಗೆಲ್ಲುವ ಮೂಲಕ ಮುಂಬರುವ ವಿಶ್ವಟಿ20 ಟೂರ್ನಿಗೆ ಟೀಂ ಇಂಡಿಯಾ ಸಿದ್ಧ ಎಂದು ಸಾರಿದ್ದಾರೆ. [ಸರಣಿ ಗೆದ್ದ ಧೋನಿ ಹುಡುಗರ ಸಂಭ್ರಮಾಚರಣೆ ಚಿತ್ರಗಳು]

ಕ್ರಿಕೆಟ್ ಇತಿಹಾಸದಲ್ಲೇ ಐಸಿಸಿ ಆಯೋಜನೆಯ ಮೂರು ಪ್ರಮುಖ ಟೂರ್ನಿಗಳನ್ನು ಗೆದ್ದ ಸಾಧನೆ ಧೋನಿ ಹೆಸರಿನಲ್ಲಿದೆ. 2007ರಲ್ಲಿ ವಿಶ್ವಟಿ20, 2011ರಲ್ಲಿ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಎತ್ತಿದ್ದರು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸತತ ಮೂರು ಅರ್ಧಶತಕಗಳ ಮೂಲಕ ಹಾಗೂ ಬೌಲರ್ ಗಳ ಪರಿಶ್ರಮದ ಸಾಧನೆಯಿಂದ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಕ್ಕೆ ತವರು ನೆಲದಲ್ಲಿ ವೈಟ್ ವಾಶ್ ಸೋಲಿನ ಕಹಿ ಉಣಿಸಲಾಗಿದೆ.

ಇದಕ್ಕೂ ಮುನ್ನ 2008ರಲ್ಲಿ ಆಸ್ಟ್ರೇಲಿಯಾದಲ್ಲಿ ಕಾಮನ್ ವೆಲ್ತ್ ಬ್ಯಾಂಕ್ ತ್ರಿಕೋನ ಏಕದಿನ ಸರಣಿ ಗೆದ್ದಿದ್ದೇ ಸಾಧನೆಯಾಗಿತ್ತು. ಈ ಟಿ20 ಸರಣಿ ವಿಜಯದೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು 4-4ರ ಸಮಬಲದಲ್ಲಿ ಭಾರತ ಅಂತ್ಯಗೊಳಿಸಿದೆ. ಏಕದಿನ ಸರಣಿಯನ್ನು ಭಾರತ 1-4ಅಂತರದಲ್ಲಿ ಕಳೆದುಕೊಂಡಿತ್ತು.(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mahendra Singh Dhoni on January 31 became the first Indian captain to achieve a clean sweep of a series against Australia in Australia.
Please Wait while comments are loading...