ಬೂಮ್ರಾ ಯಾರ್ಕರ್ ಚಾಲೆಂಜ್ ಗೆದ್ದ ಧೋನಿ

Posted By:
Subscribe to Oneindia Kannada

ಕಾನ್ಪುರ್, ಜನವರಿ 25: ವಿಶ್ವದ ಬೆಸ್ಟ್ ಮ್ಯಾಚ್ ಫಿನಿಶರ್ ಎನಿಸಿಕೊಂಡಿದ್ದ ಎಂಎಸ್ ಧೋನಿ ಅವರು 2016ರಲ್ಲಿ ಎರಡು ಬಾರಿ ಎಡವಿದ್ದು ಮರೆಯುವಂತಿಲ್ಲ. ಆದರೆ, ನಾಯಕತ್ವ ತೊರೆದ ಬಳಿಕ ಆಟಗಾರನಾಗಿ ಇಂಗ್ಲೆಂಡ್ ವಿರುದ್ಧ ಟಿ20ಯಲ್ಲಿ ಮಿಂಚಲು ಕಠಿಣ ಅಭ್ಯಾಸ ನಡೆಸಿರುವ ಧೋನಿ ಅವರು ಬೂಮ್ರಾರಿಂದ ಯಾರ್ಕರ್ ಚಾಲೆಂಜ್ ಎದುರಿಸಿದರು.

ಜನವರಿ 26ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕಾಗಿ ಅಭ್ಯಾಸ ನಡೆಸಿರುವ ಧೋನಿ ಅವರು ಬೂಮ್ರಾ ಅವರ ಯಾರ್ಕರ್ ಚಾಲೆಂಜ್ ಎದುರಿಸಿದ ಗೆದ್ದ ವಿಡಿಯೋ ತುಣುಕನ್ನು ಬಿಸಿಸಿಐ ಹಂಚಿಕೊಂಡಿದೆ.

Watch video: MS Dhoni takes Jasprit Bumrah's yorker challenge to perfect batting in death overs

ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳಲ್ಲಿ ಪಂದ್ಯ ಗೆಲ್ಲಿಸಿಕೊಡಲು ವಿಫಲರಾಗಿದ್ದು ಧೋನಿಯನ್ನು ಕಾಡಿದ್ದು ಸುಳ್ಳಲ್ಲ. ಹೀಗಾಗಿ ಹೆಚ್ಚಿನ ಪರಿಶ್ರಮ ಹಾಕಿ ಉತ್ತಮ ಫಲಿತಾಂಶ ನೀಡಲು ಧೋನಿ ಮುಂದಾಗಿದ್ದಾರೆ.

ಬೂಮ್ರಾ ಅವರಿಗೆ ಕೂಕಬೂರಾ ಚೆಂಡನ್ನು ವೈಡ್ ಯಾರ್ಕರ್ ಹಾಕುವಂತೆ ಸೂಚಿಸುತ್ತಾರೆ. ಅದರಂತೆ ಗುಜರಾತಿನ ಬೌಲರ್ ಎಸೆಯುತ್ತಾರೆ. ಧೋನಿ ಸುಲಭವಾಗಿ ಚೆಂಡನ್ನು ಆಫ್ ಸೈಡ್ ಕಡೆ ತಳ್ಳುತ್ತಾರೆ.


ಭಾರತ: ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ( ವಿಕೆಟ್ ಕೀಪರ್), ಕೆಎಲ್ ರಾಹುಲ್, ಮನ್ದೀಪ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಮನೀಶ್ ಪಾಂಡೆ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಆಶೀಶ್ ನೆಹ್ರಾ.

ಇಂಗ್ಲೆಂಡ್ : ಇಯಾನ್ ಮಾರ್ಗನ್(ನಾಯಕ), ಮೋಯಿನ್ ಅಲಿ, ಜೇಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಡಾಸನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಟಿಮಾಲ್ ಮಿಲ್ಸ್,ಲಿಯಾನ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World's best match finisher Mahendra Singh Dhoni saw his finishing skills on a decline when he failed to finish up things for the side on two occasions in 2016.
Please Wait while comments are loading...