ನಾಯಕನಾಗಿ ಧೋನಿ ಸಾಧಿಸಿದ ದಾಖಲೆಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 05: ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವಿ ನಾಯಕರ ಪೈಕಿ ಧೋನಿಯೇ ಕಿಂಗ್ ಎನಿಸಿಕೊಂಡಿದ್ದಾರೆ. ಹಾಲಿ ನಾಯಕರ ಪೈಕಿ ಧೋನಿ ಸಮಕ್ಕೆ ಯಾರೂ ಇಲ್ಲ. ಧೋನಿಗಿಂತ ಮೇಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದಾರೆ. ನಾಯಕನಾಗಿ ಧೋನಿ ಸಾಧಿಸಿದ ದಾಖಲೆಗಳತ್ತ ಒಂದು ನೋಟ ಇಲ್ಲಿದೆ

35 ವರ್ಷ ವಯಸ್ಸಿನ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಎಲ್ಲಾ ಮೂರು ಜಾಗತಿಕ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 2014ರ ಡಿಸೆಂಬರ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಧೋನಿ ಅವರು ಜನವರಿ 4ರಂದು ಏಕದಿನ ಹಾಗೂ ಟಿ20 ನಾಯಕತ್ವ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಜನವರಿ 15ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ನಂತರದ ಟಿ20ಐ ಸರಣಿಗೆಯಲ್ಲಿ ಬ್ಯಾಟ್ಸ್ ಮನ್ ಆಗಿ ಧೋನಿ ಕಣಕ್ಕಿಳಿಯಲಿದ್ದಾರೆ. ಶುಕ್ರವಾರದಂದು ಈ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

2007ರಲ್ಲಿ ವಿಶ್ವ ಟ್ವೆಂಟಿ20, 2011ರಲ್ಲಿ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದರು. 2014ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಧೋನಿ ಅವರು 2007ರಿಂದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಟೆಸ್ಟ್ ತಂಡವನ್ನು ಅಗ್ರಸ್ಥಾನಕ್ಕೇರಿಸಿದ್ದ ಧೋನಿ ಸಾಧನೆ ಬಗ್ಗೆ ಮುಂದೆ ಓದಿ...

ಮೂರು ಮಾದರಿಯಲ್ಲೂ ಯಶಸ್ವಿ ನಾಯಕ

ಮೂರು ಮಾದರಿಯಲ್ಲೂ ಯಶಸ್ವಿ ನಾಯಕ

2007ರಲ್ಲಿ ವಿಶ್ವ ಟ್ವೆಂಟಿ20, 2011ರಲ್ಲಿ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದರು. ಮೂರು ಮಾದರಿಯಲ್ಲೂ ಐಸಿಸಿ ಆಯೋಜನೆಯ ಕಪ್ ಎತ್ತ್ತಿರುವ ಏಕೈಕ ನಾಯಕರಾಗಿದ್ದಾರೆ.

ಭಾರತದ ಯಶಸ್ವಿ ಕ್ಯಾಪ್ಟನ್

ಭಾರತದ ಯಶಸ್ವಿ ಕ್ಯಾಪ್ಟನ್

60 ಟೆಸ್ಟ್ ಪಂದ್ಯಗಳಲ್ಲಿ 27 ಗೆಲುವು, 199 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 110ರಲ್ಲಿ ಗೆಲುವು, 74 ಸೋಲು (4 ಟೈ, 11 ಫಲಿತಾಂಶವಿಲ್ಲ), 72 ಟ್ವೆಂಟಿ20 ಪಂದ್ಯಗಳಲ್ಲಿ 42 ಗೆಲುವು, 28 ಸೋಲು(2 ಫಲಿತಾಂಶವಿಲ್ಲ).

ಧೋನಿ ವಿಶ್ವದಾಖಲೆ

ಧೋನಿ ವಿಶ್ವದಾಖಲೆ

ಒಟ್ಟಾರೆ 331 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಅತಿ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ವಿಶ್ವದಾಖಲೆ ಬರೆದಿದ್ದಾರೆ. ಧೋನಿ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಇದ್ದು, 324 ಪಂದ್ಯಗಳಲ್ಲಿ ನಾಯಕರಾಗಿದ್ದರು.

ಭಾರತೀಯ ನಾಯಕನಾಗಿ ಕೂಡಾ ದಾಖಲೆ

ಭಾರತೀಯ ನಾಯಕನಾಗಿ ಕೂಡಾ ದಾಖಲೆ

331 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಧೋನಿ, ಭಾರತೀಯ ನಾಯಕನಾಗಿ ಕೂಡಾ ದಾಖಲೆ ಹೊಂದಿದ್ದಾರೆ. ಸೌರವ್ ಗಂಗೂಲಿ, ಮೊಹಮ್ಮದ್ ಅಜರುದ್ದೀನ್ ಅವರು ನಂತರದ ಸ್ಥಾನದಲ್ಲಿದ್ದಾರೆ.

ಗೆಲುವಿನ ಸರಾಸರಿಯಲ್ಲಿ ಮುಂದು

ಗೆಲುವಿನ ಸರಾಸರಿಯಲ್ಲಿ ಮುಂದು

ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಗೆಲುವಿನ ಸರಾಸರಿ ಕ್ರಮವಾಗಿ 59.57% ಹಾಗೂ 59.28% ನಷ್ಟಿದೆ. ಟೆಸ್ಟ್ ನಲ್ಲಿ 45%ರಷ್ಟು ಗೆಲುವಿನ ಸರಾಸರಿಯಂತೆ 27 ಪಂದ್ಯಗಳನ್ನು ಗೆದ್ದಿದ್ದಾರೆ.

ಟೆಸ್ಟ್ ನಲ್ಲಿ ಅಗ್ರಸ್ಥಾನಕ್ಕೇರಿದ ತಂಡ

ಟೆಸ್ಟ್ ನಲ್ಲಿ ಅಗ್ರಸ್ಥಾನಕ್ಕೇರಿದ ತಂಡ

ಧೋನಿ ಅವರು ನಾಯಕನಾಗಿ ಟೀಂ ಇಂಡಿಯಾವನ್ನು 2009ರಲ್ಲಿ ಅಗ್ರಸ್ಥಾನಕೇರಿಸಿದ್ದರು. ಇಂಗ್ಲೆಂಡ್ ವಿರುದ್ಧ ಸೋಲು ಕಾಣುವ ತನಕ 11 ತಿಂಗಳುಗಳ ಕಾಲ ಅಗ್ರಸ್ಥಾನದಲ್ಲೇ ತಂಡ ಮುಂದುವರೆಯಿತು.

8 ಉಭಯ ದೇಶಗಳ ಸರಣಿ ಗೆಲುವು

8 ಉಭಯ ದೇಶಗಳ ಸರಣಿ ಗೆಲುವು

8 ಉಭಯ ದೇಶಗಳ ಏಕದಿನ ಸರಣಿ ಗೆಲುವು ಕಂಡಿರುವ ಧೋಣಿ ಅವರು ಬಾಂಗ್ಲಾದೇಶ ವಿರುದ್ಧ ಮಾತ್ರ ಸರಣಿ ಗೆಲುವಿನ ರುಚಿ ಕಂಡಿಲ್ಲ. ರಿಕಿ ಪಾಂಟಿಂಗ್ ಅವರು 9 ಉಭಯ ದೇಶಗಳ ನಡುವಿನ ಸರಣಿ ಗೆದ್ದು ಅಗ್ರಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ಸರಾಸರಿ

ಬ್ಯಾಟಿಂಗ್ ಸರಾಸರಿ

ನಾಯಕನಾಗಿ ಎಂಎಸ್ ಧೋನಿ ಅವರ ಬ್ಯಾಟಿಂಗ್ ರನ್ ಸರಾಸರಿ ಏಕದಿನದಲ್ಲಿ 70.83ರಷ್ಟಿದೆ. 1000 ರನ್ ಗಳಿಗೂ ಅಧಿಕ ಸ್ಕೋರ್ ಮಾಡಿರುವ ನಾಯಕರ ಪೈಕಿ ಇದು ಅಧಿಕ ರನ್ ಸರಾಸರಿಯಾಗಿದೆ. ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಹಾಗೂ ಸಚಿನ್ ತೆಂಡೂಲ್ಕರ್ ಅವರು ಮಾತ್ರ ಧೋನಿಗಿಂತ ಮೇಲಿದ್ದಾರೆ.

ಅತಿ ಹೆಚ್ಚು ಸಿಕ್ಸರ್

ಅತಿ ಹೆಚ್ಚು ಸಿಕ್ಸರ್

ನಾಯಕರಾಗಿ ಧೋನಿ ಅವರು ಏಕದಿನ ಪಂದ್ಯಗಳಲ್ಲಿ 126 ಸಿಕ್ಸ್ ಸಿಡಿಸಿದ್ದಾರೆ. ಇದು ನಾಯಕರೊಬ್ಬರು ಗಳಿಸಿದ ಅತ್ಯಧಿಕ ಸಂಖ್ಯೆ. ಆಟಗಾರನಾಗಿ ಒಟ್ಟಾರೆ 197 ಸಿಕ್ಸ್ ಬಾರಿಸಿದ್ದು, ಇದು ಕೂಡಾ ಭಾರತೀಯ ದಾಖಲೆಯಾಗಿದೆ.

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಾಯಕನಾಗಿ

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಾಯಕನಾಗಿ

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಾಯಕನಾಗಿ 6633ರನ್ ಗಳಿಸಿದ್ದು ಈ ವಿಭಾಗದಲ್ಲಿ ಅತಿ ಹೆಚ್ಚು ರನ್ ಗಳಿಕೆಯಾಗಿದೆ. 152 ಸ್ಟಂಪಿಂಗ್ ಮಾಡಿರುವ ಧೋನಿ ಅವರು ದಾಖಲೆ ನಿರ್ಮಿಸಿದ್ದಾರೆ.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Captain Cool' Mahendra Singh Dhoni stumped every cricket fan on Wednesday (Jan 4) with his decision to step down as India's limited overs skipper.Here are some important captaincy records of MS Dhoni.
Please Wait while comments are loading...