ಧೋನಿ ಐಪಿಎಲ್ ದಾಖಲೆಗೆ ಸರಿಸಾಟಿ ಯಾರೂ ಇಲ್ಲ!

Posted By:
Subscribe to Oneindia Kannada

ಮುಂಬೈ, ಮೇ 17:ಎಂಎಸ್ ಧೋನಿ ಅವರು ಈ ಬಾರಿ ಐಪಿಎಲ್ ನಲ್ಲಿ ಸಾಮಾನ್ಯ ಆಟಗಾರನಾಗಿ ಕಾಣಿಸಿಕೊಂಡಿದ್ದರೂ ತಮ್ಮ ಛಾಪು ಮೂಡಿಸುವಲ್ಲಿ ಸಫಲರಾಗಿದ್ದಾರೆ. ಏಳನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿರುವ ಧೋನಿ ದಾಖಲೆಗೆ ಸರಿಸಾಟಿ ಯಾರೂ ಇಲ್ಲ.[ಸ್ಕೋರ್ ಕಾರ್ಡ್]

ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ, ಪ್ಲೇ ಆಫ್ ಹಂತಕ್ಕೇರಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಮಂಗಳವಾರ (ಮೇ 16) ರಾತ್ರಿ ಬಗ್ಗು ಬಡಿದ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.

MS Dhoni in seventh heaven with another IPL record

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 26 ಎಸೆತಗಳಲ್ಲಿ 40 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದ ಧೋನಿ ಅವರು ನಾಯಕ ಸ್ಮಿತ್ ಅವರಿಗೆ ಇಲ್ಲಿ ತನಕ ನೆರವಾದ ರೀತಿ ಈಗ ತಂಡವನ್ನು ಈ ಹಂತಕ್ಕೆ ತಂದಿದೆ.[ಧೋನಿಯ ಬೆಸ್ಟ್ ಫಿನಿಷಿಂಗ್ ಮ್ಯಾಚ್ ಗಳು]

ಪುಣೆ ತಂಡ ಮೇ 21ರಂದು ಹೈದರಾಬಾದಿನಲ್ಲಿ ಫೈನಲ್ ಪಂದ್ಯವಾಡಲು ಸಜ್ಜಾಗುತ್ತಿದೆ. ಇತ್ತ ಮುಂಬೈ ತಂಡ ಬೆಂಗಳೂರಿಗೆ ತೆರಳಲಿದ್ದು ಎರಡನೇ ಕ್ವಾಲಿಫೈಯರ್ ನಲ್ಲಿ ಆಡಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದೆ.

ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಮೇ 17) ತಂಡಗಳು ಬುಧವಾರ ಸೆಣೆಸಲಿದ್ದು, ಈ ಪಂದ್ಯದ ವಿಜೇತರು ಮುಂಬೈ ವಿರುದ್ಧ ಆಡಬೇಕಿದೆ.

ಧೋನಿ ದಾಖಲೆ:

ಐಪಿಎಲ್ 10ನೇ ವರ್ಷದ ಸಂಭ್ರಮದಲ್ಲಿದೆ. ಧೋನಿ ಅವರಿಗೆ ಇದು 7ನೇ ಐಪಿಎಲ್ ಫೈನಲ್. ಈ ಮುಂಚೆ ಎಲ್ಲಾ 6 ಐಪಿಎಲ್ ಫೈನಲ್ ಗಳನ್ನು ನಾಯಕನಾಗಿ ಪ್ರವೇಶಿಸಿದ್ದರು. ಧೋನಿ ಬಿಟ್ಟರೆ,ಚೆನ್ನೈ ಸೂಪರ್ ಕಿಂಗ್ಸ್ ನ ಮತ್ತೊಬ್ಬ ಪ್ರಮುಖ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು 6 ಐಪಿಎಲ್ ಫೈನಲ್ ಕಂಡಿದ್ದಾರೆ.

2008 - ಚೆನ್ನೈ ಸೂಪರ್ ಕಿಂಗ್ಸ್ (ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು)
2010 - ಚೆನ್ನೈ ಸೂಪರ್ ಕಿಂಗ್ಸ್ (ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು)
2011 - ಚೆನ್ನೈ ಸೂಪರ್ ಕಿಂಗ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು)
2012 - ಚೆನ್ನೈ ಸೂಪರ್ ಕಿಂಗ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು)
2013 - ಚೆನ್ನೈ ಸೂಪರ್ ಕಿಂಗ್ಸ್ (ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು)
2015 - ಚೆನ್ನೈ ಸೂಪರ್ ಕಿಂಗ್ಸ್ (ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು)
2017 - ರೈಸಿಂಗ್ ಪುಣೆ ಸೂಪರ್ ಜೈಂಟ್

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahendra Singh Dhoni added another record to his name when he and Rising Pune Supergiant (RPS) reached the Indian Premier League (IPL) 2017 final here tonight (May 16)
Please Wait while comments are loading...