ಧೋನಿ ನಿವೃತ್ತಿ: ಅಚ್ಚರಿ, ಆಘಾತ ವ್ಯಕ್ತಪಡಿಸಿದ ಟ್ವೀಟ್ ಲೋಕ

Posted By:
Subscribe to Oneindia Kannada

ಬೆಂಗಳೂರು, ಜನವರಿ 04: ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಏಕದಿನ ಕ್ರಿಕೆಟ್ ಹಾಗೂ ಟಿ20 ತಂಡದ ನಾಯಕತ್ವವನ್ನು ತೊರೆದ ಸುದ್ದಿ ಬರುತ್ತಿದ್ದಂತೆ ಅಭಿಮಾನಿಗಳಿಗೆ ಆಘಾತವಾಗಿದೆ. ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟರ್ಸ್ ಗಳು, ಕಾಮೆಂಟೆಟರ್ಸ್ ಕೂಡಾ ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

35 ವರ್ಷ ವಯಸ್ಸಿನ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಎಲ್ಲಾ ಮೂರು ಜಾಗತಿಕ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದನ್ನು ಮರೆಯುವಂತಿಲ್ಲ. [ನಾಯಕತ್ವಕ್ಕೆ ಗುಡ್ ಬೈ ಹೇಳಿದ ಧೋನಿ]

2007ರಲ್ಲಿ ವಿಶ್ವ ಟ್ವೆಂಟಿ20, 2011ರಲ್ಲಿ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದರು. 2014ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಧೋನಿ ಅವರು 2007ರಿಂದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಈಗ ನಾಯಕತ್ವ ತೊರೆದರೂ ಆಟಗಾರನಾಗಿ ತಂಡದಲ್ಲಿ ಮುಂದುವರೆಯಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳಿಗೆ ಶುಕ್ರವಾರದಂದು ಬಿಸಿಸಿಐ ತಂಡವನ್ನು ಪ್ರಕಟಿಸಲಿದೆ. ಜನವರಿ 15 ರಂದು ಪುಣೆಯಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ಕೊಹ್ಲಿ ನಾಯಕತ್ವದಲ್ಲಿ ಧೋನಿ ಆಟ ನೋಡಲು ಕ್ರಿಕೆಟ್ ಲೋಕ ಕಾದಿದೆ..ಧೋನಿ ಅವರ ನಿವೃತ್ತಿ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ ನೋಡಿ...

ನಿವೃತ್ತಿ ಬಗ್ಗೆ ಬಂದಿರುವ ಪ್ರತಿಕ್ರಿಯೆ

ನಿವೃತ್ತಿ ಬಗ್ಗೆ ಬಂದಿರುವ ಪ್ರತಿಕ್ರಿಯೆ

ಕೊಹ್ಲಿ ನಾಯಕತ್ವದಲ್ಲಿ ಧೋನಿ ಆಟ ನೋಡಲು ಕ್ರಿಕೆಟ್ ಲೋಕ ಕಾದಿದೆ..ಧೋನಿ ಅವರ ನಿವೃತ್ತಿ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ ನೋಡಿ..

ಬಿಸಿಸಿಐನಿಂದ ಪ್ರಕಟಣೆ

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಏಕದಿನ ಕ್ರಿಕೆಟ್ ಹಾಗೂ ಟಿ20 ತಂಡದ ನಾಯಕತ್ವವನ್ನು ತೊರೆದಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿತು. ಜತೆಗೆ ಧೋನಿ ಅವರು ಇಂಗ್ಲೆಂಡ್ ಸರಣಿಗೆ ಆಟಗಾರರಾಗಿ ಲಭ್ಯರಾಗಿದ್ದಾರೆ ಎಂದು ಹೇಳಿದೆ

ಧೋನಿ ನಿವೃತ್ತಿ ಬಗ್ಗೆ ಐಸಿಸಿ

ಧೋನಿ ನಿವೃತ್ತಿ ಬಗ್ಗೆ ಐಸಿಸಿ ಟ್ವೀಟ್ ಮಾಡಿ, 199 ಎಕದಿನ ಪಂದ್ಯ 72ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ ಧೋನಿ ಎಂದಿದೆ.

ಅನುರಾಗ್ ಠಾಕೂರ್ ಪ್ರತಿಕ್ರಿಯೆ

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಾಗಿದ್ದ ನೀವು, ಭಾರತದ ಕೀರ್ತಿ ಪತಾಕೆಯನ್ನು ಎತ್ತರೆತ್ತರಕ್ಕೆ ಹಾರಿಸಿದ್ದೀರಿ, ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಹರ್ಷ ಭೋಗ್ಲೆ

ಕ್ರಿಕೆಟ್ ಕಾಮೆಂಟೆಟರ್ ಹರ್ಷ ಬೋಗ್ಲೆ ಅವರು ಪ್ರತಿಕ್ರಿಯೆ ನೀಡಿ, ವಿಶ್ವಟಿ20, ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ನಂ.1 ಟೆಸ್ಟ್ ತಂದ, ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಎಲ್ಲಕ್ಕೂ ನೀವೇ ಅಧಿಪತಿ ಎಂದಿದ್ದಾರೆ.

ಮೆನನ್ ಅಂಕಿ ಅಂಶ ಹೀಗಿದೆ

ಧೋನಿ 331 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಇದು ವಿಶ್ವದಾಖಲೆ, 72 ಟಿ20 ಪಂದ್ಯಗಳಿಗೆ ನಾಯಕರಾಗಿದ್ದು ಕೂಡಾ ದಾಖಲೆ, ಮಿಕ್ಕಂತೆ ಧೋನಿ ಸ್ಥಾನದಲ್ಲಿದ್ದಾರೆ ನೋಡಿ

ಸುಶಾಂತ್ ಸಿಂಗ್ ಪ್ರತಿಕ್ರಿಯೆ

ಧೋನಿ ಚಿತ್ರದಲ್ಲಿ ಧೋನಿ ಪಾತ್ರದಲ್ಲಿ ನಟಿಸಿದ್ದ ಸುಶಾಂತ್ ಸಿಂಘ್ ಅವರು ಧೋನಿಯನ್ನು ಹೊಗಳಿದ್ದು ಹೀಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking announcement ahead of the series against England, Mahendra Singh Dhoni has stepped down as India's limited overs captain on Wednesday (Jan 4).Here's how Twitterati reacted on Dhoni's surprise decision.
Please Wait while comments are loading...